ಶಿವಸುಬ್ರಹ್ಮಣ್ಯ ಅವರು ಹೊಸದಿಗಂತ ದಿನಪತ್ರಿಕೆ ಸಂಪಾದಕ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದಾರೆ.
ಮುಂಗಾರು ಪತ್ರಿಕೆಯ ಮೂಲಕ ವೃತ್ತಿ ಜೀವನ ಆರಂಭಿಸಿದ್ದ ಶಿವಸುಬ್ರಹ್ಮಣ್ಯ ಅವರಿಗೆ ಫೋಟೋಗ್ರಫಿಯಲ್ಲಿ ತುಂಬಾ ಆಸಕ್ತಿ. ಇವರ ಕ್ಯಾಮೆರ ಕಣ್ಣಲ್ಲಿ ಲೆಕ್ಕವಿಲ್ಲದಷ್ಟು ಸುಂದರ ಚಿತ್ರಗಳು ಸೆರೆಯಾಗಿವೆ. ಮುಂಗಾರು ಪತ್ರಿಕೆ ಮಾತ್ರವಲ್ಲದೆ ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ ಹಾಗೂ ಉದಯವಾಣಿ ದಿನಪತ್ರಿಯಲ್ಲಿ ಕೆಲಸ ಮಾಡಿದ ಅಪಾರ ಅನುಭವ ಇವರದ್ದು.
ಕಳೆದ ಕೆಲವು ವರ್ಷಗಳಿಂದ ಹೊಸದಿಗಂತ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಾ ಬಂದಿದ್ದ ಶಿವಸುಬ್ರಮಣ್ಯ ಅವರು ನಿನ್ನೆ ಸಂಸ್ಥೆಗೆ ರಾಜೀನಾಮೆ ನೀಡಿದ್ದು, ಉದಯವಾಣಿ ಕಡೆಗೆ ಪಯಣ ಬೆಳೆಸಿದ್ದಾರೆ. ಹಿಂದೆಯೂ ಉದಯವಾಣಿಯಲ್ಲಿ ಕೆಲಸ ಮಾಡಿದ್ದ ಅನುಭವ ಶಿವಸುಬ್ರಹ್ಮಣ್ಯ ಅವರಿಗಿದೆ. ಆದರೆ, ಈಗ ಸಂಪೂರ್ಣ ಪತ್ರಿಕೆಯ ಜವಬ್ದಾರಿ ಇವರ ಮೇಲಿದೆ.
ಉದಯವಾಣಿ ಸಂಪಾದಕರಾಗಿದ್ದ ರವಿಹೆಗಡೆಯವರು ಕನ್ನಡಪ್ರಭಕ್ಕೆ ಹೋದಬಳಿಕ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾಗಿದ್ದ ವೆಂಕಟೇಶ್ ಪ್ರಭು ಅವರು ಪತ್ರಿಕೆಯ ಜವಬ್ದಾರಿವಹಿಸಿಕೊಂಡಿದ್ದರು. ಈಗ ಶಿವಸುಬ್ರಹ್ಮಣ್ಯ ಅವರು ಸಂಪಾದಕರಾಗಿ ಉದಯವಾಣಿ ಚುಕ್ಕಾಣಿ ಹಿಡಿಯುತ್ತಿದ್ದಾರೆ.