ಇವನೆಂಥಾ ಅಳಿಯ ಮಾರ್ರೆ….?!

admin
By admin
1 Min Read

ಅಳಿಯ ಮನೆ ತೊಳೆಯ ಎಂಬ ಮಾತೊಂದಿದೆ. ನೀವ್ ಇದನ್ನ ಕೇಳಿರ್ಬಹುದು. ಇಲ್ಲೊಬ್ಬ ಭೂಪ ತನ್ನ ಅತ್ತೆಯ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನದ ಒಡವೆ ಕದ್ದಿದ್ದಾನೆ…!


ಇದು ನಡೆದಿರೋದು ಹೈದರಾಬಾದ್ ನ ಸಂಜೀವ್ ರೆಡ್ಡಿ ನಗರದ ತುಳಸಿ ನಗರದಲ್ಲಿ.
ಹ್ಯಾರಿ ಎಂಬ ಕಳ್ಳ ಅಳಿಯ ಅತ್ತೆ ಡಿಸೆಂಬರ್ 31ರಂದು ಅತ್ತೆ ಅಂಟೋನಮ್ಮ ಮನೆಗೆ ನುಗ್ಗಿದ್ದಾನೆ. ಅವ್ರು ನಿದ್ರೆ ಮಾಡ್ತಿದ್ದ ಅವರನ್ನು ಥಳಿಸಿದ್ದಾನೆ. ಅವರು ಪ್ರತಿರೋಧ ಒಡ್ಡಿದಾಗ ಕಣ್ಣಿಗೆ ಖಾರದ ಪುಡಿ ಎರಚಿ ಚಿನ್ನಾಭರಣಗಳನ್ನು ತಗೊಂಡು ಪರಾರಿಯಾಗಿದ್ದಾನೆ.


ಅಂಟೋನಮ್ಮ ಎಸ್ ಆರ್ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಕಳ್ಳ ಅಳಿಯನನ್ನು ಬಂಧಿಸಿದ್ದಾರೆ. ಆತ ತಪ್ಪೊಪ್ಪಿಕೊಂಡಿದ್ದೀನಂತೆ.

Share This Article