ಮತ್ತೆ ಹುಟ್ಟಿ ಬಾ ಅಕ್ಕ, ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದೇವೆ..!

Date:

ಅಜ್ಜ ಯಾವಾಗ್ಲೂ ಹೆಳ್ತಿದ್ರು ಒಳ್ಳೆಯರು ಈ ಭೂಮಿ ಮೇಲೆ ಹೆಚ್ಚು ಕಾಲ ಇರೋದಿಲ್ಲ ಅಂತ. ಈ ಮಾತು ಅಕ್ಕ ನಿನ್ನ ವಿಚಾರದಲ್ಲೇ ಸತ್ಯವಾಯಿತ್ತಲ್ಲ. ಒಂಭತ್ತು ತಿಂಗಳು ನನ್ನ ಹೋಟ್ಟೆಯಲ್ಲಿಟ್ಟುಕೊಂಡು ಸಾಕಿ ಈ ಜಗತ್ತನ್ನು ಕಾಣುವಂತೆ ಮಾಡಿದ ಅಮ್ಮನೂ ನನಗೆ ನಿನ್ನಷ್ಟು ಪ್ರೀತಿ ತೋರಿಸಿರುವ ನೆನಪೇ ಇಲ್ಲ. ನಿನ್ನ ಮುದ್ದಿನ ತಮ್ಮ ನಾನೆಂದು ಊರೆಲ್ಲಾ ಹೇಳಿಕೊಂಡು ತಿರುಗಾಡುತ್ತಿದ್ದೆ, ಮನೆಯರೆಲ್ಲರಿಗಂತ ಅಷ್ಟೆ ಯಾಕೆ ನಿನ್ನ ಮದುವೆ ಮಾಡಿಕೊಂಡ ಗಂಡನಿಗಿಂತಲೂ ನನ್ನ ಹೆಚ್ಚು ಪ್ರೀತಿಸುತ್ತಿದೆ ಆದ್ರೆ ನನಗೆ ಬುದ್ದಿ ಇಲ್ಲದೆ ಹಾಗೆ ಮಾಡುತ್ತಿದ್ದೆನೋ ಗೊತ್ತಿಲ್ಲ ಆದರೆ ನಿನ್ನ ಪ್ರೀತಿಯ ಮಾತುಗಳನ್ನು ತಲೆಗೆ ಹಾಕಿಕೊಳ್ಳದೆ ಆಸಡ್ಡೆಯಿಂದ ಮಾತನಾಡುತ್ತಿದ್ದೇ ಆದರೂ ನೀನು ಎಲ್ಲ ನೋವನ್ನು ಹೊಟ್ಟೆಗೆ ಹಾಕಿಕೊಂಡು ನನ್ನ ಕ್ಷಮಿಸುತ್ತಿದ್ದೆ.
ಅಕ್ಕ ನನ್ನಲ್ಲಿ ಇವತ್ತಿಗೂ ಕಾಡುವ ಏಕೈಕ ಪ್ರಶ್ನೆ ಆಕಾಶದೆತ್ತರದ, ಭೂಮಿತೂಕದ ನಿನ್ನ ಸಹನೆ ಹೇಗೆ ಸಾಧ್ಯ? ಎಲ್ಲರಿಗೂ ಇಲ್ಲದ ಸಹನೆ ನಿನಗೇಗಕ್ಕಾ ಇತ್ತು. ಪ್ರಾಣಿಗಳಿಂದ, ವಯಸ್ಸಾದವರವರೆಗೂ ಸಹನೆ, ಪ್ರೀತಿ, ಕರುಣೆಯಿಂದ ಮಾತನಾಡಿಸುತ್ತಾ, ನಿನ್ನ ಕೈಲಾದ ಸಹಾಯವನ್ನು ಮಾಡುತ್ತಿದ್ದೆ, ಹುಟ್ಟಿದರೆ ನಿನ್ನಂತ ಮಗಳೆ ಹುಟ್ಟಬೇಕು, ನೂರು ಕಾಲ ಬದುಕು, ನಿನ್ನ ಕಟ್ಟಿಕೊಳ್ಳುವವನು ಪುಣ್ಯಮಾಡಿರಬೇಕು ಎಂದೆಲ್ಲಾ ಮಾಡಿದ ಆಶೀರ್ವಾದಗಳೇ ನಿನಗೆ ಮುಳುವಾದವೇ.? ಈ ಒಳ್ಳೆಯ ಗುಣಕ್ಕೆ ಇರಬೇಕು ದೇವರು ನಿನ್ನ ಬಹುಬೇಗ ಕರೆಸಿಕೊಂಡಿದ್ದು.
ಇರುವಾಗ ಪ್ರೀತಿಯ ಬೆಲೆ ತಿಳಿಯುವುದಿಲ್ಲ ಅದನ್ನು ಕಳೆದುಕೊಂಡ ಮೇಲೆಯೇ ನಿಜವಾಗಿಯೂ ಪ್ರೀತಿಯ ಬೆಲೆ, ಪ್ರೀತಿಸುವವರ ಬೆಲೆ ಅರ್ಥವಾಗುವುದು ಎನ್ನುವ ಮಾತನ್ನು ಕೇಳಿದ್ದೆ. ಆದರೆ ಅದರ ಅನುಭವ ಈಗ ನಿಜವಾಗಿಯೂ ಅನುಭವಿಸುತ್ತಿದ್ದೇನೆ. ನೀನಿರುವಾಗ ಸಾಕಷ್ಟು ಪ್ರೀತಿ ತೋರಿಸುತ್ತಿದ್ದೆ ಆಗ ಪ್ರೀತಿಯ ಬೆಲೆಯೇ ಅರ್ಥವಾಗಲಿಲ್ಲ, ಆದರೆ ಈಗ ಪ್ರೀತಿಯ ಕೊರತೆ ಕಾಡುತ್ತಿದ್ದೆ ಆದರೆ ಪ್ರೀತಿ ತೋರಿಸಲು ನೀನಿಲ್ಲ.. ನಿಜವಾಗಿಯೂ ದುರಂತ ಅಲ್ಲವೇ? ಹಸಿದವರಿಗೆ ಮಾತ್ರ ಅನ್ನದ ಬೆಲೆ ತಿಳಿಯುವುದು ಎನ್ನುವ ಸತ್ಯ ನನಗೀಗ ಅರಿವಾಗಿದೆ….
ನಾನು ತಪ್ಪು ಮಾಡಿದಾಗ ಅಪ್ಪ, ಅಮ್ಮನ ಬೈಗುಳ, ಒಡೆತವನ್ನು ತಡೆಯಲು ತಡೆಗೋಡೆಯಂತೆ ಇರುತ್ತಿದ್ದೆ. ಸ್ಕೂಲಿನಿಂದ ಬರುವಾಗ ನನ್ನ ಸೈಕಲ್ ಶಬ್ದ ಕೇಳಿದ್ದೆ ಓಡಿ ಬಂದು ಬ್ಯಾಗ್, ಸೈಕಲ್ ತೆಗೆದುಕೊಂಡು ಮುದ್ದು ಮಾಡುತ್ತಾ ಕರೆದುಕೊಂಡೋಗುತ್ತಿದ್ದೆ. ಅಮ್ಮ ಇಲ್ಲದಿರುವ ಸಮಯದಲ್ಲಿ ನನ್ನೆಲ್ಲಾ ಜವಾಬ್ದಾರಿಯನ್ನು ತೆಗೆದುಕೊಂಡು ಸ್ವಲ್ಪವೂ ನೋವಾಗದಂತೆ ಕಾಪಾಡುತ್ತಿದ್ದೆ ಆದರೆ ನೀನಿಲ್ಲದೆ ಆ ಸ್ಥಾನವೇ ಖಾಲಿ ಖಾಲಿ ಕಾಣುತ್ತಿದ್ದೆ. ಆ ಸ್ಥಾನವನ್ನು ನಿನ್ನ ಬಿಟ್ಟರೆ ಮತ್ಯಾರೂ ತುಂಬಲು ಸಾಧ್ಯವಿಲ್ಲ.
ತಿಳಿದೋ, ತಿಳಿಯದೆಯೋ ಮಾಡಿದ ನನ್ನೆಲ್ಲಾ ತಪ್ಪನ್ನು ನೀನು ಕ್ಷಮಿಸಿದ್ದೀಯ, ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿದ ನಿನ್ನ, ಕೊನೆ ಉಸಿರೆಳೆಯುವ ಮುನ್ನ ಕೊನೆಯದಾಗಿ ಒಮ್ಮೆ ನೋಡಲಾಗಲಿಲ್ಲವಲ್ಲ ಎನ್ನುವ ಕೊರಗು, ತಪ್ಪು ಮಾಡಿದೆನಲ್ಲಾ ಎನ್ನುವ ಪಾಪಪ್ರಜ್ಞೆ ನನ್ನ ಬೆಂಬಿಡದೆ ಕಾಡುತ್ತಿದೆ. ನಿನ್ನ ಮುಖವನ್ನು ನೋಡಲು ಯೋಗ್ಯನಾದವನಾಗಿರಲಿಲ್ಲವೇ ಅಥವಾ ನನಗೆ ಅದೃಷ್ಟವಿರಲಿಲ್ಲವೋ ತಿಳಿಯದು. ಬೇಸರದಲ್ಲಿ ನಾನು ಕಣ್ಣೀರಾಕುವಾಗ ನನಗೆ ತಾಯಿಯಂತೆ ಸಮಾಧಾನ ಮಾಡಿ, ಕಣ್ಣೀರು ಒರೆಸಿದವಳು ನೀನು. ಸಮಾಧಾನ ಮಾಡಲು ಆಗದಿದ್ದಲ್ಲಿ ನನ್ನ ಜೊತೆ ನೀನೂ ಕಣ್ಣೀರಾಕಲು ಶುರು ಮಾಡುತ್ತಿದ್ದೆ. ನಿನ್ನಂತವಳ ಮುಖವನ್ನು ನೋಡಲಿಲ್ಲವಲ್ಲ ಎನ್ನುವ ಕೊರಲು ಮನಸ್ಸಿನಲ್ಲಿ ಅಚ್ಚೆ ಹಾಕಿದಂತೆ ಉಳಿದಿದೆ. ಒಟ್ಟಿನಲ್ಲಿ ನಾ ಮಾಡಿವರುವ ಮಹಾ ದೊಡ್ಡ ತಪ್ಪು ಇದು. ನನ್ನ ತಪ್ಪನ್ನು ಕ್ಷಮಿಸಿದ್ದೀಯೋ ಇಲ್ಲವೋ ಎನ್ನುವುದು ಗೋತ್ತಿಲ್ಲ. ಕೇಳಲು ನಮ್ಮ ಜೊತೆ ನೀನಿಲ್ಲ. ಕಣ್ಣೀರ ಹನಿಯಲ್ಲಿ ನಿನ್ನ ನೆನಪುಗಳು ಆವಿಯಾಗಿ ಆಕಾಶ ಸೇರುತ್ತವೆ ಎಂದುಕೊಂಡರೆ ಕಣ್ಣೀರಾಕಲು ಕಣ್ಣುಗಳೇ ಮರಗಟ್ಟಿವೆ. ಜೊತೆಗಿದಿದ್ದರೆ ನಿನ್ನ ಕಾಲಿಗೆ ಬಿದ್ದು ಕ್ಷಮೆ ಕೇಳುತ್ತಿದ್ದೆ ಆದರೆ ಆ ದೃಷ್ಟವೂ ನನಗಿಲ್ಲದ ನತದೃಷ್ಟ ನಾನು. ಇನ್ನು ನೋವನುಭವಿಸಲು ನನ್ನಲ್ಲಿ ಶಕ್ತಿ ಇಲ್ಲ ನನ್ನ ಕ್ಷಮಿಸು ಅಕ್ಕ ಎಂದು ಕೇಳಲ್ಲಷ್ಟೆ ಶಕ್ತ ನಾನು. ಮತ್ತೆ ಹುಟ್ಟಿ ಬಾ ಅಕ್ಕ ಪ್ಲೀಸ್ ನಿನ್ನ ಬರುವಿಕೆಯ ನಿರೀಕ್ಷೆಯಲ್ಲಿದ್ದೇವೆ…

  • ಪ್ರಮೋದ್ ಲಕ್ಕವಳ್ಳಿ

POPULAR  STORIES :

ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!

ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು

ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!

ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!

ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!

ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!

ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...