ಸಾಹಸ ಪ್ರದರ್ಶನ ಮಾಡುವ ವೇಳೆ ನಾವೆಷ್ಟೇ ಜಾಗೃತರಾಗಿದ್ದರೂ ಸಹ ಕೆಲವೊಂದು ಬಾರಿ ಅನಿರೀಕ್ಷಿತ ಘಟನೆಗಳು ಸಂಭವಿತ್ತದೆ ಅನ್ನೋದಕ್ಕೆ ಈ ಘಟನೆಯೇ ಸೂಕ್ತ ಉದಾಹರಣೆ. ತನ್ನ ಗೆಳೆಯರಿಗೆ ತಾನು ಮಾಡುವ ಸಾಹಸ ಪ್ರದರ್ಶನವನ್ನು ಲೈವ್ ಆಗಿ ತೋರಿಸಲು ಹೋಗಿ ತಾನೇ ಹೆಣವಾಗಿ ಹೋದ..!
ಹೌದು..! ಇಂತಹದೊಂದು ಘೋರ ಘಟನೆ ನಡೆದದ್ದು ಸ್ವಿಟ್ಜರ್‍ಲ್ಯಾಂಡ್‍ನಲ್ಲಿ. ಆರ್ಮಿನ್ ಶೇಮಿಡೇರ್ ಎಂಬ ಸಾಹಸಿಗ ಸ್ಕೈಡೈವಿಂಗ್ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಬಂಡೆಗೆ ಅಪ್ಪಳಿಸಿ ಪ್ರಾಣ ಬಿಟ್ಟಿದ್ದಾನೆ ಇನ್ನು ತನ್ನ ಗೆಳೆಯನ ಸಾಹಸವನ್ನು ಲೈವಾಗಿ ನೋಡುತ್ತಿದ್ದ ಗೆಳೆಯರೆಲ್ಲರೂ ಆ ದುರಂತವನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ…! ಸ್ವಿಜರ್‍ಲ್ಯಾಂಡ್‍ನ ಕಂಡೇರ್ ಸೈಗ್ ಬೆಟ್ಟದಿಂದ ಸ್ಕೈ ಡೈವಿಂಗ್ ಮಾಡಲು ಯೋಚಿಸಿದ್ದ ಆರ್ಮಿನ್, ತನ್ನ ಈ ಸಾಹಸವನ್ನು ಫೇಸ್‍ಬುಕ್ ಮುಖಾಂತರ ತಮ್ಮ ಸ್ನೇಹಿತರಿಗೆಲ್ಲರಿಗೂ ತೋರಿಸಲು ಮುಂದಾದ. ಈ ಸಾಹಸವನ್ನು ಗೆಳೆಯರೆಲ್ಲರೂ ಫೇಸ್‍ಬುಕ್‍ನಲ್ಲಿ ನೋಡಿ ಖುಷಿ ಪಡುತ್ತಿದ್ದಂತೆ ಯಾರೂ ಊಹಿಸಿಕೊಂಡಿರದ ಘಟನೆ ನಡದೇ ಹೋಗಿತ್ತು. ಗೆಳಯರೆಲ್ಲೆರೂ ನೋಡುತ್ತಿರುವಾಗ್ಲೇ ಏಕಾಏಕಿ ಬಂಡೆಗೆ ಅಪ್ಪಳಿಸಿ ಸ್ಥಳದಲ್ಲೇ ಮೃತ ಪಟ್ಟಿದ್ದಾನೆ..! ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
POPULAR STORIES :
ನಿದ್ರೆ ಬಿಟ್ಟು ಜಿಯೋ 4ಜಿ ಫ್ರೀ ಸಿಮ್ ಪಡೆಯುತ್ತಿದ್ದಾರೆ ಗ್ರಾಹಕರು..!
ಟೆಸ್ಟ್ ನಲ್ಲಿ ಪಾಕ್ ನಂ1 ಪಟ್ಟ: ಕೋಹ್ಲಿಯನ್ನು ಲೇವಡಿ ಮಾಡಿದ ಪಾಕ್ ಅಭಿಮಾನಿಗಳು
ಬೆಳ್ಳಿತಾರೆ ಸಿಂಧು ಜೊತೆ ಜಾಹಿರಾತು ಒಪ್ಪಂದಕ್ಕಾಗಿ ಕಂಪನಿಗಳ ಪರೇಡ್..!
ಸುಲಭವಾಗಿ ಸಾಗಿಸಲು ಹೆಣದ ಮೂಳೆ ಮುರಿದು ಮುದ್ದೆ ಮಾಡಿದ್ದರು…!
ಲೈಫ್‍ನಲ್ಲಿ ಹೇಗೆ ಡಿಸಿಪ್ಲಿನ್ ಕಾಪಾಡೋದು,,? ಸ್ವಲ್ಪ ಜಪಾನಿಯರನ್ನ ನೋಡಿ..!
ಪತ್ನಿಯ ಮೃತ ದೇಹ ಹೊತ್ತು 10ಕಿ.ಮೀ ನಡೆದ..!
ರಿಯೋ ಒಲಿಂಪಿಕ್ಸ್ ನಲ್ಲಿ ಸೋತ ನಾರ್ತ್ ಕೊರಿಯಾ ಕ್ರೀಡಾಪಟುಗಳಿಗೆ ಶಿಕ್ಷೆ ಏನು ಗೊತ್ತಾ..?