ಮದುವೆ ಬಗ್ಗೆ ಲಕ್ಷ್ಮೀ ನಾಯ್ಕ್, ಸುಂದರ್ ಗೌಡ ಹೇಳಿದ್ದೇನು….?

Date:

ಮಾಯಕೊಂಡ‌ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ಲಕ್ಷ್ಮೀ ನಾಯ್ಕ್ ಹಾಗೂ ಮಾಸ್ತಿಗುಡಿ ನಿರ್ಮಾಪಕ ಸುಂದರ್ ಗೌಡ ಅವರು‌‌ ಮೊದಲಬಾರಿಗೆ ತಮ್ಮ ಮದುವೆ ರಹಸ್ಯದ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.


ನಾವು ಮೊದಲು ಒಳ್ಳೇ ಫ್ರೆಂಡ್ಸ್ ಆಗಿದ್ವಿ. ಫೋನ್ ಕರೆಗಳ ಮೂಲಕ ಹತ್ತಿರವಾಗಿ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸಲಾರಂಭಿಸಿದ್ವಿ. ನಾನು ಬೇರೆ ಜಾತಿಯವನೆಂದು ಲಕ್ಷ್ಮೀ ಅವರ ಮನೆಯವರು ಪ್ರೀತಿಯನ್ನು ನಿರಾಕರಿಸಿದ್ರು. ಆದರೆ, ನಾನು ಮೊದಲೇ ನಮ್ಮ ಪ್ರೀತಿ ಬಗ್ಗೆ ಅವರ ಬಳಿ ಹೇಳಿದ್ದೆ. ಅವರು ಒಪ್ಪದ ಕಾರಣ ನಾವು ಹೀಗೆ ಮದುವೆ ಆಗ್ಬೇಕಾಯಿತು. 15ದಿನ ಮುಂಚೆಯೇ ಮದ್ವೆ ಪ್ಲಾನ್ ಆಗಿತ್ತು. ‌ಲಕ್ಷ್ಮೀ ತುಂಬಾ ಬಬ್ಲಿ ಹುಡ್ಗಿ, ತುಂಬಾ ಕೇರ್ ಮಾಡ್ತಾಳೆ…ಎಲ್ಲರ ಜೊತೆ ಸೋಶಿಯಲ್ ಆಗಿ ಇರ್ತಾಳೆ. ಆದ್ದರಿಂದ ಅವಳು ನನಗಿಷ್ಟ. ನಮ್ಮ ಈ ನಿರ್ಧಾರದಿಂದ ಎಲ್ರಿಗೂ ನೋವಾಗಿದೆ. ಅದಕ್ಕಾಗಿ ನಾನು ಕ್ಷಮೆ ಕೇಳ್ತೀನಿ. ಯಾವುದೇ ಆಸೆ ಅಥವಾ ವ್ಯಾಮೋಹಕ್ಕೆ ಮದ್ವೆ ಆಗಿಲ್ಲ.‌ಇಷ್ಟಪಟ್ಟು ಮದುವೆ ಆಗಿದ್ದೀವಿ‌‌. ನಾವು ಮಾಡಿದ್ದು ತಪ್ಪು ಅನಿಸಿದ್ರೆ ನಾನು ಕ್ಷಮೆ ಕೇಳ್ತೀನಿ ಅಂತ ಸುಂದರ್ ಗೌಡ ಹೇಳಿದ್ದಾರೆ. ಅದೇ ರೀತಿ ಲಕ್ಷ್ಮೀ ಅವರ ಆಸೆಯಂತೆ ಐಎಎಸ್ ಮಾಡಿಸುವುದಾಗಿಯೂ ಸುಂದರ್ ತಿಳಿಸಿದ್ದಾರೆ.

ಲಕ್ಷ್ಮೀ ಮಾತಾಡಿ, ‘ ನಮ್ ಮನೇಲಿ ಎಲ್ರೂ ಜೊತೆಯಾಗಿ ಕುಳಿತು ಊಟ ಮಾಡ್ಬೇಕು. ಇದು ನಮ್ಮ ತಂದೆಗೆ ಇಷ್ಟ. ಸುಂದರ್ ಗೌಡ ಅವರಲ್ಲಿ ಈ ಗುಣ ಕಂಡೆ‌. ಪ್ರತಿ ಮಗಳಿಗೂ ತಂದೆಯೇ‌ ಮೊದಲ ಹೀರೋ‌…ಹಾಗೆ ನನಗೂ ನನ್ನ ತಂದೆಯೇ ಹೀರೋ. ಸುಂದರ್ ಅವರು ನನ್ನ ತಂದೆಯ ಗುಣ ಹೊಂದಿರುವುದರಿಂದ ನನಗೆ ಇಷ್ಟವಾದ್ರು ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು!

Bangalore: ಬಾರ್‌ʼನಲ್ಲಿ ಕುಡಿಯಲು ಹೋದ ವ್ಯಕ್ತಿ ನಿಗೂಢ ಸಾವು! ಬೆಂಗಳೂರು: ಬಾರ್‌ಗೆ ಕುಡಿಯಲು...

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ 

ಬೆಂಗಳೂರು ಸೇರಿ 13 ಜಿಲ್ಲೆಗಳಲ್ಲಿ ಧಾರಾಕಾರ ಮಳೆ: ಹವಾಮಾನ ಇಲಾಖೆ  ಬೆಂಗಳೂರು: ರಾಜ್ಯದ...

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ ಸೇವಿಸಿ

ಹೃದಯ ಸಮಸ್ಯೆ ಇದ್ದವರಿಗೆ ದಾಳಿಂಬೆ ಬೆಸ್ಟ್ ಅಂತೆ; ನೀವು ಕೂಡ ತಪ್ಪದೇ...

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌

ಮಹಿಳೆಯರಿಗೆ ಗುಡ್‌ ನ್ಯೂಸ್: ವೇತನ ಸಹಿತ ಮುಟ್ಟಿನ ರಜೆಗೆ ಅನುಮೋದನೆ‌ ಬೆಂಗಳೂರು: ಗ್ಯಾರಂಟಿ...