ಸಿರಿಯಾದಲ್ಲಿ ರಕ್ತಕ್ರಾಂತಿ ಮುಂದುವರೆದಿದೆ.ಮತ್ತೆ ಅಮಾಯಕ ಜೀವಗಳು ಬಲಿಯಾಗಿವೆ.
ಹೌದು ರಾಸಾಯನಿಕ ಬಾಂಬ್ ದಾಳಿ ನಡೆದಿದ್ದು 70ಕ್ಕೂ ಹೆಚ್ಚಿನ ಮುಗ್ಧ ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಪಶ್ಚಿಮ ಸಿರಿಯಾದ ಘೋಟ ಎಂಬಲ್ಲಿ ಘಟನೆ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ದಾಳಿ ಹಿನ್ನೆಲೆಯಲ್ಲಿ ಅಮೆರಿಕಾ ಮೂಲದ ಸಂಸ್ಥೆಯೊಂದು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ವೈದ್ಯಕೀಯ ನೆರವಿನ ಕಾರ್ಯ ಭರದಿಂದ ಸಾಗಿದೆ.