ಪತಿಯೊಬ್ಬ ತನ್ನ ಪತ್ನಿಯ ಶೀಲ ಶಂಕಿಸಿ ಆಕೆಯ ಸಾವಿಗೆ ಕಾರಣನಾಗಿರುವ ಘಟನೆ ಬೆಂಗಳೂರಿನ ಭುವನೇಶ್ವರಿ ನಗರದಲ್ಲಿ ನಡೆದಿದೆ.
ತುಳಸಿ ಎಂಬುವವರು ಪತಿಯ ಶಂಕೆಯಿಂದ ಮನನೊಂದು ಆತ್ಮಹತ್ಯೆಗೆ ಶರಣಾದವರು.
ತುಳಸಿ ವಿಪ್ರೋ ಕಂಪನಿಯಲ್ಲಿ ಸಾಫ್ಟ್ ವೇರ್ ಆಗಿ ಕೆಲಸ ಮಾಡುತ್ತಿದ್ದರು. ಈಕೆಯ ಪತಿ ವಿಜಯ್ ಯಾವಾಗಲೂ ಅನುಮಾನ ಪಡುತ್ತಿದ್ದ. ಇದರಿಂದ ಇಬ್ಬರ ನಡುವೆ ಆಗಾಗಾ ಜಗಳ ನಡೀತಿತ್ತು ಎನ್ನಲಾಗಿದೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಭಾನುವಾರ ರಾತ್ರಿಯೂ ಜಗಳವಾಗಿತ್ತು ಎನ್ನಲಾಗಿದೆ. ಇದರಿಂದ ಮನನೊಂದ ತುಳಸಿ ನೇಣು ಬಿಗಿದುಕೊಂಡಿದ್ದರು. ವಿಜಯ್ ಕೂಡಲೇ ಬಾಗಿಲು ಒಡೆದು ತುಳಸಿಯವರನ್ನು ಯೋಗಾನಂದ ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ ಅಷ್ಟರಲ್ಲಾಗಲೇ ತುಳಸಿ ಸಾವನ್ನಪ್ಪಿದ್ದರು.