ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನ ಗಟ್ಟಿಗೊಳಿಸಿದ್ದಾರೆ

admin
By admin
0 Min Read

ಬೆಂಗಳೂರು : ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನ ಗಟ್ಟಿಗೊಳಿಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಈ ಸಂಬಂಧ ರವೀಂದ್ರ ಕಲಾಕ್ಷೇತ್ರದಲ್ಲಿ ಮಾತನಾಡಿದ ಅವರು, ಕೆಲವರ ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆಯನ್ನ ಗಟ್ಟಿಗೊಳಿಸಿದ್ದಾರೆ.

 

 

 

ಈ ಹಿಂದೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯರಿಗೆ ಮಾತ್ರ ಓದುವ ಅವಕಾಶವಿತ್ತು. ಇದು ಕೂಡ ಮೀಸಲಾತಿ ಅಲ್ಲವೇ..? ಶೂದ್ರರು ತಾವು ಉತ್ಪಾದನೆ ಮಾಡಿದ ವಸ್ತುಗಳನ್ನು ಅನುಭವಿಸುವಂತಿರಲಿಲ್ಲ. ಶೂದ್ರರನ್ನು ಕೊಳಕು ಕೆಲಸಕ್ಕೆ ಬಿಟ್ಟು ಮೇಲ್ಜಾತಿಯವರು ಮಜಾ ಮಾಡ್ಕೊಂಡಿದ್ದರು. ಇವತ್ತು ಅಸಮಾನತೆ ನಿರ್ಮಾಣ ಮಾಡೋಕೆ ಕಾರಣರಾದವರೇ, ಏಕೆ ಮೀಸಲಾತಿ ಕೊಡಬೇಕೆಂದು ಇವರೇ ಪ್ರಶ್ನೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದರು.

Share This Article