ಎಲ್ರಿಗೂ ಗೊತ್ತಿರೋ ಹಾಗೇ ಸ್ಟೀಲ್ ಬ್ರಿಡ್ಜ್(ಉಕ್ಕಿನ ಮೇಲ್ಸೇತುವೆ) ನಿರ್ಮಾಣ ಮಾಡುವ ಕುರಿತಾಗಿ ಪರ ವಿರೋಧಗಳು ವ್ಯಕ್ತವಾಗಿರೋದು ನೋಡಿರ್ಬೋದು. ಈ ಯೋಜನೆಯಲ್ಲಿ ನೂರಾರು ಕೋಟಿ ವಂಚನೆ ಆಗಿದೆ, ಅಲ್ಲದೇ ಸ್ಟೀಲ್ ಬ್ರಿಡ್ಜ್ ನಿರ್ಮಾಣದಿಂದ ಸುಮಾರು 800ಕ್ಕೂ ಅಧಿಕ ಮರಗಳ ಸರ್ವ ನಾಶವಾಗಲಿದೆ ಎಂದ ಪರ ವಿರೋಧಗಳ ನಡುವೆಯೂ ರಾಜ್ಯ ಸರ್ಕಾರ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾಗಿದೆ. ಈ ಹಿನ್ನಲೆಯಲ್ಲಿ ಬೆಂಗಳೂರು ಅಭಿವೃದ್ದಿ ಸಚಿವ ಕೆ.ಜೆ ಜಾರ್ಜ್ ಅವರು ಜನರಿಗೆ ಸ್ಟೀಲ್ ಬ್ರಿಡ್ಜ್ ಅರಿವು ಮೂಡಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿದ್ದಾರೆ ಎಂದು ಮುಖ್ಯ ಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.. ಈಗಾಗಲೇ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಮಾಡುವುದರಿಂದಾಗುವ ಲಾಭಗಳ ಕುರಿತಾಗಿ ಜಾರ್ಜ್ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಅರಿವು ಕಾರ್ಯ ಆರಂಭಿಸಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ಯೋಜನೆ ಕುರಿತು ಸಮರ್ಥನೆ ನೀಡುವಲ್ಲಿ ಯಶಸ್ವಿಯಾಗಿದ್ದೇವೆ ಎಂದಿದ್ದಾರೆ. ಬೆಂಗಳೂರಿನಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣದ ಕುರಿತಾಗಿ ಜೂನ್ ತಿಂಗಳಲ್ಲಿ ಜನಾಭಿಪ್ರಾಯ ಸಂಗ್ರಹಿಸಿದ್ದಾಗ ಶೇ.75ರಷ್ಟು ಜನರು ಇದಕ್ಕೆ ಬೆಂಬಲ ಸೂಚಿಸಿದ್ದರು ಎಂದು ತಿಳಿಸಿದ ಮುಖ್ಯಮಂತ್ರಿಗಳು ಸರ್ಕಾರ ಬಹು ಜನರ ಅಭಿಪ್ರಾಯಗಳಿಗೆ ಮನ್ನಣೆ ನೀಡಲೇ ಬೇಕು ಎಂದರು. ಈಗಾಗಲೇ ಯೋಜನೆಯ ಕುರಿತಾಗಿ ಕೇಂದ್ರ ಸಚಿವ ಸದಾನಂದ ಗೌಡರಿಗೆ ಜಾರ್ಜ್ ಅವರು ಸಂಪೂರ್ಣ ವಿವರ ನೀಡಿದ್ದಾರೆ. ಬೆಂಗಳೂರಿನ ಎಲ್ಲಾ ಶಾಸಕರೂ ಯೋಜನೆ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಸಹ ಆರಂಭಿಸಿದ್ದಾರೆ. ಅಲ್ಲದೇ ಸಾರ್ವಜನಿಕರಿಗಾಗಿ ಎರಡು 3ಡಿ ವೀಡಿಯೋಗಳನ್ನು ಸಹ ಹರಿಬಿಡಲಾಗಿದೆ ಎಂದರು.
ಇನ್ನು ರಾಜ್ಯದಲ್ಲಿ ಸ್ಟೀಲ್ ಬ್ರಿಡ್ಜ್ ನಿರ್ಮಾಣದ ಕುರಿತಾಗಿ ವ್ಯಾಪಕ ವಿರೋಧಗಳು ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಈ ಕುರಿತು ಮಾತನಾಡಿದ ಜಾರ್ಜ್ ಕೆಲವರು 800ಕ್ಕೂ ಅಧಿಕ ಮರಗಳು ಸ್ಟೀಲ್ ಬ್ರಿಡ್ಜ್ ನಿರ್ಮಾಣ ಕಾರ್ಯದಿಂದ ನಾಶವಾಗಲಿದೆ ಎಂದರೆ ಹೆಬ್ಬಾಳದಲ್ಲಿರುವ ಸುಮಾರು 80.000ಕ್ಕೂ ಅಧಿಕ ಜನರು ಪ್ರತಿನಿತ್ಯ ಟ್ರಾಫಿಕ್ ಜಾಮ್‍ನಿಂದ ಬಳಲುತ್ತಾರಲ್ಲಾ ಅದು ಮುಖ್ಯವಾಗೋದಿಲ್ವ ಎಂದು ಪ್ರಶ್ನೆ ಮಾಡಿದ್ದಾರೆ. ಎಸಿ ಕಾರಿನಲ್ಲಿ ಕುಳಿತು ಎಂದೋ ಒಂದು ದಿನ ಈ ದಾರಿ ಮಾರ್ಗವಾಗಿ ಸಂಚರಿಸುವವರು ಮಾತ್ರ ಈ ಯೋಜನೆಗೆ ಪ್ರತಿರೋಧ ವ್ಯಕ್ತ ಪಡಿಸಿದ್ದೀರಿ. ಒಮ್ಮೆ ಈ ಮಾರ್ಗದ ಮೂಲಕ ಬಸ್‍ನಲ್ಲಿ ಸಂಚರಿಸೋ ಸಾಮಾನ್ಯ ಜನರ ಸ್ಥಿತಿಯನ್ನೊಮ್ಮೆ ಗಮನಿಸಿ ಎಂದಿದ್ದಾರೆ. ನಮ್ಮಂತಹ ಸಾಮಾನ್ಯ ಜನರು ಪ್ರತಿನಿತ್ಯ ಪ್ರಯಾಣ ಬೆಳೆಸುತ್ತೇವೆ. ಈ ವೇಳೆ ಬರುವ ಹೊಗೆ ಧೂಳಿನಂತಹ ಪರಿಸರ ವಿನಾಶ ಮಾಲಿನ್ಯಗಳಿಂದ ಬಳಲುತ್ತಿದ್ದೇವೆ. ಈ ಹಿನ್ನಲೆಯಲ್ಲಿ ಫ್ಲೈವೋವರ್ ಮಾಡುವುದೇ ಒಳ್ಳೆಯದು ಎಂದು ಸ್ಥಳಿಯರಿಂದ ವ್ಯಕ್ತವಾಗಿದೆ.
ಇನ್ನು ಬಸವೇಶ್ವರ ವೃತ್ತದಿಂದ ಹೆಬ್ಬಾಳದ ಎಸ್ಟೀಮ್ ಮಾಲ್‍ವರೆಗೂ ಸ್ಟೀಲ್ ಬ್ರಿಡ್ಜ್ ನಿರ್ಮಾಣ ಮಾಡೋದ್ರಿಂದ ಆಗುವ ಉಪಯೋಗವಾದ್ರೂ ಏನು..? ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗ್ತಿರೋ ಈ ಯೋಜನೆ ಜನರಿಗೆ ಪಾರದರ್ಶಕವಾಗಿದೆಯೇ.. ಇದರ ಲಾಭ ಪಡೆಯುವುದಾದರೂ ಯಾರು ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಈ 3ಡಿ ವೀಡಿಯೋ ಉತ್ತರಿಸುತ್ತೆ ನೋಡಿ..
See video for a 3D Animation of Elevated Road #steelflyover Part 1 pic.twitter.com/UquJLOuDK3
— KJ George (@thekjgeorge) October 22, 2016
See video for Part 2 of 3D Animation of Elevated Road #steelflyover pic.twitter.com/7Jlwu2hYkb
— KJ George (@thekjgeorge) October 22, 2016
Like us on Facebook The New India Times
POPULAR STORIES :
ತರ್ಲೆ ವಿಲೇಜ್ ಅಧಿಕೃತ ಟ್ರೈಲರ್ ರಿಲೀಸ್..!
ಎಲ್ಲಾ ಮಾಧ್ಯಮಗಳಿಗೆ ರಾಕಿಂಗ್ ಸ್ಟಾರ್ ಓಪನ್ ಚಾಲೆಂಜ್..! #Video
ಆ್ಯಪಲ್ ಕಂಪನಿಯ ಸಂಸ್ಥಾಪಕ ಸ್ಟೀವ್ ಜಾಬ್ಸ್ ನ ಕೊನೆಯ ಪತ್ರ
ಅಸಲಿಗೆ ‘ಒಳ್ಳೆಯ ಹುಡುಗ’ನ ಹೆಸರು ಪ್ರಥಮ್ ಅಲ್ಲ..! ಮತ್ತೇನು?
ಮೊಬೈಲ್ ಚಾರ್ಜರನ್ನು ವೈರ್‍ಲೆಸ್ ಚಾರ್ಜರ್ ಆಗಿ ಮಾಡೋ ಸಿಂಪಲ್ ವಿಧಾನ..!