ಬಹು ಜನಪ್ರಿಯ ಕ್ರೀಡೆ ಕ್ರಿಕೆಟ್‍ನಲ್ಲಿ ಕಾಲದಿಂದ ಕಾಲಕ್ಕೆ ಬದಲಾವಣೆಗಳು ನಡೆಯುತ್ತಿವೆ. ಟೆಸ್ಟ್ ಕ್ರಿಕೆಟ್ ಬಳಿಕ, ಏಕದಿನ ಕ್ರಿಕೆಟ್ ಪಂದ್ಯಗಳು ಕ್ರಿಕೆಟ್ ನಲ್ಲಿ ಉದಯಿಸಿದವು.
ಟೆಸ್ಟ್, ಏಕದಿನ ಕ್ರಿಕೆಟ್‍ನ ಬಳಿಕ ಇದೀಗ ಟಿ20 ಕ್ರಿಕೆಟ್ ಹುಟ್ಟಿಕೊಂಡಿರುವುದೂ ಸಹ ಇತಿಹಾಸ. ನಿರಂತರ ಒಂದಿಲ್ಲೊಂದು ಬದಲಾವಣೆ ಕ್ರಿಕೆಟ್‍ನಲ್ಲಿ ಆಗುತ್ತಿದೆ. ಸದ್ಯ ಟಿ20 ಜಮಾನ. ಆದರೆ, ಇದನ್ನು ಹಿಮ್ಮೆಟ್ಟಿಸಿ ಟಿ10 ಚುಟುಕು ಕ್ರಿಕೆಟ್ ಪರ್ವ ಆರಂಭವಾಗುವ ಕಾಲ ಸನ್ನಿಹಿತವಾಗಿದೆ.
ಟಿ10 ಕ್ರಿಕೆಟ್ ಆರಂಭವಾಗ್ತಾ ಇರೋದು ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ. ಡಿಸೆಂಬರ್ 21ರಿಂದ 24ರವರೆಗೆ ಶಾರ್ಜಾದಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‍ನಲ್ಲಿ 10 ಓವರ್‍ಗಳ (ಟೆನ್-ಟೆನ್) ಕ್ರಿಕೆಟ್ ಲೀಗ್ ನಡೆಯಲಿದೆ. ಒಂದು ಪಂದ್ಯ 90 ನಿಮಿಷದಲ್ಲಿ ಮುಗಿದೇ ಹೋಗುತ್ತೆ! ಈ ಲೀಗ್‍ನಲ್ಲಿ 4 ತಂಡಗಳು ಪಾಲ್ಗೊಳ್ಳಲಿದ್ದು, ಮಾಜಿ ಆಟಗಾರರು ಈ ಮೂಲಕ ಮತ್ತೆ ಕಣಕ್ಕಿಳಿಯಲಿದ್ದಾರೆ. ಭಾರತ ತಂಡದ ಮಾಜಿ ಸ್ಪೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್, ಪಾಕಿಸ್ತಾನದ ಶಾಹಿದ್ ಆಫ್ರಿದಿ, ಇಂಗ್ಲೆಂಡ್‍ನ ಇಯಾನ್ ಮೊರ್ಗನ್, ಶ್ರೀಲಂಕಾದ ಕುಮಾರ ಸಂಗಾಕ್ಕಾರ ಮತ್ತಿತರರು ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ.
ಹೀಗೆ ಟಿ10 ಪರ್ವ ಶುರುವಾಗಲಿದ್ದು, ಎಷ್ಟರಮಟ್ಟಿಗೆ ಯಶಸ್ವಿ ಆಗುತ್ತೆ ಎನ್ನುವುದನ್ನು ಕಾದುನೋಡಬೇಕು.