ಅವರು ಸ್ಟೈಲೀಶ್, ಡ್ಯಾಶಿಂಗ್..! ಅಷ್ಟೇಅಲ್ಲ ಅವರು ಹಾರ್ಡ್‍ವರ್ಕ್ ಕೂಡ ಮಾಡ್ತಾರೆ…! ಹ್ಞೂಂ, ಅವರು ನಮ್ಮ ಕ್ರಿಕೆಟ್ ಆಟಗಾರರು..! ಉತ್ತಮ ಆಟ ಆಡಿದ್ರೆ ಒಳ್ಳೇ ದುಡಿಮೆಗೂ ಆಗುತ್ತೆ, ಅಭಿಮಾನಿಗಳು ಮೆಚ್ಚಿಕೊಳ್ತಾರೆ, ಪ್ರೋತ್ಸಾಹಿಸ್ತಾರೆ ಎಂಥಲೂ ಗೊತ್ತಿದೆ..! ಅವರು ಎಷ್ಟು ರನ್ ಮಾಡ್ಬೇಕು? ಎಷ್ಟು ಬಾಲ್ ಬಾಕಿ ಇದೆ ಅಂತೆಲ್ಲಾ ಲೆಕ್ಕಹಾಕಿಕೊಂಡು ಆಡ್ತಾರೆ..! ಅವರನ್ನ ಜನ ತುಂಬಾ ಇಷ್ಟಪಟ್ಟು ಪೂಜಿಸ್ತಾರೆ, ಪ್ರೀತಿಸ್ತಾರೆ..! ಇಡೀ ಜಗತ್ತೇ ಅವರ ಆಟಕ್ಕೆ ತಲೆಬಾಗಿದೆ..! ಇಂಥಾ ಅದ್ಭುತ ಜಗಮೆಚ್ಚಿದ ಕ್ರಿಕೆಟ್ ಆಟಗಾರರನ್ನು ನಮ್ಮ ದೇಶ ಕಂಡಿದೆ ಎನ್ನುವುದೇ ನಮ್ಮ ಹೆಮ್ಮೆ..!
ಇಲ್ಲಿ ಕೆಲವು ಭಾರತೀಯ ಕ್ರಿಕೆಟ್ ದಿಗ್ಗಜರ ಪರಿಚಯವಿದೆ..! ಹಾಗೆಂದ ಮಾತ್ರಕ್ಕೆ ಇದು ಅವರ ಹೆಸರು, ವಿಳಾಸ, ಅವರು ಆಡಿದ ಪಂದ್ಯ, ಬಾರಿಸಿದ ರನ್, ಪಡೆದ ವಿಕೆಟ್‍ಗಳ ಅಂಕಿ ಅಂಶದ ವಿವರವಲ್ಲ..! ನೀವ್ಯಾರೂ ಊಹಿಸದ ಅವರ ಶೈಕ್ಷಣಿಕ ಅರ್ಹತೆ ಅಂದ್ರೆ ಎಜುಕೇಷನಲ್ ಕ್ವಾಲಿಫಿಕೇಷನ್‍ನ ಡೀಟೈಲ್ಸ್..!
ಸೌರವ್ ಗಂಗೂಲಿ : ವಿಶ್ವಕಂಡ ಅತ್ಯದ್ಭುತ ಆಟಗಾರ, ನಾಯಕ, ಬ್ಯಾಟಿಂಗ್ ಶಕ್ತಿ..! ಬಂಗಾಲದ ಹುಲಿ, ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅಲಿಯಸ್ ದಾದಾ..! ಇವರು ಪ್ರತಿಷ್ಠಿತ ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದಲ್ಲಿ ಪದವಿ ಪಡದವರು. ನಂತರ ಗೌರವ ಪಿಎಚ್‍ಡಿ (ಡಾಕ್ಟರೇಟ್) ಕೂಡ ನೀಡಲಾಯಿತು.
ಸಚಿನ್ ತೆಂಡೂಲ್ಕರ್ : ಅತೀ ಚಿಕ್ಕವಯಸ್ಸಲ್ಲಿ ಕ್ರಿಕೆಟ್ ಕಡೆ ಗಮನ ನೀಡಿದವರು ಈ ಬ್ಯಾಟಿಂಗ್ ಮಾಂತ್ರಿಕ ಸಚಿನ್ ತೆಂಡೂಲ್ಕರ್..! ವೃತ್ತಿಪರ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡುವ ಮೊದಲು ಶಾರದಾಶ್ರಮ ವಿದ್ಯಾಮಂದಿರದಲ್ಲಿ 12ನೇ ತರಗತಿವರೆಗೆ ಮಾತ್ರ ಓದಿದ್ದಾರೆ ಮಾಸ್ಟರ್ ಬ್ಲಾಸ್ಟರ್..!
ವೀರೇಂದ್ರ ಸೆಹವ್ವಾಗ್ : ಪವರ್‍ಫುಲ್ ಓಪನರ್, ಡ್ಯಾಶಿಂಗ್ ಓಪನರ್ ವೀರೇಂದ್ರ ಸೇಹವ್ವಾಗ್ ಕ್ರಿಕೆಟ್‍ಗೆ ಬರುವ ಮೊದಲು ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಪದವಿ ಮುಗಿಸಿದ್ದರು.
ವಿ.ವಿಎಸ್ ಲಕ್ಷ್ಮಣ್ : ಟೆಸ್ಟ್ ಸ್ಪೆಷಲಿಸ್ಟ್ ವಿ.ವಿ ಎಸ್ ಲಕ್ಷ್ಮಣ್ ಒಬ್ಬ ಹೈಲೀ ಎಜುಕೇಟೆಡ್ (ಹೆಚ್ಚು ಶೈಕ್ಷಣಿಕ ಅರ್ಹತೆ ಹೊಂದಿದ) ಕ್ರಿಕೆಟರ್. ಇವರು ಎಂಬಿಬಿಎಸ್ ಪದವೀಧರ..!
ರಾಹುಲ್ ದ್ರಾವಿಡ್ : ಆಪತ್ಪಾಂಧವ, ಮಹಾಗೋಡೆ ರಾಹುಲ್ ದ್ರಾವಿಡ್ ಸೆಂಟ್‍ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಪಡೆದವರು. ಸೆಂಟ್‍ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಪದವಿ ಪಡೆದವರು. ಭಾರತೀಯ ಕ್ರಿಕೆಟ್ ತಂಡಕ್ಕೆ ಆಮಂತ್ರಣ ಬರುವ ಮೊದಲು ಸೆಂಟ್‍ಜೋಸೆಫ್ ಕಾಲೇಜ್ ಆಫ್ ಬ್ಸುಸ್‍ನೆಸ್ ಅಡ್ಮಿನಿಸ್ಟ್ರೇಷನ್‍ನಲ್ಲಿ ಎಂಬಿಎ ವಿದ್ಯಾರ್ಥಿ..! ಭಾರತ ತಂಡದ ಬಾಗಿಲು ತೆರೆದಾಗ ಅರ್ಧಕ್ಕೆ ಬಿಟ್ಟು ಕ್ರಿಕೆಟ್ ಲೋಕಕ್ಕೆ ಪಾದರ್ಪಣೆ ಮಾಡಿದರು.
ಯುವರಾಜ್ ಸಿಂಗ್ : ಡಿಎವಿ ಪಬ್ಲಿಕ್ ಶಾಲೆಯಲ್ಲಿ 12ನೇ ತರಗತಿ ಮುಗಿಸುವಷ್ಟರಲ್ಲೇ ತನ್ನ ಶಾಲಾದಿನದಲ್ಲೇ ಒಬ್ಬ ಚಾಂಪಿಯನ್ ಆಟಗಾರನಾಗಿ ಹೊರಹೊಮ್ಮಿದ್ದರು ಎಲ್ಲರ ನೆಚ್ಚಿನ ಯುವಿ..! ಕ್ಯಾನ್ಸರ್‍ನಿಂದ ಬಳಲುತಿದ್ದರೂ ಹೋರಾಡಿ, ಉತ್ತಮ ಆಟ ಪ್ರದರ್ಶಿಸಿ ಭಾರತಕ್ಕೆ ವಿಶ್ವಕಪ್ ತಂದಿತ್ತ ಯುವರಾಜ ಓದಿದ್ದು ಮಾತ್ರ 12ನೇ ತರಗತಿ..!
ಅಜಿತ್ ಅಗರ್‍ಕರ್ : ಚೆಂಡು ಹಿಡಿದು ಯಶಸ್ಸಿನ ಹಾದಿ ತುಳಿಯುವ ಮೊದಲು ಅಜಿತ್ ಅಗರ್‍ಕರ್ ಶಾರದಶ್ರಮಾ ವಿದ್ಯಾಮಂದಿರದಲ್ಲಿ ಶಾಲಾ ವಿದ್ಯಾಭ್ಯಾಸ ಮುಗಿಸಿ, ಮತುಂಗಾದ ರುಪೇರಲ್ ಕಾಲೇಜಿನಲ್ಲಿ ಪದವಿಗೆ ಸೇರ್ಪಡೆಯಾಗಿದ್ದರಷ್ಟೇ.
ಅನಿಲ್ ಕುಂಬ್ಳೆ : ಸ್ಪಿನ್ ಮಾಂತ್ರಿಕ,ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ , ಜಂಬೂ ಅನಿಲ್ ಕುಂಬ್ಳೆ ಪ್ರಾರ್ಥಮಿಕ ಶಿಕ್ಷಣವವನ್ನು ಹೋಲಿ ಸೆಂಟ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಮುಗಿಸಿದರು. ನಂತರ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಓದುತ್ತಾರೆ. ಆಮೇಲೆ ಮೆಕನಿಕಲ್ ಇಂಜಿನಿಯರಿಂಗ್ ವಿಷಯದಲ್ಲಿ ಬಿಇ ಪದವಿಯನ್ನು ರಾಷ್ಟ್ರೀಯ ವಿದ್ಯಾಲಯ ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ಪಡೆದರು.
ಜಾವಗಲ್ ಶ್ರೀನಿನಾಥ್ : ಕುಂಬ್ಳೆಯಂತೆ ಜಾವಗಲ್ ಎಕ್ಸಪ್ರೆಸ್ ಜಾವಗಲ್ ಶ್ರೀನಾಥ್ ಒಬ್ಬ ಇಂಜಿನಿಯರ್..! ಮೈಸೂರಿನ ಜಯಚಾಮರಾಜೆಂದ್ರ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇನ್ಸ್ಟ್ರುಮೆಂಟೇಷನ್ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ.
ಜಹೀರ್ ಖಾನ್ : ಶ್ರೀರಾಂಪುರದಲ್ಲಿ ಶಾಲಾ ವಿದ್ಯಾಭ್ಯಾಸ ಮಾಡಿದ ಜಹೀರ್ ಖಾನ್ ನಂತರ ಇಂಜಿನಿಯರಿಂಗ್ ಪದವಿ ಮಾಡಲು ಮುಂದಾಗ್ತಾರೆ..! ಇವರೊಬ್ಬ ಜಾಣ ವಿದ್ಯಾರ್ಥಿ. ಓದುವುದರಲ್ಲಿ ಆಸಕ್ತಿ ಇದ್ದರೂ ಕ್ರಿಕೆಟ್ ಲೋಕ ಕೈ ಬೀಸಿ ಕರೆಯಿತು, ಈ ಓದುವುದನ್ನು ಬಿಟ್ಟು ಬಂದ ಜಹೀರ್ ಬಹುಕಾಲ ಭಾರತ ಕ್ರಿಕೆಟ್‍ನ ಬೌಲಿಂಗ್ ಮುಂದಾಳತ್ವವನ್ನು ವಹಿಸಿದ್ದರು. ನಿರಂತರ ಅನುಭವಿಸುತ್ತಿದ್ದ ಗಾಯದ ಸಮಸ್ಯೆ ನಡುವೆಯೂ ಕಂಗೊಳಿಸಿದ ತಾರೆ ಜಹೀರ್ ಖಾನ್.
ಎಂ.ಎಸ್ ಧೋನಿ : ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ ಎಂ.ಎಸ್ ಧೋನಿ ಕ್ರಿಕೆಟ್‍ಗೆ ಬರುವ ಮೊದಲು ಓದಿನಲ್ಲಿ ಆಸಕ್ತಿಯಿದ್ದರೂ ಕನಿಷ್ಠ 10ನೇ ತರಗತಿ ಓದುವುದು ಕಷ್ಟವಾಗಿತ್ತು, ಆದರೆ ನಂತರದಲ್ಲಿ 12ನೇ ತರಗತಿ ಹಾಗೂ ಬಿ.ಕಾಂ ಪದವಿಯನ್ನೂ ಪಡೆಯುತ್ತಾರೆ ಸೆಂಟ್ ಕ್ಸೇವಿಯರ್ ಕಾಲೇಜಿನಲ್ಲಿ.
ಗೌತಮ್ ಗಂಭೀರ್ : ಭಾರತ ಕಂಡ ಉತ್ತಮ ಓಪನರ್‍ಗಳಲ್ಲಿ ಒಬ್ಬರಾಗಿರುವ ಗೌತಮ್ ಗಂಭೀರ್ ದೆಹಲಿಯ ಮಾರ್ಡನ್ ಸ್ಕೂಲ್‍ನಲ್ಲಿ ಆರಂಭಿಕ ಶಿಕ್ಷಣ ಪಡೆದು, ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನಲ್ಲಿ ಪದವಿ ಪಡೆದರು.
ವಿರಾಟ್ ಕೋಹ್ಲಿ : ಪ್ರಸ್ತುತ ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಶಾಲ್ ಭಾರತ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದವರು. ಇವರು ಇಲ್ಲಿ 12ನೇ ತರಗತಿವರೆಗೆ ಓದಿದ್ದಾರೆ. ಓದಿನಲ್ಲಿ ಚುರುಕಾಗಿದ್ದರೂ ಕ್ರಿಕೆಟ್ ಕಡೆಗಿನ ಆಸಕ್ತಿ ಇಡೀ ವಿಶ್ವವೇ ಇವರತ್ತ ನೋಡುವಂತೆ ಮಾಡಿದೆ. ವಿಶ್ವಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ್ದಾರೆ.
ರವಿಚಂದ್ರನ್ ಅಶ್ವಿನ್ : ಇವರು ಪದ್ಮ ಶೇಷಾದ್ರಿ ಬಾಲ ಭವನದಲ್ಲಿ ವಿದ್ಯಾಭ್ಯಾಸ ಆರಂಭಿಸಿ ನಂತರ ಎಸ್‍ಎಸ್‍ಎನ್ ಕಾಲೇಜ್ ಆಫ್ ಇಂಜಿನಿಯರಿಂಗ್‍ನಲ್ಲಿ ಎಂಟೆಕ್ ಮಾಡಿದವರು.
ಅಜಿಂಕ್ಯಾ ರಹಾನೆ : ಭಾರತ ಕ್ರಿಕೆಟಿನ ಯುವ ಆಟಗಾರ, ಭವಿಷ್ಯದ ನಾಯಕ ಅಜಿಂಕ್ಯಾ ರಹಾನೆ ಎಸ್‍ವಿ ಜೋಸೆಫ್ ಹೈಸ್ಕೂಲ್‍ನಿಂದ ಸೆಕೆಂಡರಿ ಸ್ಕೂಲ್ ಸರ್ಟಿಫಿಕೇಟ್ ಪಡೆದಿದ್ದಾರೆ.
ಹೀಗೆ ಭಾರತ ಕ್ರಿಕೆಟ್‍ನ ಇನ್ನೂ ಅನೇಕ ಆಟಗಾರರು ಪದವಿ ಸ್ನಾತಕೋತ್ತರ ಪದವೀಧರರು. ಕೆಲವರು ಪದವಿಗೂ ಮೊದಲೇ ವಿದ್ಯಾಭ್ಯಾಸ ಮುಗಿಸಿದವರು. ಆದರೆ ಅವರು ಓದಿದ್ದೇ ಬೇರೆ ಆಗಿದ್ದೇ ಬೇರೆ. ಶೈಕ್ಷಣಿಕ ವಿದ್ಯಾರ್ಹತೆಯೊಂದೇ ಜೀವನವಲ್ಲ..! ಶೈಕ್ಷಣಿಕ ಸರ್ಟಿಫಿಕೇಟ್ ನಂಬಿ ಈ ನಮ್ಮ ಕ್ರಿಕೆಟ್ ತಾರೆಯರು ಕೂತಿದ್ದರೆ ಇವತ್ತು ಇವರ್ಯಾರನ್ನೂ ನಾವ್ಯಾರೂ ಗುರುತಿಸ್ತಾ ಇರ್ಲಿಲ್ಲ..! ವಿದ್ಯಾರ್ಹತೆಗಿಂತ ತಮ್ಮೊಳಗಿನ ಪ್ರತಿಭೆಯಂತೆ ಬೆಳೆಯಬೇಕು. ಆಸಕ್ತಿ ಕ್ಷೇತ್ರದಲ್ಲಿ ಮುಂದುವರೆದರೆ ಸಾಧನೆ ಕಟ್ಟಿಟ್ಟ ಬುತ್ತಿ.