ಭಾರಿ ಮಳೆ, ಗುಡ್ಡ ಕುಸಿತದ ಪರಿಣಾಮ ಪುತ್ತೂರು ತಾಲೂಕಿನ ಶಿರಾಡಿಘಾಟ್ ಬಂದ್ ಆಗಿದ್ದು, ಪೂರಕ ಕಾಮಗಾರಿಯನ್ನು ವಾರದೊಳಗೆ ಪೂರ್ಣಗೊಳಿಸಬೇಕು ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ರಾಜ್ಯ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಮತ್ತು ಅಧಿಕಾರಿಗಳ ಜೊತೆಗೆ ದೆಹಲಿಯಲ್ಲಿ ನಿತಿನ್ ಗಡ್ಕರಿ ಸಭೆ ನಡೆಸಿದರು. ಸಭೆಯಲ್ಲಿ ಹಲವು ವಿಚಾರಗಳನ್ನು ಚರ್ಚಿಸಲಾಯಿತು. ಈ ವೇಳೆ ವಾರದೊಳಗೆ ಶಿರಾಡಿಘಾಟ್ ಸಂಚಾರ ಮುಕ್ತಮಾಡುವಂತೆ ಗಡ್ಕರಿ ಸೂಚಿಸಿದರು.