ಆಟವಾಡುವ ಗನ್ ಎಂದು ತಿಳಿದು ಮಗಳು ರಿಯಲ್ ಗನ್ ನಿಂದ ತಾಯಿಗೆ ಶೂಟ್ ಮಾಡಿದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯಲ್ಲಿ ನಡೆದಿದೆ.
ಕಾಕೋಲಿ ಜಾನಾ ಗುಂಡಿನೇಟು ತಿಂದು ಐಸಿಯುನಲ್ಲಿರುವ ಮಹಿಳೆ.
ಬಾಲಕಿ ಆಟದ ಪಿಸ್ತೂಲ್ ಎಂದು ತಿಳಿದು ರಿಯಲ್ ಗನ್ ನಿಂದ ತಾಯಿಗೆ ಶೂಟ್ ಮಾಡಿದ್ದಾಳೆ.
ಭಾನುವಾರ ಬೆಳಗ್ಗೆ ಕಾಕೋಲಿ ತನ್ನ ಮನೆಯ ಆವರಣದಲ್ಲಿ ಆ ಪಿಸ್ತೂಲ್ ಅನ್ನು ನೋಡಿದ್ದರು. ನಂತರ ಅದು ಆಟವಾಡೋ ಪಿಸ್ತೂಲ್ ಎಂದು ತಿಳಿದು ತನ್ನ ಮಗಳಿಗೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕಿ ಆ ಪಿಸ್ತೂಲ್‍ನಿಂದ ಆಟವಾಡುವಾಗ ಆಕಸ್ಮಿಕವಾಗಿ ತನ್ನ ತಾಯಿಯ ಬೆನ್ನಿಗೆ ಶೂಟ್ ಮಾಡಿದ್ದಾಳೆ. ತಕ್ಷಣ ಕಾಕೋಲಿ ಅವರನ್ನು ಆರಂಬಗ್ ಆಸ್ಪತ್ರೆಯಲ್ಲಿ ದಾಖಲಿಸಿದ್ದಾರೆ. ಸದ್ಯ ಕಾಕೋಲಿ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.