ಗಂಗಾ ನದಿ ನೀರು ಮಲಿನದ ಕುರಿತಾಗಿ ನಮ್ಮ ದೇಶದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗಳು ಶುರುವಾಗಿದೆ. ಗಂಗಾ ಶುದ್ಧೀಕರಣಕ್ಕಾಗಿ ಪ್ರಧಾನಿ ಮೋದಿ ಅವರೂ ಕೂಡ ಸ್ವಚ್ಛ ಭಾರತ್‍ನಲ್ಲಿ ಆಧ್ಯತೆ ನೀಡಿದ್ದಾರೆ. ಆದ್ರೆ ಇದಿಗ ಒಂದು ಬಾಲೆ ಕ್ಲೀನ್ ಗಂಗಾ ಅಭಿಯಾನದ ಕುರಿತಾಗಿ ಜನ ಜಾಗೃತಿ ಮೂಡಿಸುವ ಉದ್ದೇಶದಿಂದ ಒಂದು ವಿಶಿಷ್ಟ ರೀತಿಯ ಸಾಹಸಕ್ಕೆ ಕೈ ಹಾಕಿದ್ದಾಳೆ..! ಅದು ಸುಮಾರು 550 ಕಿ.ಮೀ ಈಜುವ ಮೂಲಕ..!
ಹೌದು.. ಕಾನ್ಪುರ ಮೂಲದ 11 ವರ್ಷದ ಬಾಲಕಿ ಶ್ರದ್ದಾ ಶುಕ್ಲಾ ಕಾನ್ಪುರ ಮತ್ತು ವಾರಣಾಸಿ ಮಧ್ಯೆ ಸುಮಾರು 550 ಕಿಮೀ. ದೂರವನ್ನು ಸುಮಾರು 70 ಗಂಟೆಗಳಲ್ಲಿ ಈಜಲಿದ್ದಾಳೆ. ಪುಟಾಣಿ ಮೀನು ಎಂದೇ ಖ್ಯಾತಿಯಾಗಿರುವ ಈ ಹುಡುಗಿ ಈಗಾಗಲೇ ಈ ಸಾಹಕ್ಕೆ ಮುನ್ನುಡಿ ಬರೆದಿದ್ದಾಳೆ. ಕಾನ್ಪುರದ ಮಸಾಕ್ರೆ ಘಾಟ್‍ನಿಂದ ಈಜಲು ಶುರು ಮಾಡಿದ್ದಾಳೆ. ಸಾಂಪ್ರದಾಯಿಕ ಪೂಜೆ ಹಾಗೂ ಮಂತ್ರೋಚ್ಛಾಟನೆಯ ಬಳಿಕ ಶ್ರದ್ದಾ ಶುಕ್ಲ ನೀರಿಗಿಳಿಯಲಿದ್ದಾಳೆ. ಈ ಪ್ರಯತ್ನದಲ್ಲಿ ಬಾಲಕಿ ಯಶಸ್ವಿಯಾಗಿದ್ದೇ ಆದಲ್ಲಿ 550 ಕಿಮೀ ಈಜಿ ಸಾಧನೆ ಮಾಡಿದ ಮೊದಲ ಭಾರತೀಯ ಬಾಲಕಿ ಎನಿಸಿಕೊಳ್ಳುತ್ತಾಳೆ. 2014ರಲ್ಲಿ ಶ್ರದ್ದಾ ಗಂಗಾ ನದಿಯಲ್ಲಿ ಈಜಿದ್ದಳು. ಅಲ್ಲಿ ಕಾನ್ಪುರದಿಂದ ಅಲಹಾಬಾದ್‍ವರೆಗೆ ಸುಮಾರು 228 ಕಿಮೀ ದೂರ ಈಜಿ ಸಾಧನೆ ಮಾಡಿದ್ದಳು.
POPULAR STORIES :
ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!
ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!
ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!
ಈ ವೃದ್ದ ಸನ್ಯಾಸಿಯ ದೀರ್ಘಾಯುಷ್ಯದ ಸೀಕ್ರೇಟ್ ಏನು ಗೊತ್ತಾ…?
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು