ವಿದೇಶಕ್ಕೆ ಹೋಗಲು ವೀಸಾ ಸಿಕ್ಕಿಲ್ಲ ಎಂದು ಮನನೊಂದ ಯುವತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಚಂಡೀಗಢದಲ್ಲಿ ನಡೆದಿದೆ.
ಸರಹಾಲಿ ಗ್ರಾಮದ ಪೂರ್ಣಪ್ರೀತ್ ಕೌರ್ (21) ಜೀವ ಕಳೆದುಕೊಂಡ ಯುವತಿ. ವಿದೇಶಕ್ಕೆ ಹೋಗ್ಬೇಕು ಎನ್ನುವ ಕನಸೊಂದಿಗೆ ಇಂಟರ್ ನ್ಯಾಷನಲ್ ಇಂಗ್ಲಿಷ್ ಭಾಷೆ ಪರೀಕ್ಷೆ ತೆಗೆದುಕೊಂಡು ಅದರಲ್ಲಿ ಪಾಸ್ ಆಗಿದ್ರು. ಬಳಿಕ ವೀಸಾಕ್ಕೆ ಅರ್ಜಿ ಸಲ್ಲಿಸಿದ್ರು. ಯಾವ ದೇಶಕ್ಕೆ ಹೋಗುತ್ತಿದ್ದರು ಎಂಬುದು ತಿಳಿದು ಬಂದಿಲ್ಲ. ಆದರೆ, ಯಾವುದೋ ಕಾರಣಕ್ಕೆ ವೀಸಾ ತಿರಸ್ಕøತವಾಗಿದ್ದಕ್ಕೆ ನೊಂದು ಬೆಂಕಿ ಹಚ್ಚಿಕೊಂಡಿದ್ದಾಳೆ..! ಈಕೆಯ ಕಿರುಚಾಟ ಕೇಳಿ ನೆರೆಹೊರೆಯವರು ನೆರವಿಗೆ ಬಂದ್ರು. ಆದ್ರೆ, ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.