ಬೆಂಗಳೂರು : ಸಿದ್ದರಾಮಯ್ಯ ವಿರುದ್ಧ MLC ಛಲವಾದಿ ನಾರಾಯಣಸ್ವಾಮಿ ಕಿಡಿ ಕಾರಿದ್ದು, ಸಿದ್ದರಾಮಯ್ಯ ಅವ್ರಿಗೆ ರಾಜಕೀಯ ತಿಕ್ಕಲು ಜಾಸ್ತಿ ಆಗಿದೆ.. ರಾಜಕೀಯ ತಿಕ್ಕಲುತನಕ್ಕೆ ಸದ್ಯಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಹೇಳಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ MLC ಛಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಅವ್ರಿಗೆ ಆರ್ಥಿಕ ಲೆಕ್ಕಾಚಾರ ಗೊತ್ತಿಲ್ಲ,ಸಿದ್ದುಗೆ ಗೊತ್ತಿರೋದು ಚಡ್ಡಿ ಮಾತ್ರ, ಚಡ್ಡಿ ಸುಡ್ತೀವಿ ಅಂತಿದಾರೆ. ಚಾಮುಂಡೇಶ್ವರಿ ಕ್ಷೇತ್ರದ ಜನ ಅವರ ಲುಂಗಿ, ಚಡ್ಡಿ ಕಿತ್ತು ಕಳಿಸಿದ್ರು, ಆದ್ರೂ ಸಿದ್ದರಾಮಯ್ಯ ಅವ್ರಿಗೆ ಚಡ್ಡಿ ಬಗ್ಗೆ ಮಾತಾಡೋದು ಬಿಟ್ಟಿಲ್ಲ ಎಂದು MLC ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.