ಮಗ ಲವ್ ಮಾಡಿ ಮದ್ವೆ ಆಗಿದ್ದಕ್ಕೆ ತಂದೆ ಜೀವ ಕಳೆದುಕೊಂಡ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಅರಬಿಳಚಿ ವಡ್ಡರಹಟ್ಟಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ದಶರಥ ಎಂಬ ಯುವಕ ಪಕ್ಕದ ಮಾರಕ ಶೆಟ್ಟಿ ಹಳ್ಳಿಯ ಸಿಂಧು ಎಂಬ ಯುವತಿಯನ್ನು ಲವ್ ಮಾಡಿ ಆಕೆಯೊಂದಿಗೆ ನಾಪತ್ತೆಯಾಗಿದ್ದ. ದಶರಥ ಎಲ್ಲಿದ್ದಾನೆಂದು ತಿಳಿಸುವಂತೆ ಆತನ ಮನೆಯವರಿಗೆ ಸಿಂಧು ಮನೆಯವರು ಕಿರುಕುಳ ನೀಡಿದ್ದರು ಎನ್ನಲಾಗಿದೆ.
ಇದನ್ನು ಸಹಿಸಲಾಗದೆ ದಶರಥನ ತಂದೆ ಕುಮಾರಪ್ಪ ಮತ್ತು ತಾಯಿ ನೀಲಾವತಿ ವಿಷ ಸೇವಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರನ್ನು ಶಿವಮೊಗ್ಗದ ಮೆಗಾನ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಚಿಕಿತ್ಸೆ ಫಲಿಸದೆ ಕುಮಾರಪ್ಪ ಮೃತಪಟ್ಟಿದ್ದಾರೆ.
ದಶರಥ ಮತ್ತು ಸಿಂಧು ಬೆಂಗಳೂರಿನ ಓಂಶಕ್ತಿ ದೇವಸ್ಥಾನದಲ್ಲಿ ಮದುವೆಯಾಗಿದ್ದಾರೆ. ಪ್ರಾಣ ಬೆದರಿಕೆ ಇರೋದ್ರಿಂದ ಪೊಲೀಸರ ರಕ್ಷಣೆಯಲ್ಲಿ ಗ್ರಾಮಕ್ಕೆ ತೆರಳಿದ್ದಾರೆ.