ಎಫ್.ಎಮ್.ಸಿ.ಜಿ ಮಾರುಕಟ್ಟೆಯು (ಅಂದರೆ ಕ್ಷಿಪ್ರಗತಿಯಲ್ಲಿ ಮಾರಾಟವಾಗುತ್ತಿರುವ ಗ್ರಾಹಕ ವಸ್ತುಗಳು) ಇನ್ನೂ ಭಾರತದ ಮಾರುಕಟ್ಟೆಯ ಹಿಡಿತ ಸಾಧಿಸುವ ಹಾದಿಯಲ್ಲಿ ಇದೆ ಹಾಗು ಈ ಕಾರಣಕ್ಕೆ ದೇಶದ ಗ್ರಾಹಕರು ಹಲವು ಬ್ರಾಂಡ್ ಕಡೆಗೆ ಏಕ ಕಾಲಕ್ಕೆ ಆಕರ್ಷಿತರಾಗುತ್ತಿದ್ದಾರೆ .
ಐ.ಟಿ.ಸಿ, ಗ್ಲಾಕ್ಷೊ ಸ್ಮಿತ್ . ಪಿಡಿಲೈಟ್ , ಅಮುಲ್ ,ಗೋದ್ರೆಜ್ ಹಾಗು ಇನ್ನಿತರ ಬ್ರಾಂಡ್ ಗಳು ಮಾರುಕಟ್ಟೆಯನ್ನು ಆಳುತ್ತಿದೆ ಎಂದು ನಾವು ಸದ್ಯಕ್ಕೆ ನಂಬಲೇಬೇಕು . ಆದರೆ ಇದರ ಜೊತೆಗೆ ಎತ್ತರಕ್ಕೆ ಜಿಗಿದು ಬೆಳೆಯುತ್ತಿರುವ ಮತ್ತೊಂದು ಬ್ರಾಂಡ್ ಇದೆ.
ಕಳೆದ 5 ವರ್ಷಗಳಲ್ಲಿ, ಐ.ಟಿ.ಸಿ ಕಂಪನಿಯ ಆಸ್ತಿಯು ತನ್ನ ಅಭಿವೃದ್ದಿ ಯೋಜನೆಗಳಿಂದ ಶೇಕಡಾ 72 ರಷ್ಟು ಹಾಗು ತನ್ನ ಯಂತ್ರದಲ್ಲಿ 24000 ಕೋಟಿಯಷ್ಟು ಲಾಭ ಪಡೆದಿದೆ, ಆದರೆ 2015-16 ನಲ್ಲಿ ಪತಂಜಲಿ ಶೇಕಡಾ 150ಕ್ಕೂ ಹೆಚ್ಚು ಬೆಳೆದು ಎಲ್ಲ ಬೇರೆ ಸ್ಪರ್ಧಾಳುಗಳಿಗೆ ಅಚ್ಚರಿ ಹಾಗು ಹೊಡೆತ ಕೊಟ್ಟಿದೆ.
ಕೆಲ ವರ್ಷದಿಂದ, ಪತಂಜಲಿಯು ಇಲ್ಲಿನ ಮಾರುಕಟ್ಟೆಯ ಅನುಗುಣವಾಗಿ ಹೊಂದಿ ತನ್ನನು ತಾನು ಬೇರೆ ವ್ಯಾಪಾರದ ದಿಗ್ಗಜರ ಸಮಾನ ಗುರುತಿಸಿಕೊಂಡಿದೆ.
ದಶಕದ ಹಿಂದೆ, ಬಾಬ ರಾಮ್ ದೇವ್ ತನ್ನ ದೀರ್ಘ ಕಾಲದ ಆಪ್ತರಾದ, ಆಚಾರ್ಯ ಬಾಲಕೃಷ್ಣ ಜೊತೆ ಸೇರಿ ಪತಂಜಲಿ ಯನ್ನು ಸ್ಥಪಿಸಿದರು. ಇಂದು, ಪತಂಜಲಿ 500ಕ್ಕೂ ಹೆಚ್ಚು ಪದಾರ್ಥಗಳನು ಉತ್ಪಾದಿಸುತ್ತದೆ ಹಾಗು ಅವರ ಇತ್ತೀಚಿನ ಹೊಸ ವಸ್ತು ಸ್ವದೇಶೀ ಜೀನ್ಸ್ಅನ್ನು ಮರೆಯಬಾರದು.
ಪತಂಜಲಿ ಈಗ ಮನೆ ಮನೆಯ ಮಾತಾಗಿದೆ, ಅದಲ್ಲದೆ ಭಾರತದ ಬಹುವೇಗದಲ್ಲಿ ಅಭಿವೃದ್ಧಿ ಹೊಂದಿದ ಬ್ರಾಂಡ್ ಆಗಿದೆ. ಈಗ ಪತಂಜಲಿಯ ಮೌಲ್ಯ $450 ಮಿಲಿಯನ್ ಆಗಿದ್ದು ಹಾಗು $74೦ ಮಿಲಿಯನ್ ಲಾಭವನ್ನು ಪಡೆಯುತ್ತಿದೆ. ನಾವೆಲ್ಲರೂ ಇದರಲ್ಲಿ ಹೆಚ್ಹು ಹಣಗಳಿಕೆ ಮಾಡುತ್ತಿರುವುದು ಬಾಬಾ ರಾಮ್ ದೇವ್ ಎಂದು ತಿಳಿದಿದ್ದೇವೆ, ಆದರೆ ಪತಂಜಲಿಯ ಶೇಕಡಾ 94ರಷ್ಟು ಒಡೆತನ ಆಚಾರ್ಯ ಬಾಲಕೃಷ್ಣರ ಹೆಸರಿನಲ್ಲಿದೆ.
ಕೇವಲ 44ರ ಹರೆಯದ ಬಾಲಕೃಷ್ಣ 25,600 ಕೋಟಿಯಷ್ಟು ಆಸ್ತಿ ಗಳಿಕೆ ಮಾಡಿ ಭಾರತದ ಶ್ರೀಮಂತರ ಗುಂಪನ್ನು ಭರ್ಜರಿಯಾಗಿ ಸೇರಿದ್ದಾರೆ .
ಡಾಬರ್ ನ ಆನಂದ್ ಬರ್ಮನ್ ಹಾಗು ಬ್ರಿಟಾನಿಯಾದ ನುಸ್ಲಿ ವಾಡಿಯಾರವರ ಹೆಸರು ಇರುವ ಪಟ್ಟಿಯಾದ ಹುರುನ್ ಭಾರತ ಶ್ರೀಮಂತರ ಪಟ್ಟಿಯಲ್ಲಿ ಬಾಲಕೃಷ್ಣರ ಹೆಸರನ್ನು ಸೇರಿಸಲ್ಪಟ್ಟಿದೆ.
ಬಾಲಕೃಷ್ಣ ಈಗ ಸಾಂಪ್ರದಾಯಿಕ ಸ್ಪರ್ಧಾಳುವಾಗಿರುವ ಡಾಬರ್ ಹಾಗು ಗೋದ್ರೆಜ್ ಅನ್ನು ಹಿಂದಿಕ್ಕಿ ಭಾರತದ ಐದನೇ ಅತಿ ದೊಡ್ಡ ಎಫ್.ಅಂ.ಸಿ.ಜಿ ಕಂಪನಿಯ ಒಡೆಯರಾಗಿದ್ದಾರೆ. ಅವರ ಪ್ರಕಾರ, ಸಾಂಪ್ರದಾಯಿಕವಾದ ಮಾರಾಟ ವಿಧಾನವನ್ನು ಧಿಕ್ಕರಿಸಿ ಹಾಗು ಅದನ್ನು ಮೆಟ್ಟಿ ನಿಂತಿದ್ದಕ್ಕಾಗಿ ಇಂದು ಪತಂಜಲಿ ಬಲಿಷ್ಠ ಬ್ರಾಂಡ್ ಗಳ ಜೊತೆ ಗುರುತಿಸಿಕೊಂಡಿದೆ.
“ಗ್ರಾಮೀಣ ಮಾರುಕಟ್ಟೆಯ ಸಂಚರಿಸುವ ಲಾರಿ ಹಾಗು ಟೆಂಪೋ ಸಹಾಯದಿಂದ ನಮ್ಮ ಮಾರುಕಟ್ಟೆಯನ್ನು ವಿಸ್ತರಿಸುತ್ತೇವೆ. ಮೊದಲಿಗೆ 500-600 ಟೆಂಪೋ ಗಳಿಂದ ಶುರು ಮಾಡಿ ಹಾಗು ಕ್ರಮೇಣ ಸಂಪರ್ಕಗಳನ್ನು ವಿಸ್ತರಿಸುತ್ತೇವೆ” ಎಂದು ಬಾಲಕೃಷ್ಣ ಹೇಳಿದರು.
ಕಠಿಣ ಪರಿಶ್ರಮದಿಂದಲೇ ಕಡಿಮೆ ಸಮಯದಲ್ಲಿ ಪತಂಜಲಿಯು 5000 ಕೋಟಿ ರೂಪಾಯಿ ಮೌಲ್ಯದ ಕಂಪನಿಯಾಗಿ ಬೆಳೆದಿರುವುದು ಎಂದು ಬಾಲಕೃಷ್ಣರವರು ನಂಬಿದ್ದಾರೆ.
- ಸುಪ್ರೀತ್ ವಸಿಷ್ಟ
POPULAR STORIES :
ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.
ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!
ಬಂದ್ ಎಫೆಕ್ಟ್: ರಾಜ್ಯಕ್ಕೆ ಇಪ್ಪತ್ತೈದು ಸಾವಿರ ಕೋಟಿ ಲಾಸ್..!
ಪ್ಯಾರಾಲಿಂಪಿಕ್‍ನಲ್ಲಿ ಭಾರತಕ್ಕೆ ಬೆಳ್ಳಿಯ ಬೆಳಕು ನೀಡಿದ ದೀಪಾ..
ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..
ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!
ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?
ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…