ಕಳೆದ ದಿನಗಳ ಹಿಂದೆಯಷ್ಟೇ ಅಂಬುಲೆನ್ಸ್ ಸೇವೆಯಿಲ್ಲದೇ ಪತ್ನಿಯ ದೇಹವನ್ನು ಹತ್ತು ಕಿ.ಮಿ. ವರೆಗೆ ಹೆಗಲ ಮೇಲೆ ಹೊತ್ತೊಯ್ದ ಪತಿಯ ಬಗ್ಗೆ, ತನ್ನ ಹೆಗಲಲ್ಲೇ ಪ್ರಾಣ ಬಿಟ್ಟ ಮಗನ ಬಗೆಗಿನ ವರದಿಗಳು ಮಾಸುವ ಮುನ್ನವೇ ಮತ್ತೊಂದು ಅಘಾತಕಾರಿ ಸಂಗತಿಯೊಂದು ಬೆಳಕಿಗೆ ಬಂದಿದೆ..! ಆಂಬುಲೆನ್ಸ್ ಸೇವೆ ಸರಿಯಾದ ಸಮಯದಲ್ಲಿ ಒದಗಿಸದ ಕಾರಣ ತನ್ನ ತಾಯಿಯ ಮೃತ ದೇಹವನ್ನು ಇಬ್ಬರು ಮಕ್ಕಳು ಸುಮಾರು 12 ಕಿ.ಮಿ ದೂರದವರೆಗೆ ಬೈಕ್‍ನಲ್ಲಿ ಕೂರಿಸಿ ಕೊಂಡೊಯ್ದ ಅಮಾನವಿಯ ಘಟನೆಯೊಂದು ಮಧ್ಯ ಪ್ರದೇಶದ ಸಿಯೋಣಿ ಜಿಲ್ಲೆಯ ಉಲ್ಲಟ್ ಗ್ರಾಮದಲ್ಲಿ ಸಂಭವಿಸಿದೆ. ಅನಾರೋಗ್ಯದಿಂದ ಬಳಲುತ್ತಿದ್ದ ಪಾರ್ವತಮ್ಮ ಭಾಯಿ ಎಂಬ ಮಹಿಳೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಕೆಯ ಸಂಬಂಧಿಕರು ಆಂಬುಲೆನ್ಸ್ ಸಹಾಯ ಕೇಳಿದ್ದರು. ಸುಮಾರು ಗಂಟೆಗಳಾದರೂ ಆಂಬುಲೆನ್ಸ್ ಆಗಮಿಸದಿದ್ದಾಗ ತನ್ನ ಇಬ್ಬರು ಮಕ್ಕಳು ತಾಯಿಯನ್ನು ಬೈಕ್‍ನಲ್ಲಿ ಕೂರಿಸಿಕೊಂಡು ಆಸ್ಪತ್ರೆ ಸಾಗಿಸಿದ್ದರು. ಸುಮಾರು 12 ಕಿ.ಮೀ. ದೂರವಿದ್ದ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ದಾರಿಯ ಮಧಯದಲ್ಲೇ ತಾಯಿಯ ಜೀವ ಹೋಗಿತ್ತು. ನಂತರ ಆಸ್ಪತ್ರೆಯಿಂದ ತಮ್ಮ ಊರಿಗೆ ಆಂಬುಲೆನ್ಸ್ ಸೇವೆ ಕೇಳಿದಾಗ ಅಲ್ಲಿನ ಸಿಬ್ಬಂಧಿ ಇಲ್ಲ ಎನ್ನದೇ ಕಳುಹಿಸಿಕೊಟ್ಟಿದ್ದಾರೆ. ಆದರೆ ಆಂಬುಲೆನ್ಸ್ ಚಾಲಕ ಉಲ್ಲಟ್ ಗ್ರಾಮದವರೆಗೂ ಬಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ..! ಮಕ್ಕಳು ಚಾಲಕನೊಡನೆ ಪರಿಪರಿಯಾಗಿ ಬೇಡಿಕೊಂಡರೂ ಕರಗಲಿಲ್ಲ ಆ ಡ್ರೈವರ್..! ಕೊನೆಗೆ ಆ ಇಬ್ಬರು ಮಕ್ಕಳು ಪುನಃ ತಮ್ಮ ತಾಯಿಯ ಮೃತ ದೇಹವನ್ನು ಬೈಕ್‍ನಲ್ಲಿ ಕುಳ್ಳಿರಿಸಿ ಕೊಂಡೊಯ್ದಿದ್ದಾರೆ. ಆಂಬುಲೆನ್ಸ್ ಸೇವೆ ಸಿಗದೆ ಕಳೆದ ವಾರ ಎರಡು ಪ್ರತ್ಯೇಕ ಘಟನೆಗಳು ದೇಶದಲ್ಲಿ ಬಾರಿ ಚರ್ಚೆಯಾಗಿತ್ತಿರುವುದು ಮಾಸುವ ಮುನ್ನವೇ ಮತ್ತೊಂದು ಅಘಾತಕಾರಿ ಘಟನೆ ಎಲ್ಲರನ್ನು ತಲ್ಲಣಗೊಳಿಸಿದೆ.
POPULAR STORIES :
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?
ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!
ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!
ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!
ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.