ಶೃತಿ ಹರಿಹರನ್ ಕನ್ನಡದ ಖ್ಯಾತ ನಟಿ. ತಮ್ಮ ಚಿತ್ರಗಳಿಗಿಂತ ಇತ್ತೀಚಿಗೆ ಹೆಚ್ಚು ಸುದ್ದಿಯಾಗಿದ್ದು ಮೀಟೂ ವಿವಾದದಲ್ಲಿ. ಅರ್ಜುನ್ ಸರ್ಜಾ ವಿರುದ್ದ ಲೈಂಗಿಕ ಆರೋಪ ಮಾಡಿದ ಶೃತಿ ನಂತರ ಫಿಲ್ಮ್ ಚೇಂಬರ್ ಬಳಿ ಹೋದಾಗ, ಇದನ್ನು ಇತ್ಯರ್ಥ ಮಾಡಲು ಮುಂದಾಗಿದ್ದು ಅಂಬರೀಶ್ ಅವರು..ಆದರೆ ಮೊದಲ ಬಾರಿಗೆ ಅಂಬಿ ಪ್ರಯತ್ನ ವಿಫಲವಾಯಿತು. ಇದಾದ ನಂತರ ಈ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಇದೀಗ ಶೃತಿ ಹರಿಹರನ್ ಹಿರಿಯ ನಟ ಅಂಬರೀಶ್ ಅವರನ್ನು ನೆನಪಿಸಿಕೊಂಡಿದ್ದಾರೆ. ಹೌದು, ಅಂಬರೀಶ್ ಅಣ್ಣನ ಸಾವಿನ ಸುದ್ದಿ ತಿಳಿದು, ನಟಿ ಶೃತಿ ಹರಿಹರನ್ ತಮ್ಮ ಟ್ವಿಟರ್ ನಲ್ಲಿ ಸಂತಾಪ ಸೂಚಿಸಿದ್ದಾರೆ.
ಕಳೆದ ನಾಲ್ಕು ದಶಕಗಳಿಂದ ಅವರ ಚಿತ್ರಗಳ ಮೂಲಕ ನಮ್ಮನ್ನು ಮನರಂಜಿಸಿದರು. ಕಲೆಯ ಮೂಲಕ ನಮ್ಮ ಮನದಲ್ಲಿ ಎಂದಿಗೂ ಉಳಿವಿರಿ. ನಿಮ್ಮ ನಾಗರಹಾವು ಹಾಗೂ ಮಸಣದ ಹೂವು ಚಿತ್ರ ಆಲ್ ಟೈಮ್ ಫೆವರೆಟ್ ಚಿತ್ರಗಳು. ಅಂಬರೀಶ್ ಸರ್ ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬಕ್ಕೆ ಆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಅಂತಾ ಬರೆದುಕೊಂಡಿದ್ದಾರೆ..
ಕೊನೆ ಘಳಿಗೆಯಲ್ಲಿ ಅಂಬಿ ಬಗ್ಗೆ ಶೃತಿ ಹರಿಹರನ್ ಹೇಳಿದ್ದೇನು…?
Date: