ಬೆಳ್ಳಗಿರುವ ಪುರುಷರು ಹೆಚ್ಚು ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ಆದರೆ ಕಪ್ಪಗಿರುವ ಪುರುಷರು ಎಷ್ಟು ನಿದ್ರೆ ಮಾಡಿದರೂ ಏನೂ ಸಮಸ್ಯೆ ಇಲ್ಲ ಅಂತ ಸಂಶೋಧನೆಯೊಂದ್ರಿಂದ ತಿಳಿದು ಬಂದಿದೆ.
ಬರ್ಮಿಂಗ್ ಹ್ಯಾಮ್‌ನ ಯೂನಿವರ್ಸಿಟಿ ಆಫ್ ಅಲಬಾಮಾ ಸಮೀಕ್ಷೆ ನಡೆಸಿದೆ. ಬೆಳ್ಳಗಿರುವ ಪುರುಷರು ದಿನದಲ್ಲಿ 9 ಗಂಟೆಗಿಂತ ಹೆಚ್ಚು ನಿದ್ದೆ ಮಾಡಿದಲ್ಲಿ ಅಂಥವರಿಗೆ ಶೇ.71 ರಷ್ಟು ಪಾಶ್ವವಾಯು ಬರುವ ಸಾಧ್ಯತೆ ಹೆಚ್ಚಿರುತ್ತದೆ. ಆದರೆ ಕಪ್ಪಗಿರುವವರಿಗೆ ಅಂತಹ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂಬ ಫಲಿತಾಂಶ ವ್ಯಕ್ತವಾಗಿದೆ.
ಹೆಚ್ಚು ಹೊತ್ತು ಮಲಗುವುದು ಆರೋಗ್ಯ ವನ್ನು ತಾವೇ ಕೆಡಿಸಿಕೊಳ್ಳುವ ಸಂಕೇತ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. 64 ವರ್ಷದೊಳಗಿನ ವ್ಯಕ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಅದರಲ್ಲಿ ಹೆಚ್ಚು ಹೊತ್ತು ಮಲಗುವ ಪುರುಷರಲ್ಲಿ ಶೇ.71ರಷ್ಟು ಪಾರ್ಶ್ವವಾಯು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತೆ ಎನ್ನೋದು ಸರ್ವೆಯಿಂದ ದೃಢಪಟ್ಟಿದೆ.
ಬೆಳ್ಳಗಿರುವ ಮಹಿಳೆಯರಿಗೆ, ಕಪ್ಪಗಿರುವ ಪುರುಷರಿಗೆ ಹೆಚ್ಚು ಮಲಗು ವುದರಿಂದ ಇಂತಹ ಯಾವುದೇ ಸಮಸ್ಯೆಯಾಗಲ್ಲ. ಆದರೆ ಕಪ್ಪಗಿರುವ ಪುರುಷರು ದಿನಕ್ಕೆ ಕನಿಷ್ಠ 6 ಗಂಟೆಗಿಂತ ಕಡಿಮೆ ನಿದ್ರಿಸಿದಲ್ಲಿ ಅವರಲ್ಲಿ ಪಾರ್ಶ್ವಾವಾಯು ಕಾಣಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಹೇಳಿದೆ. ಜೊತೆಗೆ ಈ ಕುರಿತ ಮತ್ತೊಂದು ಬ್ರಿಟಿಷ್ ಸಮೀಕ್ಷೆಯಲ್ಲಿ 9 ಗಂಟೆಗಿಂತ ಹೆಚ್ಚು ನಿದ್ರಿಸುವವರು ಬೇಗ ಮರಣ ಹೊಂದುತ್ತಾರೆ ಎಂದೂ ಹೇಳಿದೆ.