ಹ್ಯಾಟ್ರಿಕ್ ಹೀರೋ ಡಾ. ಶಿವರಾಜಕುಮಾರ್ ಅವರ ಹೊಸ ಚಿತ್ರದ ಹೆಸರು ಘೋಷಣೆಯಾಗಿದೆ. ಶಿವಣ್ಣ ಅವರ ಅಭಿಮಾನಿಗಳು ಟಗರು, ದಿ ವಿಲನ್ ಮತ್ತು ಮಫ್ತಿ ಚಿತ್ರದ ರಿಲೀಸ್‍ಗೆ ಕಾಯುತ್ತಿದ್ದಾರೆ..! ಈ ನಡುವೆ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿಯನ್ನು ಶಿವಣ್ಣ ನೀಡಿದ್ದಾರೆ. ಇವರ ಮುಂದಿನ ಸಿನಿಮಾದ ಹೆಸರು ಇಂದು ಅನಾವರಣಗೊಂಡಿದೆ..!
ಮಂತ್ರಿಸ್ಕ್ವೇರ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಿವಣ್ಣ ಅವರ ಹೊಸ ಚಿತ್ರ ‘ಎಸ್‍ಆರ್‍ಕೆ’ಯ ಹೆಸರನ್ನು ಅನಾವರಣ ಮಾಡಲಾಯಿತು. ಎಸ್‍ಆರ್‍ಕೆ ಶೀರ್ಷಿಕೆಯು ಶಿವಣ್ಣ ಅವರ ಹೆಸರು ಶಿವರಾಜಕುಮಾರ್ ಎಂಬುದನ್ನು ಬಿಂಬಿಸುತ್ತಿದ್ದು..! ಚಿತ್ರದ ಆರಂಭಕ್ಕೂ ಮುನ್ನವೇ ಕುತೂಹಲ ಹುಟ್ಟಿಸಿದೆ.
ಎಸ್‍ಆರ್‍ಕೆ ಮೂಲಕ ಶಿವಣ್ಣ ಅವರ ಹತ್ತಿರದ ಸಂಬಂಧಿ ಲಕ್ಕಿ ಗೋಪಾಲ್ ನಿರ್ದೇಶಕರಾಗಿ ಕನ್ನಡ ಸಿನಿಲೋಕಕ್ಕೆ ಎಂಟ್ರಿ ಕೊಡ್ತಿದ್ದಾರೆ..!
ಕಾರ್ಯಕ್ರಮದಲ್ಲಿ ರಾಘವೇಂದ್ರ ರಾಜಕುಮಾರ್, ಪುನೀತ್ ರಾಜಕುಮಾರ್, ವಿನಯ್ ರಾಜಕುಮಾರ್ ಹಾಗೂ ಸ್ಯಾಂಡಲ್‍ವುಡ್‍ನ ಮತ್ತಿತರ ಕೆಲ ಪ್ರಮುಖರು ಪಾಲ್ಗೊಂಡಿದ್ದರು.