ನನ್ನ ಕಥೆ ಆರಂಭವಾದದ್ದೇ ಕದ್ದ ಒಂದು ಮೊಬೈಲ್‍ನ್ನು ಬಳಿಸಿದ್ದಕ್ಕೆ ಪೊಲೀಸ್ ಸ್ಟೇಷನ್ ಮೆಟ್ಟಿಲೇರೋ ಮೂಲಕ..

Date:

2004 ನಾನು ಮಣ್ಣಲ್ಲಿ ಮಣ್ಣಾಗೋವರೆಗೂ ಮರೆಯಲಾರದ ಒಂದು ಘಟನೆ. ಆಕಾಶದಷ್ಟು ಎತ್ತರದ ಆಸೆ, ಬಯಕೆಗಳನ್ನು ಒಂದೇ ಒಂದು ದೊಡ್ಡ ದಾಳಿಗೆ ಸಿಲುಕಿ ಕುರೂಪಿಯಾಗೋದೆ.. ಆದ್ರೆ ಜೀವನ ನಿರ್ವಹಣೆಯಲ್ಲಲ್ಲ..!
ನನಗೆ ಆಗಿನ್ನು 19ರ ಹರೆಯದ ವಯಸ್ಸು. ಮಧ್ಯಮ ವರ್ಗದಲ್ಲಿ ಬೆಳೆದ ನನಗೆ ಮುಂದೆ ಪ್ರೌಢ ಶಿಕ್ಷಣ ಮುಗಿದ ಮೇಲೆ ಮುಂದೆಯೂ ನನಗೆ ವ್ಯಾಸಾಂಗ ಮಾಡಬೇಕು ಅನ್ನೊ ಮನಸ್ಸಿದ್ದರೂ ಸಹ ಕಡು ಬಡತನದಿಂದ ಬೇರ್ಯಾವ ದಾರಿ ಕಾಣದೇ ಕುಟುಂಬ ನಿರ್ವಹಣೆಗೆ ಆಧಾರವಾಗಬೇಕಿತ್ತು. ಆ ಚಿಕ್ಕ ವಯಸ್ಸಿನಲ್ಲೇ ನಾನು ದುಡಿಯಲು ಆರಂಭಿಸಬೇಕಾಯ್ತು. ಕೆಲಸವನ್ನು ಹುಡುಕಲು ಶುರು ಮಾಡಿದ್ದೆ. ಕೆಲವೇ ದಿನಗಳಲ್ಲಿ ನನಗೆ ಬ್ಯೂಟಿ ಪಾರ್ಲರ್ ಒಂದರಲ್ಲಿ ಕೆಲಸವೂ ಸಿಕ್ಕಿತು. ಮನೆಯವರೊಂದಿಗೆ ಸದಾ ಸಂಪರ್ಕದಲ್ಲಿರಬೇಕೆಂಬ ಬಯಕೆಯಿಂದ ಒಂದು ಮೊಬೈಲ್ ಫೋನ್ ಖರೀದಿಸುವ ಮನಸ್ಸಾಯ್ತು.. ಅದಕ್ಕಾಗಿ ನನಗೆ ಇಷ್ಟವಾಗುವಂತಹ ಮೊಬೈಲ್ ಖರೀದಿಸಲು ಮೂರ್ನಾಲ್ಕು ಅಂಗಡಿಗಳ ಮೆಟ್ಟಲು ಹತ್ತಿದ್ದೆ.. ಆದ್ರೆ ಮೊಬೈಲ್‍ಗೆ ಬಹುಮುಖ್ಯವಾಗಿ ಬೇಕಾಗಿರೋದು ಸಿಮ್ ಅನ್ನೋದು ನನಗೆ ತಿಳಿದಿರಲಿಲ್ಲ. ಅದನ್ನು ಪಡೆಯಲು ಐಡೆಂಟಿ ಕಾರ್ಡ್ ಬೇಕೆಂಬುದು ನನಗೆ ತಿಳಿದೇ ಇರಲಿಲ್ಲ. ಅಷ್ಟೇ ಅಲ್ಲ ನನ್ನ ಬಳಿ ನನ್ನದಾಗಲೀ ಅಥವಾ ನಮ್ಮ ಕುಟುಂಬವರ ಯಾವ ಗುರುತಿನ ಚೀಟಿಯೂ ಇರಲಿಲ್ಲ.
ಸಣ್ಣದೊಂದು ಮೊಬೈಲ್ ಪಡೆಯಲೂ ಆಗದ ದುಸ್ಥಿತಿಯಲ್ಲಿದ್ದೇನಲ್ಲ ಎಂದು ಬಾರಿ ಬೇಸರ, ಸಂಕಟ ಮನಸ್ಸಿನಲ್ಲಿ ಮನೆ ಮಾಡಿತ್ತು. ಆದರೆ ನನ್ನ ನೆರೆಯ ಮನೆಯ ವ್ಯಕ್ತಿಯೋರ್ವ ನನಗೆ ಅತೀ ಕಡಿಮೆ ಬೆಲೆಗೆ ಸಿಮ್ ಹಾಗೂ ಮೊಬೈಲ್ ಕೊಡುವುದಾಗಿ ಹೇಳಿದ್ದ. ನನಗೂ ಖುಷಿಯಾಯ್ತು ಯಾವ ಐಡೆಂಟಿನೂ ಇಲ್ದೆ ಎರಡೂ ಸಿಕ್ತಾ ಇದಾವಲ್ಲ ಅಂತ. ಆದ್ರೆ ಈ ಮೊಬೈಲ್‍ನಿಂದ ಮುಂದೆ ತಾನು ಬಹುದೊಡ್ಡ ಪಜೀತಿಗೆ ಸಿಲುಕುತ್ತೇನೆ ಎಂಬ ಅರಿವೂ ನನಗಿರದೇ ಸುಮಾರು ಒಂದು ವಾರಗಳ ಕಾಲ ಆ ಮೊಬೈಲ್‍ನ್ನು ಬಳಸಿದ್ದೆ. ಆ ಮೊಬೈಲ್‍ನಲ್ಲಿ ಯಾವುದೇ ದೋಷವಿರಲಿಲ್ಲ. ಒಂದೂಳ್ಳೆ ಮೊಬೈಲ್ ಅತೀ ಕಡಿಮೆ ಬೆಲೆಯಲ್ಲಿ ಸಿಕ್ತಲ್ಲ ಎಂದು ಖುಷಿಯಲ್ಲಿದ್ದೆ.. ಆದ್ರೆ ಆ ಖುಷಿ ಪೊಲೀಸರ ಕರೆ ಮಾಡುವವರೆಗೆ ಮಾತ್ರವಾಗಿತ್ತು ನೋಡಿ.. ಒಂದು ದಿನ ನನ್ನ ಮೊಬೈಲ್‍ಗೆ ಪೊಲೀಸ್ ಕರೆಯೋಂದು ಬಂತು. ಎಂದೂ ನಾನು ಒಂದು ಮೂಖ ಪ್ರಾಣಿಗೂ ಹಿಂಸೆ ಮಾಡಿದವಳಲ್ಲ ಆದ್ರೆ ಅಂದು ಪೊಲೀಸರ ಕರೆಯಿಂದ ಸಂಪೂರ್ಣವಾಗಿ ಗರ ಬಡಿದಂತಾಗಿತ್ತು ನೋಡಿ.. ಅವರ ಜೊತೆ ಮಾತನಾಡುತ್ತಿರುವಾಗ್ಲೆಲ್ಲಾ ಭಯದಲ್ಲೇ ಮಾತನಾಡುತ್ತಿದ್ದೆ. ಅವರು ನೀವು ಕದ್ದಿರುವ ಮೊಬೈಲ್ ಬಳಸುತ್ತಿದ್ದೀರ ಅದ್ದಕ್ಕೆ ಸಂಪೂರ್ಣ ಹೋಣೆಗಾರರು ನೀವೆ ಎಂದು ಹೇಳಿದಾಕ್ಷಣ ನನಗೆ ಮಾತೇ ಬಾರದಂತಾಗಿತ್ತು.. ಆದರೂ ನಡೆದ ಎಲ್ಲಾ ಸತ್ಯವನ್ನೂ ಅವರೆದುರು ಹೇಳಿಕೊಂಡೆ. ನಾನು ಯಾವ ತಪ್ಪನ್ನೂ ಮಾಡಿಲ್ಲ ಎಂಬುದು ಅವರಿಗೆ ಪರಿ ಪಕ್ವವಾಗುವಂತೆ ತಿಳಿಸಿದೆ. ನಾನು ಕೆಲಸ ಮುಗಿಸಿ ಮನೆಗೆ ಬರುವ ಸಮದಲ್ಲಾಗಲೇ ಪೊಲೀಸರು ನಮ್ಮ ಮನೆಯ ಮುಂದೆ ಜಮಾಯಿಸಿದ್ದರು. ಅಲ್ಲದೇ ಆ ವ್ಯಕ್ತಿಯನ್ನು ಅರೆಸ್ಟ್ ಮಾಡಿ ಕರೆದುಕೊಂಡು ಹೋದರು. ದುರಾದೃಷ್ಟವಶಾತ್ ಆ ವ್ಯಕ್ತಿ ಮಾರನೆಯ ದಿನವೇ ಬೇಲ್ ಪಡೆದು ಹೊರ ಬಂದಿದ್ದ. ಆತ ನೇರವಾಗಿ ನನ್ನನ್ನೇ ಕಾಣಲು ಬಂದಿದ್ದ ನೋಡಿ.. ಇಡೀ ವಠಾರದ ಮುಂದೆ ಹಾಗೂ ತಮ್ಮ ಮನೆಯವರ ಮುಂದೆ ನೀನು ಕ್ಷಮೆ ಕೇಳಲೇ ಬೇಕು ಎಂದು ಧಮ್ಕಿ ಹಾಕಿದ್ದ. ಯಾವ ತಪ್ಪನ್ನೂ ಮಾಡದ ನಾನೇಕೆ ಎಲ್ಲರ ಮುಂದೆ ಕ್ಷಮೆ ಕೇಳಲಿ..? ಅದು ನನ್ನ ಸ್ವಾಭಿಮಾನಕ್ಕೇ ವಿರುದ್ದವಾದದ್ದು ಎಂದು ಭಾವಿಸತೊಡಗಿತ್ತು. ಆತನೂ ಕೂಡ ನನ್ನಮೇಲೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದ. ಇದನ್ನೆಲ್ಲ ಅರಿತಿದ್ದ ನನ್ನ ತಂದೆ ಪ್ರತಿ ದಿನವೂ ನನಗೆ ಡ್ರಾಪ್ ಮಾಡಲು ಹಾಗೂ ಅಲ್ಲಿಂದ ಕರೆದುಕೊಂಡು ಹೋಗಲು ಬರುತ್ತಿದ್ದರು. ಪ್ರತೀ ದಿನ ಅವನ ಹಾವಳಿ ವಿಪರೀತವಾಗತೊಡಗಿತು. ಅದೋಂದು ದಿನ ನನ್ನ ದುರಾದೃಷ್ಟವೋ ಏನೊ ಗೊತ್ತಿಲ್ಲ ಎಂದಿನಂತೆ ನಮ್ಮ ತಂದೆ ನನ್ನನ್ನು ಕರೆದುಕೊಂಡು ಹೋಗಲು ಬಂದಿರಲಿಲ್ಲ. ಇನ್ನೇನು ಮಡೋದು ನಾನೊಬ್ಬಳೇ ಹೋಗಲೇಬೇಕಾದ ಪರಿಸ್ಥಿತಿಯಿಂದ ಸೀದಾ ಮನೆ ಮುಖ ಮಾಡಿ ನಡೆದೆ. ನನ್ನ ಮನೆಗೆ ಇನ್ನೇನು 25 ಹೆಜ್ಜೆ ಇಡಬೇಕು ಅಷ್ಟರಲ್ಲೆ ಎದುರಿನಿಂದ ಒಂದು ಬೈಕ್‍ನಲ್ಲಿ ಇಬ್ಬರು ಯುವಕರು ಬರೋದನ್ನ ಗಮನಿಸಿದೆ. ಗಾಡಿ ಚಲಾಯಿಸುತ್ತಿರವವನು ತಲೆಗೆ ಹೆಲ್ಮೇಟ್ ಹಾಕಿಕೊಂಡಿದ್ರಿಂದ ಆತನ ಗುರುತು ಸಿಕ್ಕಿಲ್ಲ. ಹಿಂಬದಿ ಕುಳಿತವನು ನಮ್ಮ ಮನೆಯ ನೆರೆಯವ. ಆತನ ಕೈಯಲ್ಲಿ ಸುಮಾರು 5 ಲೀಟರ್ ಕ್ಯಾನ್ ಇತ್ತು. ಇದ್ದಕ್ಕಿದ್ದ ಹಾಗೆ ಆ ವ್ಯಕ್ತಿ ನನ್ನ ಮೇಲೆ ಧಾಳಿ ಮಾಡಲು ಆರಂಭಿಸಿ ಕ್ಯಾನ್‍ನಲ್ಲಿದ್ದ ಲಿಕ್ವಿಡ್‍ನ್ನು ನನ್ನ ಮೇಲೆ ಸುರಿಮಳೆಗೈದ.. ಇಡೀ ದೇಹವೇ ಸುಟ್ಟು ಉರಿಹತ್ತಿದಾಗಲೇ ಗೊತ್ತಾದದ್ದು ಅದು ಆಸಿಡ್ ಎಂದು.. ಆ ದಾಳಿಯಿಂದ ಉರಿ ತಾಳಲಾರದೇ ಕಿರುಚಾಡುತ್ತಿದ್ದರೂ ಇಡೀ ವಠಾರದ ಜನರು ನನ್ನನ್ನು ಮೂಕ ವಿಸ್ಮಿತರಂತೆ ನೋಡಿದರೇ ವಿನಃ ನನ್ನ ಸಹಾಯಕ್ಕೆ ಯಾರೊಬ್ಬರೂ ಧಾವಿಸಿರಲಿಲ್ಲ. ಹೆತ್ತ ಕರುಳು ನಾನು ಅರಚುವ ಸದ್ದಿಗೆ ಓಡೋಡಿ ಬಂದು ನನ್ನ ಅಪ್ಪಿಕೊಂಡು ಚೀರ ತೊಡಗಿದಳು. ಕೊನೆಗೆ ಆಕೆಯೇ ನನ್ನ ಆಸ್ಪತ್ರಗೆ ದಾಖಲಿಸಿದ್ದು. ಇಷ್ಟೇಲ್ಲಾ ಘಟನೆ ನಡೆದದ್ದು ಒಂದು ಸಣ್ಣ ಸೇಡಿಗಾಗಿ ನೋಡಿ.. ಇಡೀ ನನ್ನ ಜೀವನವನ್ನೇ ಕತ್ತಲೆಯ ಕೋಣೆಯೊಳಗೆ ನೂಕಿಬಿಟ್ಟ ಆ ಪಾಪಿ.. ನನ್ನ ತಾಯಿಯೇ ನನ್ನ ಆಧಾರ ಸ್ಥಂಭವಾಗಿ ನಿಂತದ್ದು, ನಾನು ಗುಣಮುಕಳಾಗುವವರೆಗೂ ನನ್ನೆಲ್ಲಾ ಚಾಕರಿಯನ್ನೂ ಆಕೆಯೇ ಮಾಡಿದವಳು. ಈಗಲೂ ಕೂಡ ನಾನೆಲ್ಲೇ ಪ್ರಯಾಣ ಬೆಳೆಸಿದರೂ ಅಲ್ಲಿನ ವಾತಾವರಣ, ನನ್ನ ಯೋಗಕ್ಷೇಮವನ್ನೆಲ್ಲಾ ಕುಲಂಕುಶವಾಗಿ ಜಾಲಾಡಿಬಿಡುತ್ತಾಳೆ.. ಅಷ್ಟೊಂದು ಪ್ರೀತಿ ಆಕೆಗೆ ನನ್ನ ಮೇಲೆ.. ಎಷ್ಟೇ ಜಗಳ ಒಡೆದಾಟ ಆಡುದ್ರೂ ನಾವಿಬ್ಬರೂ ಒಂದೇ.. ಆಕೆಯೇ ನನ್ನ ಸ್ಪೂರ್ತಿ. ಇಂದು ನಾನು ಜೀವಂತವಾಗಿದ್ದೇನೆ ಅಂದ್ರೆ ಅದಕ್ಕೆ ಮೂಲ ಕಾರಣವೇ ನನ್ನಮ್ಮ. ಇಂದಿಗೂ ನನಗೆ ನೆನಪಿದೆ ನಾನು 10ನೇ ತರಗತಿಯಲ್ಲಿ ಕಡಿಮೆ ಅಂಕ ಪಡೆದಾಗ ನನ್ನಮ್ಮ ‘ಇದೇನೂ ಕುಂಭ ಮೇಳವಲ್ಲ 12 ವರ್ಷಕ್ಕೊಮ್ಮೆ ಬರೋಕೆ ನೆಕ್ಸ್ಟ್ ಟೈಮ್ ಚನ್ನಾಗಿ ಬರಿವಂತೆ’ ಏನೇ ಆದರೂ ಜೀ
ವನ ಮುಂದುವರೆಯುತ್ತಲೇ ಇರಬೇಕು ಅದು ಎಂದೂ ನಿಂತ ನೀರಾಗಬಾರದು ಎಂದು ಹೇಳಿದ್ದಳು. ಅಮ್ಮನಿಗೆ ತನ್ನ ಜೀವನದಲ್ಲಿ ಆರ್ಥಿಕವಾಗಿ ಬಾರಿ ತೊಂದರೆಗಳಿದ್ದವು. ಆದ್ರೂ ತಾಯಿ ಜೀವನದಲ್ಲಿ ಎಷ್ಟೇ ಏಳು ಬೀಳುಗಳು ಬಂದರೂ ಅದನ್ನು ಸಹಿಸಿಕೊಂಡು ಮುಂದೆ ಸಾಗಬೇಕು. ಅದನ್ನು ಹಿಂದೆ ತಿರುಗಿ ನೊಡಿ ಅಲ್ಲೇ ನಿಲ್ಲೋ ಬದ್ಲು, ಭವಿಷ್ಯದ ಒಳಿತಿಗಾಗಿ ಮುಂದೆ ಸಾಗುವುದೇ ನಿಜವಾದ ಜೀವನ ಎಂದು ಹೇಳುತ್ತಿದ್ದಳು. ಈ ಒಂದು ಸಂದೆಶ ಇಂದಿಗೂ ನಾನು ಪಾಲಿಸುತ್ತಾ ಬಂದಿದ್ದೇನೆ. ಎಂದೂ ನಾನು ನನ್ನ ಜೀವನದ ಬಗ್ಗೆ ಚಿಂತೆ ಮಾಡಿ ಒಂದೇ ಕಡೆ ನಿಂತಿಲ್ಲ, ಮುಂದೆಯೂ ನಿಲ್ಲೊಲ್ಲ. ಆಸಿಡ್ ದಾಳಿಯಿಂದ ಜೀವನವೇ ನರಕ ಎಂದೆನಿಸಿ ಆತ್ಮಹತ್ಯೆಗೂ ಪ್ರಯತ್ನ ಪಟ್ಟೆ. ಅಂದು ನನಗೆ ಇದೇ ತಾಯಿ ಕಾಪಾಡಿದಳು. ನನ್ನ ಇಡೀ ಜೀವನವೇ ಕತ್ತಲೆಯ ಕೋಣೆಯಲ್ಲಿರುವಂತೆ ಮಾಡಿದ ಆ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ, ಆದ್ರೆ ನಾನು..? ಇನ್ನು ಜೀವನದ ಜಟಕಾ ಬಂಡಿಯಲ್ಲಿ ಪ್ರಯಾಣ ಬೆಳೆಸುತ್ತಾ ಸಾಗುತ್ತಿದ್ದೇನೆ.

  • ಪ್ರಮೋದ್ ಲಕ್ಕವಳ್ಳಿ

source : ದಿ ಲಾಜಿಕಲ್ ಇಂಡಿಯನ್

POPULAR  STORIES :

ನಿಷೇಧಗೊಂಡಿರುವ ಸೈಟ್ ವೀಕ್ಷಿಸಿದರೆ 3 ವರ್ಷ ಜೈಲು ಗ್ಯಾರಂಟಿ…!

ಮೋಸ್ಟ್ ಡೇಂಜರಸ್ ಫೋಟೋಗ್ರಫಿ ಕ್ಲಿಕ್ಸ್…ಈಕೆಯ ಈ ಹುಚ್ಚು ಶೋಕಿಗೆ ಏನನ್ನಬೇಕೋ???

ಅತಿಯಾದ್ರೆ ಹಾಲೂ ಕೂಡ ವಿಷವಾಗುತ್ತೆ ಎಚ್ಚರ…!

ನಮ್ಮ ದೇಶದ ಗಾಡಿಗಳ ನಂಬರ್ ಪ್ಲೇಟ್ ಗಳ ಕಲರ್ ಗಳು ಬೇರೆ ಬೇರೆ ಯಾಕಿವೆ? ನಿಮಗಿದು ಗೊತ್ತೆ??

ಈ ಮಹಿಳೆ ಗರ್ಭ ಧರಿಸಿ ಬರೋಬ್ಬರಿ 17 ತಿಂಗಳಾಯ್ತು, ಇನ್ನೂ ಮಗೂನೇ ಜನಿಸಿಲ್ಲ ನೋಡಿ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...