ನಮ್ಮ ಪಕ್ಷಕ್ಕೆ ವೋಟ್ ಹಾಕಿಲ್ಲ ಹಾಗಾಗಿ ನಾವು ನೀರು ಬಿಡಲ್ಲ ಎಂದು ಮೈತ್ರಿ ಸರ್ಕಾರದ ಶಾಸಕರೊಬ್ಬರು ಹೇಳಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಬೆಂಗಳೂರಿನ ಹೇರೋಹಳ್ಳಿ ವಾರ್ಡ್ ಏರಿಯಾದ ಜನ ಕಾಂಗ್ರೆಸ್ ಪಕ್ಷಕ್ಕೆ ವೋಟ್ ಮಾಡಿಲ್ಲ ಹೀಗಾಗಿ ಆ ಭಾಗದ ಜನರಿಗೆ ನೀರು ಬಿಡ್ಬೇಡಿ ಅಂತ ಯಶವಂತಪುರ ಶಾಸಕ ಎಸ್.ಟಿ ಸೋಮ್ ಶೇಖರ್ ಕಾರ್ಪೋರೇಟರ್ ರಾಜಣ್ಣಗೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಹೇರೋಹಳ್ಳಿ ವಾರ್ಡ್ ನ ಏಕದಂತ ಬಡಾವಣೆಗೆ ಕಳೆದ ಐದು ತಿಂಗಳಿಂದ ನೀರಿನ ಪೂರೈಕೆ ಇಲ್ಲ. ಈ ಬಡಾವಣೆ ಮತದಾರರು ಬಿಜೆಪಿ ಮತ್ತು ಜೆಡಿಎಸ್ ಪರ ಎಂಬ ಕಾರಣಕ್ಕೆ ಶಾಸಕರು , ಕಾಂಗ್ರೆಸ್ ಕಾರ್ಪೋರೇಟರ್ ನೀರು ಬಿಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಈ ಆರೋಪವನ್ನು ಕಾರ್ಪೋರೇಟರ್ ರಾಜಣ್ಣ ತಳ್ಳಿ ಹಾಕಿದ್ದಾರೆ.