ಆನ್ ಲೈನ್ ನಲ್ಲಿ ಹಾವನ್ನು ಆರ್ಡರ್ ಮಾಡೋದ? ಇದು ನಿಜಕ್ಕೂ ಆಶ್ಚರ್ಯ ಅನಿಸುತ್ತೆ. ಆದರೆ, ನಂಬಲೇ ಬೇಕು..!
ಆನ್ ಲೈನ್ ನಲ್ಲಿ ಆರ್ಡರ್ ಮಾಡಿದ ಹಾವೇ ಯುವತಿಯೊಬ್ಬಳ ಜೀವ ತೆಗೆದಿದೆ.
ಚೀನಾದಲ್ಲಿ ಈ ಘಟನೆ ನಡೆದಿರೋದು.
ಉತ್ತರ ಶಾಂಕ್ಸಿ ಪ್ರಾಂತ್ಯದ 21 ವರ್ಷ ಯುವತಿಯೊಬ್ಬಳು ಹಾವಿನ ವೈನ್ ತಯಾರಿಸಲು ಆನ್ ಲೈನ್ ಶಾಪಿಂಗ್ ಪೋರ್ಟಲ್ ನಿಂದ ‘ಮೆನಿ ಬ್ಯಾಂಡೆಡ್ ಕ್ರೇಯ್ಟ್’ ಎಂಬ ಜಾತಿಯ ವಿಷಕಾರಿ ಹಾವು ತರಿಸಿದ್ದಳು.
ಝುವಾನ್ಝುವಾನ್ ಎಂಬ ಶಾಪಿಂಗ್ ವೆಬ್ಸೈಟ್ನಲ್ಲಿ ಆಕೆ ಈ ಹಾವನ್ನು ಆರ್ಡರ್ ಮಾಡಿದ್ದಳು. ಗುವಾಂಗ್ಡಾಂಗ್ ಪ್ರದೇಶದಲ್ಲಿ ಈ ಹಾವು ಅಳಿವಿನಂಚಿನಲ್ಲಿದ್ದು, ಇಲ್ಲಿನ ವ್ಯಾಪಾರಿಯೇ ಈ ಹಾವನ್ನು ಮಾರಾಟ ಮಾಡಿದ್ದ. ಸ್ಥಳೀಯ ಕೊರಿಯರ್ ಕಂಪನಿ ಹಾವನ್ನು ಡೆಲಿವರಿ ಮಾಡಿತ್ತು. ಆದ್ರೆ ಆಗ ಬಾಕ್ಸ್ನೊಳಗೆ ಏನಿತ್ತು ಅನ್ನೋದು ಗೊತ್ತಿರಲಿಲ್ಲ ಅಂತ ಡೆಲಿವರಿ ಮಾಡಿದವರು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.
ಕೊರಿಯರ್ನಲ್ಲಿ ಹಾವು ಬಂದ ನಂತರ ಅದು ಯುವತಿಗೆ ಕಚ್ಚಿದ್ದು, 8 ದಿನಗಳ ಬಳಿಕ ಆಕೆ ಸಾವನ್ನಪ್ಪಿದ್ದಾಳೆ. ಯುವತಿಗೆ ಕಚ್ಚಿದ ಬಳಿಕ ಹಾವು ಪರಾರಿಯಾಗಿತ್ತು. ಆದ್ರೆ ಬಳಿಕ ಅರಣ್ಯ ಇಲಾಖೆ ಸಿಬ್ಬಂದಿ ಯುವತಿಯ ಮನೆಯ ಬಳಿಯೇ ಹಾವನ್ನ ಪತ್ತೆಮಾಡಿದ್ದಾರೆ.
ಚೀನಾದಲ್ಲಿ ಸಾಂಪ್ರದಾಯಿಕವಾಗಿ ಇಡೀ ಹಾವನ್ನ ಮದ್ಯದಲ್ಲಿ ಹಾಕಿ ಇನ್ಫ್ಯೂಸ್ ಮಾಡಿ ವೈನ್ ತಯಾರಿಸಲಾಗುತ್ತದೆ. ಈ ವೈನ್ ಶಕ್ತಿ ಹೆಚ್ಚಿಸುತ್ತದೆ ಅಂತ ಹೇಳಲಾಗುತ್ತದೆ.
ಕಾಡು ಪ್ರಾಣಿಗಳನ್ನ ಆನ್ಲೈನ್ ತಾಣಗಳಲ್ಲಿ ಮಾರಾಟ ಮಾಡುವುದನ್ನು ಇಲ್ಲಿ ನಿಷೇಧಿಸಲಾಗಿದೆ.
ಆದ್ರೆ ಗ್ರಾಹಕರು ಝುವಾನ್ಝುವಾನ್ನಂತಹ ಸಣ್ಣ ತಾಣಗಳ ಮೊರೆ ಹೋಗ್ತಿದ್ದಾರೆ…!