ಆಕಾಶ ಮತ್ತು ಸಮುದ್ರ ನೀಲಿಯಾಗಿ ಕಾಣುತ್ತವೆ. ಇವುಗಳೇಕೆ ನೀಲಿಯಾಗಿವೆ? ಎಂದು ಎಂದಾದರೂ ಯೋಚಿಸಿದ್ದೀರ? ಇವು ನೀಲಿ ಬಣ್ಣವಾಗಲು ಮೂಲ ಕಾರಣ ಭೂಮಿಯ ಮೇಲೆ ಜನ್ಮ ತಾಳಿದ ಮೊದಲ ಜೀವಿಗಳು…!
ಬ್ಯಾಕ್ಟೀರಿಯಾಗಳು ನಮ್ಮ ಭೂಮಿಯಲ್ಲಿ ಹುಟ್ಟಿದ ಮೊದಲ ಜೀವಿಗಳು. ಇವು ಸಮುದ್ರದಲ್ಲಿ ಗುಂಪು ಗುಂಪುಗಳಲ್ಲಿ ಜೀವಿಸುತ್ತಿದ್ದವು. ಕೆಲವು ಬ್ಯಾಕ್ಟೀರಿಯಾಗಳು ಪಾಚಿಗಳಾಗಿ ರೂಪುಗೊಂಡವು. ಈ ಪಾಚಿಯಿಂದ ಆಮ್ಲಜನಕ ತಯಾರಾಯಿತು. ಆಮ್ಲಜನಕದ ಸಹಾಯದಿಂದ ಸಮುದ್ರ ಮತ್ತು ಆಕಾಶ ನೀಲಿ ಬಣ್ಣ ಪಡೆದವು.