ಹ್ಯಾಟ್ರಿಕ್ ಹೀರೋ, ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಅಭಿನಯದ ಟಗರು ಚಿತ್ರದ ಬಗ್ಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮನಬಿಚ್ಚಿ ಮಾತಾಡಿದ್ದಾರೆ.
ಟಗರು ಚಿತ್ರದ ಬಗ್ಗೆ ಟ್ವಿಟರ್ ನಲ್ಲಿ ಸುದೀಪ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಟಗರು ಸಿನಿಮಾದ ನಿರೂಪಣೆ ತುಂಬಾ ಚೆನ್ನಾಗಿದೆ.
ತೆರೆಮೇಲೆ ಬರುವ ಪ್ರತಿಯೊಂದು ಪಾತ್ರವೂ ಜನರನ್ನು ಕನ್ಫ್ಯೂಸ್ ಮಾಡುತ್ತದೆ. ಕಥೆ ಹೇಳುವ ವಿಭಿನ್ನ ರೀತಿಯಲ್ಲಿ ಕಥೆ ಹೇಳುವ ಪ್ರಯತ್ನ ತುಂಬಾ ಚೆನ್ನಾಗಿದೆ. ಪ್ರತಿಯೊಂದು ಪಾತ್ರವೂ ಕಾಡುತ್ತದೆ. ಇಂತಹ ಸಿನಿಮಾ ನಿರ್ದೇಶಿಸುವುದು ಸೂರಿಯಿಂದ ಮಾತ್ರ ಸಾಧ್ಯ. ಶಿವರಾಜ್ ಕುಮಾರ್ ಅವರ ಅಭಿನಯ, ಎನರ್ಜಿ ತುಂಬಾ ಚೆನ್ನಾಗಿದೆ. ತೆರೆಮೇಲೆ ಶಿವರಾಜ್ ಕುಮಾರ್ ಅದ್ಭುತವಾಗಿ ಕಾಣಿಸುತ್ತಾರೆ ಎಂದಿದ್ದಾರೆ ಸುದೀಪ್.
ಧನಂಜಯ್ ಅವರ ಸ್ಕ್ರೀನ್ ಅಪಿರಿಯನ್ಸ್ ಹಾಗೂ ಪಾತ್ರ ಎರಡನ್ನು ಸುದೀಪ್ ತುಂಬಾ ಇಷ್ಟಪಟ್ಟಿದ್ದಾರೆ. ವಸಿಷ್ಠ ಧ್ವನಿ ಇಷ್ಟವಾಗುತ್ತದೆ. ಚಿಟ್ಟೆ ಪಾತ್ರವನ್ನು ಪ್ರೀತಿ ಮಾಡುವಂತೆ ಮಾಡುತ್ತದೆ ಎಂದಿದ್ದಾರೆ ಸುದೀಪ್. ಅದೇರೀತಿ ಸಂಗೀತಕ್ಕೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.