ಮಳವಳ್ಳಿಗೆ ಭೇಟಿ ನೀಡಿದ ಸಿದ್ದರಾಮಯ್ಯ

Date:

ಮಳವಳ್ಳಿಯಲ್ಲಿ ಬಾಲಕಿ ಮೇಲೆ ಕೊಲೆ ಪ್ರಕರಣ , ಮೃತ ಬಾಲಕಿ ನಿವಾಸಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ .ಮಳವಳ್ಳಿ ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಬಾಲಕಿ ನಿವಾಸಕ್ಕೆ ಭೇಟಿ ನೀಡಿದ್ದಾರೆ . ಬಾಲಕಿ ಕುಟುಂಬದ ಸಿದ್ದರಾಮಯ್ಯ ಮಾತಕತೆ ನಡೆಸಿ ಸಾಂತ್ವನ ಹೇಳಿದರು . ಸಿದ್ದರಾಮಯ್ಯ ಮುಂದೆ ಮೃತ ಬಾಲಕಿಯ ಕುಟುಂಬಸ್ಥರು ತಮ್ಮ ನೋವನ್ನ ಪರಿಪರಿಯಾಗಿ ಹೇಳಿದ್ದಾರೆ. ನ್ಯಾಯ ಕೊಡಿಸುವಂತೆ ಸಿದ್ದರಾಮಯ್ಯ ಬಳಿ ಕುಟುಂಬಸ್ಥರ ಮನವಿ ಮಾಡಿದ್ದಾರೆ . ಇನ್ನೂ ಸಿದ್ದರಾಮಯ್ಯ ಬಾಲಕಿ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟಿದ್ದಾರೆ . ಈ ವೇಳೆ ಮಾಜಿ ಸಚಿವ ಚಲುವರಾಯಸ್ವಾಮಿ 50 ಸಾವಿರ ಪರಿಹಾರ .

ಈ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ” ಆರೋಪಿಗೆ ಮರಣದಂಡನೆ ಶಿಕ್ಷೆಯಾಗಿದೆ .10 ವರ್ಷದ ಬಾಲಕಿ ಮೇಲೆ ನಡೆದಿರುವ ಈ ಕೃತ್ಯ ಸರಿಯಲ್ಲ . ಪ್ರಾಣಿಗಳು, ರಾಕ್ಷಸರು ಕೂಡ ಈ ರೀತಿ ಕೃತ್ಯ ಎಸಗುವುದಿಲ್ಲ .
ಇದು ಅಕ್ಷಮ್ಯ ಅಪರಾಧ, ಬಾಲಕಿ ಕುಟುಂಬಸ್ಥರ ಜೊತೆ ಮಾತಾಡಿದೆ . ಆಗಬೇಕು, ಯಾರೂ ಈ ಕೆಲಸ ಮಾಡಬಾರದು.ಹೆಣ್ಣು ಮಕ್ಕಳ ಶಾಲೆ ಮತ್ತು ಟ್ಯೂಷನ್‌ಗಳಿಗೆ ಶಿಕ್ಷಕರ ಮೇಲೆ ನಂಬಿಕೆ, ವಿಶ್ವಾಸ ಇಟ್ಟು ಟ್ಯೂಷನ್‌ಗೆ ಹೋಗುತ್ತಾರೆ .ಗುರುಗಳೇ ಈ ರೀತಿ ಆದರೆ, ಬೇಲಿನೇ ಎದ್ದು ಹೊಲ ಮೇಯ್ದಂಗೆ
ಅವನು ಪ್ರಾಣಿ ಇದ್ದಾನೆ, ಯಾವುದೇ ಪ್ರಾಣಿ ಸಮಾಜದಲ್ಲಿ ಉಳಿಯುವುದಿಲ್ಲ . ಯಾರನ್ನು ಉಳಿಸಬಾರದು, ಮರಣದಂಡನೆ ಕೊಡಬೇಕು . ಅತ್ಯಾಚಾರ
, ಕೊಲೆ ಮಾಡಿದವರಿಗೆ ಕಠಿಣ ಶಿಕ್ಷೆ ಆಗಬೇಕು ” ಎಂದು ಬಾಲಕಿ ಮನೆಗೆ ಭೇಟಿ ನೀಡಿದ ಬಳಿಕ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ .

Share post:

Subscribe

spot_imgspot_img

Popular

More like this
Related

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್

ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ಸಚಿವ ಆರ್.ಬಿ. ತಿಮ್ಮಾಪುರ್ ಬಾಗಲಕೋಟೆ: ಮುಖ್ಯಮಂತ್ರಿ...

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ದಟ್ಟಣೆ

ಸಾಲುಸಾಲು ರಜೆ ಮುಗಿಸಿ ಬೆಂಗಳೂರಿಗೆ ಸಿಟಿ ಮಂದಿ ವಾಪಸ್: ಮೆಜೆಸ್ಟಿಕ್ ಮೆಟ್ರೋ...

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ ಏನು..?

ಸಿದ್ದರಾಮಯ್ಯ ಪುತ್ರ ಯತೀಂದ್ರ ಹೇಳಿಕೆ ವಿಚಾರ: ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೇ...

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯ ಮುನ್ಸೂಚನೆ

ಸೈಕ್ಲೋನ್ ಪ್ರಭಾವ: IMD ಯಿಂದ ಆರೆಂಜ್ ಅಲರ್ಟ್: ಹಲವು ಜಿಲ್ಲೆಗಳಲ್ಲಿ ಭಾರೀ...