ಅಮ್ಮ ಅಡುಗೆ ಮಾಡುವಾಗ ಇವ್ರು ಆ್ಯಂಕರಿಂಗ್ ಮಾಡ್ತಿದ್ರು…! ಸೌಟು, ಲಟ್ಟಣಿಗೆಯೇ ಮೈಕು…!

Date:

ಯಾರು ಯಾವುದರಿಂದ ಸ್ಪೂರ್ತಿ ಪಡೀತಾರೆ ಅಂತ ಹೇಳೋಕ್ಕಾಗಲ್ಲ…! ಅವರಂತೆ ಆಗ್ಬೇಕು, ಹೀಗೆ ಆಗ್ಬೇಕು ಅಂತ ಕನಸು ಕಾಣೋದು ದೊಡ್ಡದಲ್ಲ. ಕಂಡ ಕನಸನ್ನು ನನಸು ಮಾಡಿಕೊಳ್ಳೋದು ದೊಡ್ಡ ಸವಾಲೇ ಸರಿ. ಅದರಲ್ಲೂ ಬಾಲ್ಯದ ಕನಸು ಸಾಕಾರಗೊಳಿಸಿಕೊಳ್ಳೋದು ಅಷ್ಟು ಸುಲಭವಲ್ಲ. ಚಿಕ್ಕಂದಿನಲ್ಲಿ ಕಂಡ ಕನಸುಗಳು ಬೆಳಿತಾ ಬೆಳಿತಾ ಬದಲಾಗ ಬಹುದು…! ಬಾಲ್ಯದಲ್ಲಿ ನಾವು ಏನೋ ಆಗ್ಬೇಕು ಅಂತ ಅನ್ಕೊಂಡಿರ್ತೀವಿ. ದೊಡ್ಡವರಾದ ಮೇಲೆ ನಮ್ಮ ಗುರಿಯೇ ಬದಲಾಗಿರುತ್ತೆ. ಆದ್ರೆ, ಶಿಲ್ಪ ಐಯ್ಯರ್ ಎಲ್ಲರಂತಲ್ಲ…! ಚಿಕ್ಕಂದಿನಿಂದಲೂ ಒಂದೇ ಗುರಿ… ಆ ದಿನಗಳಿಂದಲೂ ಅದರದ್ದೇ ಜಪ…! ಕೊನೆಗೂ ಗುರಿ ತಲುಪಿದ ಛಲವಾದಿ ಚೆಲುವೆ.

ನಿವೃತ್ತ ಕೇಂದ್ರ ಸರ್ಕಾರಿ ಉದ್ಯೋಗಿ ಸೂರ್ಯನಾರಯಣ್ ಹಾಗೂ ಶಾಲಿನಿ ದಂಪತಿಯ ಸುಪತ್ರಿ ಶಿಲ್ಪ ಐಯ್ಯರ್. ಇವರ ಅಣ್ಣ ಅವಿನಾಶ್ ಐಯ್ಯರ್, ಅಕ್ಕ ಅಶ್ವಿನಿ ಐಯ್ಯರ್.


ಪದ್ಮನಾಭನಗರದ ಪ್ರತಿಭಾ ಬಾಲಮಂದಿರದಲ್ಲಿ ಪ್ರಾಥಮಿಕ, ರಾಜಾಜಿನಗರದ ವಾಣಿ ವಿಲಾಸದಲ್ಲಿ ಪ್ರೌಢಶಿಕ್ಷಣ, ಬಿಇಎಸ್ ಕಾಲೇಜಿನಲ್ಲಿ ಪಿಯುಸಿ, ಶೇಷಾದ್ರಿಪುರಂ ಕಾಲೇಜಿನಲ್ಲಿ ಬಿಕಾಂ ಪದವಿಯನ್ನು ಪಡೆದಿರುವ ಶಿಲ್ಪ ಐಯ್ಯರ್ ಒಳ್ಳೆಯ ಗಾಯಕಿ, ಡ್ಯಾನ್ಸರ್ ಕೂಡ ಹೌದು.


ಶಾಲೆ ಬಿಟ್ಟಮೇಲೆ ಫ್ರೆಂಡ್ಸ್ ಆಟ ಆಡ್ತಿದ್ರೆ ಶಿಲ್ಪ ಮನೆಗೆ ಬಂದು ಬಿಡ್ತಿದ್ರು. ಇವರು ಆಡ್ತಿದ್ದ ಆಟವೇ ‘ಆ್ಯಂಕರಿಂಗ್’…! ಟಿವಿಯಲ್ಲಿ ಬರ್ತಿದ್ದ ಅಡುಗೆ ಕಾರ್ಯಕ್ರಮಗಳನ್ನು ನೋಡ್ತಾ ನೋಡ್ತಾ ತಾನು ನಿರೂಪಕಿ ಆಗ್ಬೇಕು ಅಂತ ಕನಸು ಕಾಣಲಾರಂಭಿಸಿದ್ರು. 6ನೇ ತರಗತಿಯಿಂದಲೇ ತನ್ನಷ್ಟಕ್ಕೆ ತಾನೇ ನಿರೂಪಣೆ ಪ್ರಾಕ್ಟಿಸ್ ಮಾಡಿದ್ರು…! ಅಮ್ಮ ಅಡುಗೆ ಮಾಡುವಾಗ ಲಟ್ಟಣಿಗೆ ಅಥವಾ ಸೌಟು ಇಟ್ಕೊಂಡು ನಿರೂಪಕರಂತೆ ಮಾತಾಡೋದನ್ನು, ಅಡುಗೆ ಕಾರ್ಯಕ್ರಮದ ನಿರೂಪಣೆ ಮಾಡೋದನ್ನು ಮಾಡಿದ್ರು…!

ಅಪ್ಪ ಆಪೀಸಿಂದ ಬರುವುದನ್ನೇ ಕಾಯ್ತಿದ್ದ ಶಿಲ್ಪ ‘ಲಟ್ಟಣಿಗೆ ಮೈಕ್’ ಇಟ್ಕೊಂಡು ಕಾಯ್ತಿದ್ರು…! ಅಪ್ಪ ಬಂದೊಡನೆ ಕಚೇರಿಯ ಅನುಭವ, ಕೆಲಸ ಇತ್ಯಾದಿ ಇತ್ಯಾದಿಗಳ ಬಗ್ಗೆ ಮಾತಾಡಿಸ್ತಿದ್ರು…! ಮಗಳ ಈ ಆಟವನ್ನು ನೋಡಿ ಎಂಜಾಯ್ ಮಾಡ್ತಿದ್ದ ತಂದೆ-ತಾಯಿಯಲ್ಲಿ ಮಗಳು ಹೆಸರಾಂತ ನಿರೂಪಕಿ ಆಗಬೇಕು ಎಂಬ ಕನಸು ಮೊಳಕೆಯೊಡೆದಿತ್ತು.


ಪಿಯುಸಿ ಮುಗಿದ ಮೇಲೆ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ ಮಾಡಬಹುದಿತ್ತಾದರೂ…ಅಕಸ್ಮಾತ್ ಜರ್ನಲಿಸಂ ಫೀಲ್ಡ್ ನಲ್ಲಿ ಮುಂದುವರೆಯಲು ಸಾಧ್ಯವಾಗ್ದೇ ಇದ್ರೆ ಯಾವುದಾದ್ರು ಕಂಪನಿಯಲ್ಲಿ ಕೆಲಸ ಮಾಡೋಕೆ ಆಗುತ್ತೆ ಅಂತ ಪತ್ರಿಕೋದ್ಯಮ ಬಿಟ್ಟು ಬಿಕಾಂ ಪದವಿ ಮಾಡಿದ್ರು. ಆದರೆ, ಪದವಿ ಮುಗಿಯುತ್ತಿದ್ದಂತೆ ಇವರ ಕನಸು ನನಸಾಗೋ ಕಾಲ ಹತ್ತಿರಬಂದಿತ್ತು.


ಬಾಲ್ಯದಲ್ಲಿ ವಿಜೆ (ವೀಡಿಯೋ ಜಾಕಿ) ಆಗಲು ಆಸೆಪಟ್ಟಿದ್ದ ಶಿಲ್ಪ ಸುದ್ದಿವಾಹಿನಿ ನಿರೂಪಕಿ ಆಗುವ ಅವಕಾಶ ಸಿಕ್ತು. ವಿಜೆಯಾಗಿ ಮೀಡಿಯಾಕ್ಕೆ ಕಾಲಿಡಲು ಆಗಲಿಲ್ಲ. ಹೊಸದಾಗಿ ಆರಂಭವಾಗುತ್ತಿದ್ದ ಪ್ರಜಾ ಟಿವಿಯಲ್ಲಿ ಹೊಸಮುಖಗಳ ಹುಡುಕಾಟ ನಡೀತಾ ಇದೆ ಅಂತ ಗೊತ್ತಾಗಿ ಒಂದು ಅಪ್ಲಿಕೇಶನ್ ಹಾಕಿದ್ರು ಶಿಲ್ಪ. ಸ್ಕ್ರೀನ್ ಟೆಸ್ಟ್ ಆಯ್ತು… ಹೊಸ ಚಾನಲ್ ಪ್ರಜಾ ಮೂಲಕ ಮಾಧ್ಯಮ ಕ್ಷೇತ್ರದಲ್ಲಿ ವೃತ್ತಿ ಜೀವನ ಆರಂಭಿಸಿದ್ರು. ಇಲ್ಲಿ ಗಜಾನನ ಹೆಗ್ಡೆಯವರು ಸೇರಿದಂತೆ ಅನೇಕ ಅನುಭವಿ ಪತ್ರಕರ್ತರ ಮಾರ್ಗದರ್ಶನ, ಸಲಹೆ, ಪ್ರೋತ್ಸಾಹ ಸಿಕ್ತು.

ಸಿನಿಮಾ ವಿಭಾಗ, ಮಾರ್ಕೆಟಿಂಗ್ ಕ್ಷೇತ್ರದ ಕಾರ್ಯಕ್ರಮಗಳನ್ನು ಶಿಲ್ಪ ನಡೆಸಿಕೊಡ್ತಿದ್ರು. ಆಗಾಗ ವರದಿಗಾರಿಕೆಯನ್ನು ಮಾಡಿ ಸೈ ಅನಿಸಿಕೊಂಡ್ರು. ಮೇ 19 2015ಕ್ಕೆ ಪ್ರಜಾ ಬಳಗ ಸೇರಿದ್ದ ಈಕೆ 2016ರ ನವೆಂಬರ್ ನಲ್ಲಿ ‘ಸಮಯ ಚಾನಲ್’ ಕಡೆಗೆ ಹೋದ್ರು.
ಇಲ್ಲಿ ಜಯಪ್ರಕಾಶ್ ಶೆಟ್ಟಿ ಅವರು ಶಿಲ್ಪ ಅವರಿಗೆ ತುಂಬಾನೇ ಪ್ರೋತ್ಸಾಹ ನೀಡಿದ್ರು. ನ್ಯೂಸ್, ಲೈವ್ ಪ್ರೋಗ್ರಾಮ್ಸ್, ಸಿನಿಮಾ ಡಿಸ್ಕಷನ್ಸ್ ನಡೆಸಿಕೊಡಲು ಅವಕಾಶ ಮಾಡಿಕೊಟ್ರು. ನೋಟು ಅಮಾನ್ಯವಾದಾಗ ಸತತ 4 ಗಂಟೆಗಳ ಕಾಲ, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಸಾವನ್ನಪ್ಪಿದಾಗ ಸುಮಾರು 3ಗಂಟೆಗಳ ಕಾಲ ನಿರಂತರ ನ್ಯೂಸ್, ಕಾರ್ಯಕ್ರಮ ನಡೆಸಿಕೊಟ್ಟಿದ್ದರು ಶಿಲ್ಪ.


ಆಗಾಗ ಡಬ್‍ಸ್ಮ್ಯಾಶ್ ಮಾಡುತ್ತಿದ್ದ ಶಿಲ್ಪ ಅವರನ್ನು ಗಮನಿಸಿದ ಪತ್ರಕರ್ತ ಅವಿನಾಶ್ ಭಾರಧ್ವಜ್ ಶಿಲ್ಪ ಅವರನ್ನು ಯು2ಗೆ ಆಹ್ವಾನಿಸಿದ್ರು. ಆದ್ರೆ ಕಾರಣಾಂತರದಿಂದ ಅಲ್ಲಿಗೆ ಹೋಗಲಿಲ್ಲ. ಟಿಟಿಡಿ (ತಿರುಪತಿ ತಿರುಮಲ ದೇವಸ್ಥಾನಮ್ಸ್) ಚಾನಲ್ ಗೆ ಸೇರಿದ್ರು. ಅಲ್ಲಿ ಸಲ್ಪ ಸಮಯ ಕೆಲಸ ಮಾಡಿದ್ದಾರಷ್ಟೇ. ಬಳಿಕ ಸಿನಿಮಾಲೋಕದಿಂದ ಅವಕಾಶ ಹುಡುಕಿಕೊಂಡು ಬಂತು.

ಸದ್ಯ ‘ಮೈಲಾಪುರ’ ಎಂಬ ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಶೂಟಿಂಗ್ ಹಂತದಲ್ಲಿರೋ ಈ ಸಿನಿಮಾದ ನಿರ್ದೇಶಕ ಪಣೀಶ್. ಜೊತೆಗೆ ಶಿಲ್ಪ ತಮಿಳು ಚಿತ್ರವೊಂದರಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ. ‘ಶಾಂತಂ ಪಾಪಂ’ ಟೆಲಿಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ.


ಕಾಲೇಜು ದಿನಗಳಲ್ಲಿ ನ್ಯಾಷನಲ್ ಲೆವೆಲ್ ಹ್ಯಾಂಡ್ ರೈಟಿಂಗ್ ಸ್ಪರ್ಧೆಯಲ್ಲಿ ವಿಜೇತರಾಗಿದ್ರು. ಮಿಸ್ ಶೇಷಾದ್ರಿ ಪುರಂ ಕಿರೀಟ ಮುಡಿಗೇರಿಸಿಕೊಂಡಿದ್ರು.


ಇಷ್ಟೆಲ್ಲಾ ಆಗಿರೋ ಶಿಲ್ಪ ತುಂಬಾ ಸೆನ್ಸಿಟೀವ್. ಸ್ವಲ್ಪ ಬೇಜಾರಾದ್ರು ಅತ್ತು ಬಿಡ್ತಾರೆ. ಮಾಧ್ಯಮ ಕ್ಷೇತ್ರಕ್ಕೆ ಬಂದ ಆರಂಭದಲ್ಲಿ ಇವರಿಗೆ ವಾಯ್ಸ್ ಚೆನ್ನಾಗಿಲ್ಲ ಅಂತ ಯಾರೋ ಹೇಳಿದ್ರಂತೆ…! ಸಂಗೀತ ಕಲಿತಿರೋ ಇವರು, ಚೆನ್ನಾಗಿ ಹಾಡಬಲ್ಲರು. ಹೀಗಿರುವಾಗ ವಾಯ್ಸ್ ಚೆನ್ನಾಗಿಲ್ಲ ಅಂತ ಹೇಳಿದ್ರಲ್ಲ ಅಂತ ತುಂಬಾನೇ ನೊಂದು ಕೊಂಡಿದ್ರು. ಅಷ್ಟೇಅಲ್ಲ ಈಕೆಗೆ ಲೈವ್ ಕೊಡೋಕು ಆಗಲ್ಲ ಅಂತ ಯಾರೋ ಚುಚ್ಚಿ ಮಾತಾಡಿದ್ರು. ಆ ಗಳಿಗೆಯಲ್ಲೂ ತುಂಬಾ ಬೇಸರ ಮಾಡಿಕೊಂಡಿದ್ರು.

ಆದ್ರೆ ಮುಂದೆ ವಾಯ್ಸ್ ಚೆನ್ನಾಗಿದೆ ಅಂತ ವಾಯ್ಸ್ ವೋವರ್ ಕೊಡೋಕೆ ಅವಕಾಶಗಳು ಬಂದವು…! ಲೈವ್ ಪ್ರೋಗ್ರಾಂಗಳನ್ನು ನಡೆಸಿಕೊಟ್ಟು ತಮ್ಮ ಬಗ್ಗೆ ಸುಖಾಸುಮ್ಮನೆ ನೋವಾಗುವಂತೆ ಮಾತಾಡಿದವರು ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿರೋದು ಸಹ ಈಗ ಇತಿಹಾಸ.


ಶಾಲಾ ಕಾರ್ಯಕ್ರಮಗಳಿಗೆ ಕೋರಿಯಾಗ್ರಫಿ ಮಾಡಿದ್ದಾರೆ, ಮಾಡುತ್ತಿರುತ್ತಾರೆ. ಸಿನಿಮಾಗಳಲ್ಲಿ ಬ್ಯುಸಿ ಆಗಿದ್ರೂ ಸ್ಟೇಜ್ ಪ್ರೋಗ್ರಾಂಗಳನ್ನು ನಡೆಸಿಕೊಡುತ್ತ ನಿರೂಪಣೆ ಮತ್ತು ಸಿನಿಮಾ ಎರಡೂ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ. ಕೆಲಸ ಮಾಡುವ ಆಸಕ್ತಿ ಇದ್ದರೆ, ನಮ್ಮನ್ನು ನಾವು ಕೆಲಸದಲ್ಲಿ ತೊಡಗಿಸಿಕೊಂಡ್ರೆ ಯಾವುದೂ ಅಸಾಧ್ಯವಲ್ಲ. ಮಾಡೋ ಕೆಲಸವನ್ನು ಪ್ರೀತಿಸಬೇಕು ಎನ್ನುವ ಶಿಲ್ಪ ಐಯ್ಯರ್ ಅವರಿಗೆ ಕಾಲಿಟ್ಟಲೆಲ್ಲಾ ಜಯವಾಗಲಿ.

-ಶಶಿಧರ್ ಎಸ್ ದೋಣಿಹಕ್ಲು

ಓದುಗರ ಗಮನಕ್ಕೆ :ಮಾರ್ಚ್-ಏಪ್ರಿಲ್‍ನಲ್ಲಿ ದಿ ನ್ಯೂ ಇಂಡಿಯನ್ ಟೈಮ್ಸ್ ‘ಫೇವರೇಟ್ ಆ್ಯಂಕರ್’ ಸ್ಪರ್ಧೆಯನ್ನು ನಡೆಸುತ್ತಿದೆ. ಈ ಬಗ್ಗೆ ನಿಮಗೆ ಈಗಾಗಲೇ ಗೊತ್ತಿದೆ. ಕಳೆದ ವರ್ಷ ನೀವು ನಿಮ್ಮ ನೆಚ್ಚಿನ ನಿರೂಪಕರಿಗೆ ವೋಟ್ ಹಾಕಿದ್ದೀರಿ. ಈ ವರ್ಷವೂ ನಿಮ್ಮ ನೆಚ್ಚಿನ ನಿರೂಪಕರನ್ನು ಆಯ್ಕೆ ಮಾಡುವ ಜವಬ್ದಾರಿಯೂ ನಿಮ್ಮದೇ…! ಇದಕ್ಕೆ ಪೂರಕವಾಗಿ ನಾವೀಗ ‘ಈ ದಿನದ ನಿರೂಪಕ’ ಎಂದು 10 ನವೆಂಬರ್ 2017ರಿಂದ ದಿನಕ್ಕೊಬ್ಬರಂತೆ ಕನ್ನಡದ ನಿರೂಪಕರ ಕಿರುಪರಿಚಯವನ್ನುಮಾಡಿಕೊಡುತ್ತಿದ್ದೇವೆ.

1) 10 ನವೆಂಬರ್ 2017 : ಈಶ್ವರ್ ದೈತೋಟ

2)11 ನವೆಂಬರ್ 2017 : ಭಾವನ

3)12  ನವೆಂಬರ್ 2017 : ಜಯಶ್ರೀ ಶೇಖರ್

4)13 ನವೆಂಬರ್ 2017 : ಶೇಷಕೃಷ್ಣ

5)14 ನವೆಂಬರ್ 2017 : ಶ್ರೀಧರ್ ಶರ್ಮಾ

6)15 ನವೆಂಬರ್ 2017 : ಶ್ವೇತಾ ಜಗದೀಶ್ ಮಠಪತಿ

7)16 ನವೆಂಬರ್ 2017 : ಅರವಿಂದ ಸೇತುರಾವ್

8)17 ನವೆಂಬರ್ 2017 : ಲಿಖಿತಶ್ರೀ

9)18 ನವೆಂಬರ್ 2017 : ರಾಘವೇಂದ್ರ ಗಂಗಾವತಿ

10)19 ನವೆಂಬರ್ 2017 : ಅಪರ್ಣಾ

11)20 ನವೆಂಬರ್ 2017 :  ಅಮರ್ ಪ್ರಸಾದ್

12)21 ನವೆಂಬರ್ 2017 :   ಸೌಮ್ಯ ಮಳಲಿ

13)22 ನವೆಂಬರ್ 2017 :  ಅರುಣ್ ಬಡಿಗೇರ್

14)23ನವೆಂಬರ್ 2017 :  ರಾಘವ ಸೂರ್ಯ

15)24ನವೆಂಬರ್ 2017 :  ಶ್ರೀಲಕ್ಷ್ಮಿ

16)25ನವೆಂಬರ್ 2017 :  ಶಿಲ್ಪ ಕಿರಣ್

17)26ನವೆಂಬರ್ 2017 :  ಸಮೀವುಲ್ಲಾ

18)27ನವೆಂಬರ್ 2017 :  ರಮಾಕಾಂತ್ ಆರ್ಯನ್

19)28ನವೆಂಬರ್ 2017 :  ಮಾಲ್ತೇಶ್

20)29/30ನವೆಂಬರ್ 2017 :  ಶ್ವೇತಾ ಆಚಾರ್ಯ  [ನಿನ್ನೆ (29ರಂದು ) ತಾಂತ್ರಿಕ ಸಮಸ್ಯೆಯಿಂದ ‘ಈ ದಿನದ ನಿರೂಪಕರು’- ನಿರೂಪಕರ ಪರಿಚಯ ಲೇಖನ ಪ್ರಕಟಿಸಿರಲಿಲ್ಲ. ಆದ್ದರಿಂದ ಇಂದು ಪ್ರಕಟಿಸಿದ್ದೀವಿ.  ಈ ದಿನದ (30 ನವೆಂಬರ್) ಲೇಖನ ಸಂಜೆ ಪ್ರಕಟಿಸಲಾಗುವುದು.) ]

21)30ನವೆಂಬರ್ 2017 :  ಸುರೇಶ್ ಬಾಬು 

22)01 ಡಿಸೆಂಬರ್ 2017 :  ಮಧು ಕೃಷ್ಣ (ಡಿಸೆಂಬರ್ ೨ ರಂದು ಬೆಳಗ್ಗೆ ಪ್ರಕಟ)

23)02 ಡಿಸೆಂಬರ್ 2017 : ಶಶಿಧರ್ ಭಟ್

24)03 ಡಿಸೆಂಬರ್ 2017 : ಚನ್ನವೀರ ಸಗರನಾಳ್

25)04 ಡಿಸೆಂಬರ್ 2017 : ಗೌರೀಶ್ ಅಕ್ಕಿ

26)05 ಡಿಸೆಂಬರ್ 2017 : ಶ್ರುತಿ ಜೈನ್

27)06ಡಿಸೆಂಬರ್ 2017 : ಅವಿನಾಶ್ ಯುವನ್  

28)07ಡಿಸೆಂಬರ್ 2017 : ಶಿಲ್ಪ ಕೆ.ಎನ್

29)08ಡಿಸೆಂಬರ್ 2017 : ಶಮೀರಾ ಬೆಳುವಾಯಿ

30)09ಡಿಸೆಂಬರ್ 2017 : ಸಂದೀಪ್ ಕುಮಾರ್

31)10ಡಿಸೆಂಬರ್ 2017 : ಪ್ರತಿಮಾ ಭಟ್

32)11ಡಿಸೆಂಬರ್ 2017 :  ಹರೀಶ್ ಪುತ್ರನ್

33)12ಡಿಸೆಂಬರ್ 2017 : ನಿಶಾ ಶೆಟ್ಟಿ

34)13ಡಿಸೆಂಬರ್ 2017 : ಪೂರ್ಣಿಮ ಎನ್.ಡಿ

35)14ಡಿಸೆಂಬರ್ 2017 :  ಹಬೀಬ್ ದಂಡಿ

36)15ಡಿಸೆಂಬರ್ 2017 : ಪ್ರಕಾಶ್ ಕುಮಾರ್ ಸಿ.ಎನ್

37)16ಡಿಸೆಂಬರ್ 2017 :  ಜ್ಯೋತಿ ಇರ್ವತ್ತೂರು

38)17ಡಿಸೆಂಬರ್ 2017 :  ಶಿಲ್ಪ ಐಯ್ಯರ್ 

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...