ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ. ತಡೆದುಕೊಳ್ಳಲಾಗದ ಶೆಕೆ, ತಾಪ ಇದೆ. ಇದು ಹೀಗೆ ಮುಂದುವರೆಯುತ್ತದೆಯೇ, ಹೆಚ್ಚಾಗುತ್ತದೆಯೇ ವಿನಃ ಕಡಿಮೆ ಆಗುವ ಲಕ್ಷಣಗಳಿಲ್ಲ.
ಇದರಿಂದ ವಿಶ್ವದಲ್ಲಿ ಸೂಸೈಡ್ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದೆ ಎಂದು ಸಂಶೋಧನೆಯೊಂದು ಹೇಳಿದೆ.
ಸ್ಟ್ಯಾಂಡ್ ಫೋರ್ಡ್ ವಿಶ್ವವಿದ್ಯಾಲಯ ನಡೆಸಿದ ಸಮೀಕ್ಷಾ ವರದಿಯನ್ನು ನೇಚರ್ ಕ್ಲೈಮೆಟ್ ಚೇಂಜ್ (ಬದಲಾಗುತ್ತಿರುವ ಹವಾಮಾನ) ಪತ್ರಿಕೆ ಪ್ರಕಟಿಸಿದೆ. ಹವಾಮಾನ ಬದಲಾವಣೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಲಿದ್ದು, ಅಮೆರಿಕ ಮತ್ತು ಮೆಕ್ಸಿಕೋದಲ್ಲಿ 2050ರ ಹೊತ್ತಿಗೆ ಸುಮಾರು 40 ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ.