ನೀವು ನಿದ್ದೆ ಪ್ರಿಯರೇ…..! ಸಿಕ್ಕಾಪಟ್ಟೆ ನಿದ್ರೆ ಮಾಡೋದು ಅಂದ್ರೆ ನಿಮಗೆ ತುಂಬಾ ಇಷ್ಟನಾ? ನೀವು ಹೀಗಿದ್ದಲ್ಲಿ ವಿಧಿಗೂ ನೀವು ಕಂಡಾಪಟ್ಟೆ ಇಷ್ಟವಾಗಿ ಬೇಗನೇ ವಿಧಿವಶರಾಗ್ತೀರಿ….!
ನಿಮ್ಮನ್ನು ಭಯಪಡಿಸೋಕೆ ಅಂತ ನಾವಿಲ್ಲಿ ಹೇಳ್ತಿಲ್ಲ. ಹೀಗಂತ ಸಂಶೋಧನೆಯೊಂದು ಹೇಳಿದೆ.
ದಿನದಲ್ಲಿ 8 ಗಂಟೆಗಿಂತ ಹೆಚ್ಚುಕಾಲ ನಿದ್ದೆ ಮಾಡುವವರು ಬೇಗ ಕಾಲವಾಗ್ತಾರೆ ಅರ್ಥಾತ್ ಬೇಗನೇ ಸಾವನ್ನಪ್ಪುತ್ತಾರೆ ಎಂದು ಸಂಶೋಧನೆಯೊಂದರಿಂದ ತಿಳಿದಿದೆ.
8 ಗಂಟೆಗೂ ಅಧಿಕ ಕಾಲ ನಿದ್ದೆ ಮಾಡುವವರಿಗಿಂತ ಅದಕ್ಕೂ ಕಡಿಮೆ ಅವಧಿ ನಿದ್ದೆ ಮಾಡುವವರ ಆಯಸ್ಸು ಹೆಚ್ಚಿರುತ್ತಂತೆ.
ಈ ಸಂಶೋಧನೆಯಲ್ಲಿ ಸುಮಾರು 3.3ಮಿಲಿಯನ್ ಮಂದಿಯನ್ನು ಪ್ರಾಯೋಗಿಕವಾಗಿ ಪರಿಗಣಿಸಲಾಗಿತ್ತು. ಇವರಲ್ಲಿ 8 ಗಂಟೆಗೂ ಅಧಿಕ ನಿದ್ದೆ ಮಾಡುವವರಿಗೆ ಹೃದಯಸಂಬಂಧಿ ಸಮಸ್ಯೆ ಹಾಗೂ ಸ್ಟ್ರೋಕ್ ಸಮಸ್ಯೆ ಎದುರಾಗಲಿದೆ ಎಂದು ತಿಳಿದುಬಂದಿದೆ.