ಮಂಗಳೂರು-ಬೆಂಗಳೂರು ಪ್ರಯಾಣಿಕರಿಗೆ ಇದು ಶಾಕಿಂಗ್ ನ್ಯೂಸ್. ಮತ್ತೆ ಐದು ತಿಂಗಳು ಶಿರಾಡಿಘಾಟ್ ಬಂದ್ ಆಗಲಿದೆ.
ಕರಾವಳಿ ಜಿಲ್ಲೆಯಲ್ಲಿ ಕಳೆದ ಹಲವಾರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಶಿರಾಡಿಘಾಟ್ ನಲ್ಲಿ ಭೂ ಕುಸಿತ ಮುಂದುವರೆದಿದೆ. ಮಳೆಯ ಅಬ್ಬರಕ್ಕೆ ಕಾಮಗಾರಿ ಕೊಚ್ಚಿ ಹೋಗುವ ಭೀತಿ ಇರೋದ್ರಿಂದ ಸಂಚಾರ ಬಂದ್ ಆಗಲಿದೆ.

ಜೊತೆಗೆ ಎರಡು ರಸ್ತೆಯ ಕೆಲಸಗಳು ಸಹ ಪೂರ್ಣಗೊಂಡಿಲ್ಲ. ಸಂಚಾರ ನಿಷೇಧಿಸದೇ ಇದ್ದರೆ ಹೆಚ್ಚಿ ಹಾನಿ ಉಂಟಾಗುವ ಸಾಧ್ಯತೆ ಇರೋದ್ರಿಂದ ಈ ನಿರ್ಧಾರಕ್ಕೆ ಬಂದಿರುವುದಾಗಿ ಲೋಕೋಪಯೋಗಿ ಸಚಿವ ಎಚ್. ಡಿ ರೇವಣ್ಣ ತಿಳಿಸಿದ್ದಾರೆ.






