ಆಸ್ತಿವಿಚಾರಕ್ಕೆ ಸಂಬಂಧಿಸಿದಂತೆ ಮಗನೇ ತಂದೆಯನ್ನು ಕೊಲೆ ಮಾಡಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ನಗರದ ಹೊರವಲಯದ ರಾಮಮೂರ್ತಿ ನಗರದ ಬಳಿಯ ಕಲ್ಕೆರೆ ಗ್ರಾಮದ ನಿವಾಸಿ ನಾರಾಯಣ ಸ್ವಾಮಿ (60) ಮಗನಿಂದಲೇ ಕೊಲೆಯಾದವರು. ಮಗ ಮನೋಜ್ ಆರೋಪಿ.
ನಾರಾಯಣ ಸ್ವಾಮಿಯವರು ಮಗ ಮತ್ತು ಹೆಂಡ್ತಿಯನ್ನು ಬಿಟ್ಟು ಕೌದೇನಹಳ್ಳಿಯಲ್ಲಿ ವಾಸವಿದ್ದರು. ಇವರು ಮಗನಿಗೆ, ಹೆಂಡ್ತಿಗೆ ಬಾಡಿಗೆ ಹಣ ನೀಡದೇ ಇದ್ದಿದ್ದರಿಂದ ಗಲಾಟೆಯಾಗಿದೆ. ಈ ವೇಳೆ ಮನೋಜ್ ಕೈ ಗೆ ಸಿಕ್ಕ ಸುತ್ತಿಗೆಯಲ್ಲಿ ನಾರಾಯಣ ಸ್ವಾಮಿಯವರ ತಲೆಗೆ ಹೊಡೆದಿದ್ದಾನೆ..! ಪರಿಣಾಮ ಸ್ಥಳದಲ್ಲೇ ಸಾವು ಸಂಭವಿಸಿದೆ.