ಮಕ್ಕಳಿಗೆ ಏನ್ ಹೇಳಿದ್ರೂ ಕಷ್ಟ…! ಕೆಲವ್ರು ಒಳ್ಳೇದನ್ನು ಹೇಳಿದ್ರೂ ಕೆಟ್ಟದ್ದು ಅಂತ ಅನ್ಕೊಳ್ತಾರೆ. ಈಗ ಮೊಬೈಲ್ ಬಳಕೆ ವಿಪರೀತವಾಗಿದೆ.
ವಿದ್ಯಾರ್ಥಿಗಳು ಓದಿಗಿಂತ ಹೆಚ್ಚು ಟೈಮ್ ಅನ್ನ ಮೊಬೈಲ್ ನಲ್ಲಿ ಕಳೀತಾರೆ. ಮೊಬೈಲ್ ಬಳಕೆ ಕಮ್ಮಿ ಮಾಡಿ ಅಂದ್ರೂ ಮಾಡಲ್ಲ.
ಮೊಬೈಲ್ ಜಾಸ್ತಿ ಬಳಸ್ತಿದ್ದೀಯ , ಬಳಸ್ಬೇಡ ಅಂತ ಬುದ್ಧಿಮಾತು ಹೇಳಿದ್ದಕ್ಕೆ ಬಾಲಕಿ ಆತ್ಮಹತ್ಯೆ ಮಾಡಿ ಕೊಂಡಿರೋ ಘಟನೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದಿದೆ.
ಇಲ್ಲಿನ ಹೆಡ್ ಕಿಂಗ್ಸ್ ಟನ್ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಲಿಖಿತಾ ಆತ್ಮಹತ್ಯೆ ಮಾಡಿಕೊಂಡವಳು. ಈಕೆಯ ಪೋಷಕರು ಕೆಲಸದ ನಿಮಿತ್ತ ಚೆನ್ನೈಗೆ ಹೋಗಿದ್ರು. ಆದ್ದರಿಂದ ತಾಯಿಯ ಅಕ್ಕ ಲಿಖಿತಾಳನ್ನು ನೋಡಿಕೊಳ್ತಿದ್ರು.
ಕಳೆದ ಮೂರು ದಿನಗಳಿಂದ ಶಾಲೆಗೆ ಹೋಗದೇ , ಮೊಬೈಲ್ ನಲ್ಲಿ ಗಂಟೆ ಗಟ್ಟಲೆ ಮಾತಾಡ್ತಿದ್ದಳು. ಇದನ್ನು ನೋಡಿದ ದೊಡ್ಡಮ್ಮ ಜಾಸ್ತಿ ಮೊಬೈಲ್ ಬಳಸ್ತೀಯ. ಅಮ್ಮನಿಗೆ ಹೇಳ್ತೀನಿ ಅಂತ ಹೇಳಿದ್ದಾರೆ.ಅಷ್ಟಕ್ಕೇ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.