ದುಡ್ಡು ಯಾರಿಗೆ ತಾನೆ ಬೇಡ…? ಎಲ್ರೂ ದುಡ್ಡು ದುಡ್ಡು ಅಂತ ದುಡ್ಡಿನ ಹಿಂದೇ ಬೀಳ್ತಾನೇ ಇರ್ತೀವಿ…ಕಷ್ಟಪಟ್ರೂ ದುಡ್ಡು ಮಾಡಕ್ಕೆ ಆಗಲ್ಲ ಅನ್ನೋ ಸಂಕಟ , ಕೊರಗು ಬಹುತೇಕರನ್ನು ಕಾಡ್ತಿರುತ್ತೆ. ಆದರೆ ಪಿಯುಸಿ ವಿದ್ಯಾರ್ಥಿಯೊಬ್ಬ ಕೆಲವೇ ನಿಮಿಷಗಳಲ್ಲಿ 5,55,55,555 ರೂ ಗಳ ಒಡೆಯನಾಗಿದ್ದಾನೆ…! ಇದು ನಡೆದಿರೋದು ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ…! ಕೇಶವ್ ಶರ್ಮಾ ಎಂಬ ಪಿಯುಸಿ ವಿದ್ಯಾರ್ಥಿ 5 ಕೋಟಿಯ ಒಡಯನಾಗಿದ್ದು…!
ಹೌದು ಬ್ಯಾಂಕ್ ಸಿಬ್ಬಂದಿಯ ತಪ್ಪಿನಿಂದ ಮಾರ್ಚ್ 16ರಂದು ಕೇಶವ್ ಅವರ ತಂದೆಯ ಮೊಬೈಲ್ ಗೆ ಮೆಸೇಜ್ ಬಂದಿದೆ. ಆ ಮೆಸೇಜ್ ನೋಡಿದಾಗ ತಂದೆಗೆ ಅಚ್ಚರಿ ಕಾದಿತ್ತು. ತನ್ನ ಮಗನ ಖಾತೆಗೆ 5,55,55,555ರೂ ಬಂದಿತ್ತು. ಇದನ್ನು ಕಂಡ ತಂದೆ ಮತ್ತು ಮಗ ಕೇಶವ್ ಇಬ್ಬರಿಗೂ ಆಶ್ಚರ್ಯ. ಆದರೆ, ತಮ್ಮ ತಪ್ಪನ್ನು ಅರ್ಥ ಮಾಡಿಕೊಂಡ ಸಿಬ್ಬಂದಿ ಕೇಶವ್ ಖಾತೆಯಲ್ಲಿದ್ದ 1,50,000 ರೂ ಸೇರಿಸಿ ಬಂದ ಕೋಟಿ ರೂ ಹಣವನ್ನು ತೆಗೆದುಕೊಂಡಿದ್ದಾರೆ…! ಇದರಿಂದ ಕೇಶವ್ ತಂದೆ ಅಸಮಾಧಾನಗೊಂಡಿದ್ದಾರೆ. ಈ ಬಗ್ಗೆ ಬ್ಯಾಂಕ್ ನವರಿಂದ ಪ್ರತಿಕ್ರಿಯೆ ಬಂದಿಲ್ಲ.