ನನಗೆ ತುಂಬಾ ಮುಜುಗರ ಆಗ್ತಾ ಇತ್ತು ಕಾರಣ ಸುಮಾರು ನೂರು ಹುಡುಗರ ಮಧ್ಯೆ ನಾನೊಬ್ಬಳೇ ಹುಡುಗಿ…!

Date:

ಚಿಕ್ಕವಳಿದ್ದಾಗ ನಾನು ಮುಲುಂದ್ ಜಿಮ್ಕಾನಾ ಜಿಮ್ನ್ಯಾಸ್ಟಿಕ್ ಕೇಂದ್ರದಲ್ಲಿ ತರಬೇತಿಯನ್ನು ಪಡೆದ್ಕೊಳ್ತಾ ಇದ್ದೆ. ಒಂದು ದಿನ ಒಂದು ದೊಡ್ಡ ಗುಂಪು ಮೈದಾನದಲ್ಲಿ ಕ್ರಿಕೆಟ್ ಆಡೋದನ್ನ ನಾನು ನೋಡ್ತಾ ಹಾಗೇ ಮುಂದೆ ಹೋಗ್ತಾ ಇರ್ವಾಗ, ಬ್ಯಾಟ್ಸ್ ಮೆನ್ ಬಾರಿಸಿದ ಚೆಂಡು ನೇರವಾಗಿ ನನ್ನ ದಿಕ್ಕಿನ ಕಡೆಗೇ ಸಾಗಿ ಬಂತು. ನಾನು ಆ ಬಾಲನ್ನು ಹಿಡಿದು ಮತ್ತೆ ಆಟಗಾರರ ಬಳಿ ಜೋರಾಗಿ ಎಸೆದೆ. ಅದನ್ನು ಗಮನಿಸಿದ ಜಿಮ್ಕಾನಾ ಸಂಸ್ಥೆಯ ಮುಖ್ಯಸ್ಥರಾದ ಸುರ್ವೆ ಸರ್ ನನ್ನನ್ನು ಕರೆದು ನಿನಗೆ ಕ್ರಿಕೆಟ್ ಆಡಲು ಬರುತ್ತಾ ಎಂದು ಕೇಳಿದ್ರು. ನಾನು ನೋ ಸರ್, ನನಗೆ ಆಸಕ್ತಿ ಇಲ್ಲ.. ಬಾಲು ನನ್ನ ಬಳಿ ಬಂದಿದಕ್ಕೆ ಎಸೆದೆ ಎಂದು ಉತ್ತರಿಸಿದೆ. ಅದಕ್ಕೆ ಹುಡುಗೀರು ಈ ರೀತಿ ವೇಗವಾಗಿ ಎಸೆದದ್ದು ನಾನೆಂದೂ ನೋಡಿರಲಿಲ್ಲ ಎಂದು ಸುರ್ವೆ ಸರ್ ಹೇಳಿದ್ರು. ಮರು ದಿನವೇ ನನ್ನ ತಂದೆಯ ಬಳಿ ಮಾತನಾಡಿದ ಅವರು ನನ್ನನ್ನು ಕ್ರಿಕೆಟ್ ತರಬೇತಿಯಲ್ಲಿ ಪಾಲ್ಗೊಳ್ಳುವಂತೆ ಹೇಳಿದರು ಆಗ ನನಗಿನ್ನು ಕೇವಲ 11 ವರ್ಷ..!
ನನಗೆ ಫೀಲ್ಡ್ ನಲ್ಲಿರೊಕೆ ತುಂಬಾನೆ ಮುಜುಗರ ಅನ್ಸೋದು.. ಯಾಕಂದ್ರೆ ಅಲ್ಲಿದ್ದ 100 ಜನ ಹುಡುಗರಲ್ಲಿ ನಾನೊಬ್ಬಳೇ ಹುಡುಗಿ.. ನನಗಿನ್ನೂ ನೆನಪಿದೆ ಅದೊಂದು ದಿನ ನಾನು ಫಿಲ್ಡಿಂಗ್ ಅಭ್ಯಾಸ ಮಾಡ್ತಾ ಇದ್ದ ಸಂದರ್ಭ. ಒಬ್ಬ ಹುಡುಗ ವೇಗವಾಗಿ ನನ್ನ ಬಳಿ ಬಾಲ್ ಎಸೆದ.. ನಿಮ್ಗೆ ಗೊತ್ತಲ್ವಾ.. ಹುಡುಗರು ಎಸೆಯುವ ಬಾಲಿನ ವೇಗ ಹೇಗಿರತ್ತೆ ಅಂತ..! ಆದ್ರೂ ನಾನದಕ್ಕೆಲ್ಲಾ ಬಗ್ಗದೇ ಕ್ಯಾಚ್ ಹಿಡಿದೆ. ಆದ್ರೆ ಆ ಮಹಾನುಭಾವನಿಗೆ ಏನಾಯ್ತೋ ಏನೋ ಗೊತ್ತಿಲ್ಲ..! ನಾನು ಬಾಲು ಹಿಡಿಯಲು ಅವನು ವೇಗವಾಗಿ ನನ್ನ ಕಡೆ ಬಾಲ್ ಎಸೆಯಲು ಆರಂಭಿಸಿದ..! ನಾನೂ ಯಾವ ಬಾಲ್‍ನ್ನೂ ಮಿಸ್ ಮಾಡ್ದೇ ಹಿಡಿತಾ ಇದ್ದೆ. ಆದ್ರೆ ನನ್ನ ಕೈಗಳೆರಡೂ ನೋವಲು ಶುರುವಾಗಿತ್ತು. ನನಗಂತೂ ತಡೆಯಲಾರದ ನೋವುಂಟಾಗಿತ್ತು..! ಇದನ್ನೆಲ್ಲಾ ಗಮನಿಸ್ತಾ ಇದ್ದ ನಮ್ಮ ಕೋಚ್ ನಿತೀನ್ ಸರ್ ಆ ಹುಡುಗನನ್ನು ಕರೆದು ವಾರ್ನ್ ಮಾಡಿದ್ರು. ಕ್ರಮೇಣ ಆ ಹುಡುಗ ನನ್ನನ್ನು ನೋಡಿದಾಗಲೆಲ್ಲಾ ತಲೆ ಬಗ್ಗಿಸಿ ಓಡಾಡಲು ಆರಂಭಿಸಿದ..! ಯಾಕಂದ್ರೆ ಆತ ನನ್ನ ಮೇಲೆ ಆ ರೀತಿ ನಡೆದುಕೊಂಡಿದ್ದಕ್ಕಲ್ಲ…! ಬದಲಾಗಿ ನನ್ನ ಪರ್ಫಾರ್ಮ್ ಎಲ್ಲಾ ಹುಡುಗರನ್ನೂ ನಾಚಿಸುವಂತಿತ್ತು. ಒಂದು ಹೆಣ್ಣು ಬಾಲಕರೊಂದಿಗೆ ಆಡೋದು ಸಾಮಾನ್ಯ ವಿಷಯ ಅಲ್ಲ.. ಅದ್ರಲ್ಲೂ ಅವರಷ್ಟೇ ಸರಿ ಸಮಾನಾಗಿ ಆಟವಾಡೋದು ಅಂದ್ರೆ ಅದು ಸುಲಭದ ಮಾತಾಗಿರಲಿಲ್ಲ..! ಅವರಷ್ಟೇ ಉತ್ತಮ ರೀತಿಯ ಫೀಲ್ಡಿಂಗ್ ಮಾಡಲು ಆರಂಭಿಸಿದೆ. ಹಂತ ಹಂತವಾಗಿ ನಾನು ಎಲ್ಲಾ ವಿಧದಲ್ಲೂ ಫಿಟ್ ಆಗಿ ಹೋಗಿದ್ದೆ.. ನನಗೆ ಇಂದಿಗೂ ಖುಷಿ ಅನ್ನಿಸೋ ವಿಷಯ ಅಂದ್ರೆ ಯಾವೊಬ್ಬ ಕೋಚ್ ಕೂಡ ನಾನೊಬ್ಬ ಹೆಣ್ಣು ಅನ್ನೋ ಭಾವನೆ ಇಟ್ಟುಕೊಂಡಿರಲಿಲ್ಲ…!
ನಾನು 10ನೇ ತರಗತಿ ಓದುತ್ತಿರುವಾಗ್ಲೇ ನನ್ನನ್ನು ಮುಂಬೈ ಅಂಡರ್ 19 ಮಹಿಳಾ ಕ್ರಿಕೆಟ್ ಟೀಮ್‍ಗೆ ಸೆಲೆಕ್ಟ್ ಮಾಡಿದ್ರು. ಆ ವರ್ಷ ನನಗೆ ಬಹಳ ಮಹತ್ವದ ವರ್ಷ ಅಂದ್ರೆ ತಪ್ಪಾಗೊಲ್ಲ ಬಿಡಿ. ಆದ್ರೆ ನಾನಾಡಿದ ಕೆಲವು ಮಹತ್ವದ ಲೀಗ್‍ಗಳಲ್ಲಿ ನನ್ನನ್ನ ಅಷ್ಟೊಂದು ಎತ್ತರಕೇನ್ಕೂ ಸಾಗಿಸಲಿಲ್ಲ. ಆದರೂ ನಾನು ನನ್ನ ಹಾಡ್‍ವರ್ಕ್ ಬಿಟ್ಟಿರಲಿಲ್ಲ. ಹೇಗೆ ಕ್ರಿಕೆಟ್ ನಲ್ಲೂ ಕಠಿಣ ಅಭ್ಯಾಸ ಮಾಡಿದ್ನೋ, ಅದೇ ರೀತಿಯಾಗಿ ನನ್ನ ಓದಿನಲ್ಲೂ ಕೂಡ.. ಕೊನೆಗೆ ನಾನು 2012-13ನೇ ವರ್ಷದ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಗಳಿಸಿ ಡಿಸ್ಟಿಂಕ್ಷನ್ ಬಂದೆ. ಅದಾದ ನಂತರ ನಾನು ದೇಶೀಯ ಕ್ರಿಕೆಟ್ ಪಂದ್ಯಗಳಲ್ಲಿ ಮುಂಬೈ ತಂಡದ ಪರವಾಗಿ ಪ್ರತಿನಿಧಿಸಿದೆ. ಆ ವರ್ಷ ಮುಂಬೈ ಸರಣಿ ಗೆದ್ದಿತ್ತು. ಆ ಸರಣಿ ಗೆದ್ದಿದ್ದಕ್ಕಾಗಿ ಭಾರತ ಮಹಿಳಾ ಕ್ರಿಕೆಟ್ ತಂಡನ ನಾಯಕಿ ಮಿಥಾಲಿ ರಾಜ್ ನನಗೆ ಅವರ ಗ್ಲೌಸ್‍ನ್ನು ಉಡುಗೊರೆಯಾಗಿ ನೀಡಿದ್ದರು. ಅದು ನನ್ನ ಜೀವ ಮಾನದ ಅತೀ ವಿಶೇಷವಾದ ದಿನ ಅಂದ್ರೂ ತಪ್ಪಾಗೊಲ್ಲ..! ಹೀಗೆ ನಾನು ಸುಮಾರು ಮೂರು ವರ್ಷಗಳ ಕಾಲ ಮುಂಬೈ ತಂಡದ ಪರವಾಗಿ ಪ್ರತಿನಿಧಿಸಿದ್ದೆ.
ನನ್ನ ಇಷ್ಟು ದೊಡ್ಡ ಬೆಳವಣಿಗೆಗೆ ಮೂಲ ಕಾರಣ ನನ್ನ ಕುಟುಂಬ.. ಅದರಲ್ಲೂ ನನ್ನ ತಂದೆ.. ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಅವರು ಆಧಾರ ಸ್ಥಂಭವಾಗಿ ನಿಂತಿದ್ದರು. ಒಂದು ಕಡೆ ಕಾಲೇಜು ವ್ಯಾಸಾಂಗ ಮತ್ತೊಂದು ಕಡೆ ನನ್ನ ಕ್ರಿಕೆಟ್, ಇವೆರಡನ್ನೂ ಹೇಗೆ ನಿಭಾಯಿಸಬೇಕು ಎಂದು ಹೇಳಿಕೊಟ್ಟವರು ನನ್ನ ತಂದೆ.. ಅವರ ಸಹಕಾರ ಇರದೇ ಹೋಗಿದ್ರೆ.. ಇಂದು ನಾನು ಈ ಸ್ಥಾನಕ್ಕೆ ಬರಲು ಸಾಧ್ಯವೇ ಆಗ್ತಾ ಇರ್ಲಿಲ್ಲ..!
ನನಗೆ ಇನ್ನೊಂದು ಬೇಸರದ ಸಂಗತಿ ಅಂದ್ರೆ ಪ್ರಸ್ತುತ ಭಾರತದಲ್ಲಿ ಎಲ್ಲಾ ಮಾಧ್ಯಮಗಳೂ ಕೂಡ ಪುರುಷರ ಕ್ರಿಕೆಟ್ ಕಡೆ ಜನರಿಗೆ ಹೆಚ್ಚು ಒಲವು ಮೂಡುವಂತೆ ಮಾಡುತ್ತಾರೆ.. ಅದೇ ಕಾಳಜಿ ನಮ್ಮ ಮಹಿಳಾ ಕ್ರಿಕೆಟ್ ತಂಡಕ್ಕೂ ತೋರಿಸಿ.. ನಮಗೂ ಅವರಂತೆ ಸಪೋರ್ಟ್ ಮಾಡಿ.. ಆ ಮೂಲಕ ನಮ್ಮಲ್ಲೂ ಆತ್ಮ ವಿಶ್ವಾಸ ಮೂಡಿಸಿ ಅನ್ನೋದೆ ನನ್ನ ಆಶಯ…!

  • ಪ್ರಮೋದ್ ಲಕ್ಕವಳ್ಳಿ

source :ಹ್ಯೂಮೆನ್ಸ್ ಆಫ್ ಥಾಣೆ

POPULAR  STORIES :

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

ಸ್ಮಶಾನದಲ್ಲಿದೆ ನಮ್ಮೂರ ಶಾಲೆ: ಒಬ್ರು ಸತ್ರೆ ಮೂರ್ ದಿನ ಶಾಲೆ ರಜೆ..!

ಲಂಡನ್ ಒಲಂಪಿಕ್‍ನಲ್ಲಿ ಕಂಚು ಗೆದ್ದಿದ್ದ ಯೋಗೆಶ್ವರ್‍ಗೆ ಬೆಳ್ಳಿ ಭಾಗ್ಯ..!!

ನಿಮ್ಮ ಸ್ಕಿನ್ ಸಾಫ್ಟ್ ಆಗಬೇಕೆ..? ಹಾಗಿದ್ರೆ ಅಲೋವೇರಾಕ್ಕೆ ಮೊರೆ ಹೋಗಿ….!

ಪಬ್ಲಿಕ್ ಪ್ಲೇಸ್‍ನಲ್ಲೇ ಸೆಕ್ಸ್ ಮಾಡಿ ಸಿಕ್ಕಿಬಿದ್ದ ಹಾಲಿವುಡ್ ಸೆಲೆಬ್ರೆಟಿ…!

ಫೇಸ್‍ಬುಕ್‍ನಲ್ಲಿ ಲೈವ್ ಸಾಹಸ ಪ್ರದರ್ಶನ ತೋರಿಸಲು ಹೋಗಿ ಹೆಣವಾದ..!

Share post:

Subscribe

spot_imgspot_img

Popular

More like this
Related

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ

Elephant Teeth: ಆನೆ ದಂತಕ್ಕೆ ಏಕೆ ಅಷ್ಟೊಂದು ಬೇಡಿಕೆ! ಇಲ್ಲಿ ತಿಳಿಯಿರಿ ಇತಿಹಾಸದುದ್ದಕ್ಕೂ...

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ

ಮಹೇಶ್ ಶೆಟ್ಟಿ ತಿಮರೋಡಿ ಗಡೀಪಾರು ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ಮಂಗಳೂರು: ಮಹೇಶ್...

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ

ಕಲ್ಯಾಣ ಕರ್ನಾಟಕದ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ: ಸಿಸಿ ಪಾಟೀಲ್ ಬೇಸರ ಬೆಂಗಳೂರು:-ಕಲ್ಯಾಣ...

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್

ಅಕ್ರಮ ಆಸ್ತಿ ಕೇಸ್: ಶೃಂಗೇರಿ ಶಾಸಕ ರಾಜೇಗೌಡ್ರಿಗೆ ಲೋಕಾಯುಕ್ತ ಶಾಕ್ ಚಿಕ್ಕಮಗಳೂರು: ಶೃಂಗೇರಿ...