ಕಾಂಗ್ರೆಸ್ ನ ಹಿರಿಯ ಮುಖಂಡ, ಜಮಖಂಡಿ ಶಾಸಕ ಸಿದ್ದು ನ್ಯಾಮಗೌಡ (70) ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಗೋವಾದಿಂದ ಕಾರಿನಲ್ಲಿ ಬರುವಾಗ ಕಲಾದಗಿ ಬಳಿ ಬೆಳಗ್ಗೆ ಸುಮಾರು 4 ಗಂಟೆ ಹೊತ್ತಿಗೆ ಸಂಭವಿಸಿದ ಅಪಘಾತದಲ್ಲಿ ನ್ಯಾಮಗೌಡ ಅವರು ಮೃತಪಟ್ಟಿದ್ದಾರೆ.
ಟೈರ್ ಬ್ಲಾಸ್ಟ್ ಆಗಿ ಈ ದುರಂತ ಸಂಭವಿಸಿದೆ.
ಅಪಘಾತದಲ್ಲಿ ಚಾಲಕ ಪರನಾನಂದ್ ಅಂಬಿ ಮತ್ತು ಅನ್ವೃ ಮೊಮಿನ್ ಎಂಬುವವರಿಗೆ ಗಾಯಗಳಾಗಿವೆ. ಗಾಯಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.