ಥಿಯೇಟರ್‍ನಲ್ಲಿ ಸಿನಿಮಾ ನೋಡುವಾಗ ಸಿಆರ್‍ಪಿಎಫ್ ಯೋಧ ಯುವತಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಭರ್ಜರಿ ಸಿನಿಮಾ ವೀಕ್ಷಣೆಗೆ ಹೋದಾಗ ಸಿಆರ್‍ಪಿಎಫ್ ಯೋಧ ಯುವತಿಯೊಬ್ಬಳಿಗೆ ಪದೇ ಪದೇ ಲೈಂಗಿಕ ಕಿರುಕುಳ ನೀಡಿದ್ದಾನೆ…!
ಯುವತಿಯ ಕುಟುಂಬದವರು ಹಾಗೂ ಇತರೆ ಪ್ರೇಕ್ಷಕರು ಆತನನ್ನು ಚಿತ್ರಮಂದಿರದ ಹೊರಗೆಳೆದು ತಂದು ಭರ್ಜರಿಯಾಗಿಯೇ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ರವಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.