ಆತಿಥೇಯ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸಿ ಭಾರತ ತಂಡ 173 ರನ್ ಗಳ ಸವಾಲಿನ ಗುರಿ ನೀಡಿದೆ.
ಕೇಪ್ ಟೌನ್ ನ ನ್ಯೂ ಲ್ಯಾಂಡ್ಸ್ ಮೈದಾನದಲ್ಲಿ ನಡೆಯುತ್ತಿರುವ 3ನೇ ಹಾಗೂ ಕೊನೆಯ ಟಿ20 ಕದನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗಧಿತ ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 172 ರನ್ ಮಾಡಿದೆ.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸುತ್ತಿರುವ ರೋಹಿತ್ ಶರ್ಮಾ 11, ಶಿಖರ್ ಧವನ್ 47, ಸುರೇಶ್ ರೈನಾ 43, ಮನೀಶ್ ಪಾಂಡೆ 13, ಹಾರ್ದಿಕ್ ಪಾಂಡ್ಯ 21, ಎಂ.ಎಸ್ ಧೋನಿ 12, ದಿನೇಶ್ ಕಾರ್ತಿಕ್ 13 , ಅಕ್ಷರ್ ಪಟೇಲ್ ಅಜೇಯ 1, ಭುವನೇಶ್ವರ್ ಕುಮಾರ್ ಅಜೇಯ 3 ರನ್ ಕೊಡುಗೆ ನೀಡಿದ್ದಾರೆ.


3 ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸಿರುವ ಎರಡೂ ತಂಡಗಳಿಗೂ ಈ ಪಂದ್ಯದ ಗೆಲುವು ಮುಖ್ಯ. ಇಲ್ಲಿ ಯಾರ ಕಡೆಗೆ ವಿಜಯಲಕ್ಷ್ಮಿ ಒಲಿಯುತ್ತಾಳೋ ಅವರು ಸರಣಿ ವಿಜೇತರಾಗುವರು.







