ಏರ್ಟೆಲ್ ಮಾಲೀಕ ಸುನೀನ್ ಮಿತ್ತಲ್… ಇವತ್ತು ಸಾವಿರಾರು ಕೋಟಿ ರೂ ವಹಿವಾಟು ನಡೆಸ್ತಿರೋ ಹೆಸರಾಂತ ಉದ್ಯಮಿ. ಕೋಟಿ ಕೋಟಿ ಹಣವಿರೋ ಇವರು ಹಿಂದೊಮ್ಮೆ ಐದೇ ಐದು ಸಾವಿರ ರೂಪಾಯಿಗೆ ಕಷ್ಟಪಟ್ಟಿದ್ದರಂತೆ…!
ಇದನ್ನು ಸ್ವತಃ ಸುನೀಲ್ ಮಿತ್ತಲ್ ಅವರೇ ಕಾರ್ಯಕ್ರಮವೊಂದರಲ್ಲಿ ಹೇಳಿಕೊಂಡಿದ್ದಾರೆ. 80ರ ದಶಕದಲ್ಲಿ ಸುನೀಲ್ ಅವರು ಸೈಕಲ್ ಬಿಡಿಭಾಗಗಳ ವ್ಯವಹಾರ ಮಾಡ್ತಿದ್ದಾಗ ಒಂದ್ಸಲ 5 ಸಾವಿರ ರೂ ತುರ್ತಾಗಿ ಬೇಕಾಗಿತ್ತಂತೆ. ಆಗ ಯಾರೂ ಯಾರೆಂದರೆ ಯಾರೂ ಇವರಿಗೆ ಐದು ಸಾವಿರ ರೂ ನೀಡಲು ಮುಂದಾಗಿರ್ಲಿಲ್ಲವಂತೆ…!
ಕಷ್ಟದಲ್ಲಿದ್ದ ಮಿತ್ತಲ್ ಉದ್ಯಮಿ ಬ್ರಿಜ್ಮೋಹನ್ಲಾಲ್ ಮುಂಜಾಲ್ ಬಳಿಗೆ ಹೋಗಿ ಅಂಕಲ್ ನನಗೆ 5 ಸಾವಿರ ರೂ ಬೇಕಿತ್ತು ಅಂತ ಕೇಳಿಕೊಂಡ್ರಂತೆ. ಇವರ ಕಷ್ಟಕ್ಕೆ ಸ್ಪಂದಿಸಿದ ಮುಂಜಾಲ್ ಅವರು 5 ಸಾವಿರ ರೂ ಚೆಕ್ ನೀಡಿ ಸಹಾಯ ಮಾಡಿದ್ದರಂತೆ…! ಇಲ್ಲಿಂದ ತಾನು ಹಿಂತಿರಿಗಿ ನೋಡಲಿಲ್ಲ. ಕಷ್ಟಪಟ್ಟು ಮೇಲೆ ಬಂದೆ ಅಂತ ಮಿತ್ತಲ್ ಹೇಳಿಕೊಂಡಿದ್ದಾರೆ.