ಕುಕ್ಕರಗಾಲಿನಲ್ಲಿ ಕುಳಿತು ಕಿವಿ ಹಿಡಿದುಕೊಳ್ಳುವ ಶಿಕ್ಷೆ ನೀಡಿದ್ದರಿಂದ ವಿದ್ಯಾರ್ಥಿಯೊಬ್ಬ ಮೃತಪಟ್ಟ ಘಟನೆ ಚೆನ್ನೈನಲ್ಲಿ ನಡೆದಿದೆ.
ಚೆನ್ನೈನ ತಿರು ವಿ. ಕೆ ನಗರದ ನಿವಾಸಿ ೧೫ ವರ್ಷದ ಬಾಲಕ ನರೇಂದ್ರನ್ ಶಿಕ್ಷಕರು ನೀಡಿದ ಡಕ್ – ವಾಕ್ ಶಿಕ್ಷೆಯಿಂದ ಮೃತಪಟ್ಟಿದ್ದಾನೆ.
ಶಾಲೆಗೆ ತಡವಾಗಿ ಬಂದಿದ್ದಾಕ್ಕಾಗಿ ನರೇಂದ್ರನಿಗೆ ಶಿಕ್ಷಕರು ಶಾಲೆಯ ಮೈದಾನದಲ್ಲಿ ಕುಕ್ಕರುಗಾಲಿನಲ್ಲಿ ಕಿವಿಹಿಡಿದು ಕುಳಿತುಕೊಳ್ಳುವಂತೆ ತಿಳಿಸಿದ್ದಾರೆ. ಸ್ವಲ್ಪ ಹೊತ್ತಿನ ನಂತರ ನರೇಂದ್ರ ಮೈದಾನದಲ್ಲಿ ಕುಸಿದು ಬಿದ್ದಿದ್ದಾನೆ. ಅವನನ್ನು ಖಾಸಗಿ ಆಸ್ಪತ್ರೆಗೆ ದಾಖಲಾಯಿಸಿತು.
ಅಲ್ಲಿನ ವೈದ್ಯರು ಸರ್ಕಾರಿ ಸ್ಟಾನ್ಲಿ ಆಸ್ಪತ್ರೆಗೆ ಕೊಂಡೊಯ್ಯುವಂತೆ ತಿಳಿಸಿದ್ದಾರೆ. ಮಾರ್ಗ ಮಧ್ಯೆ ನರೆಂದ್ರ ಮೃತಪಟ್ಟಿದ್ದಾನೆ.