ಕಾವೇರಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‍ನ ಆದೇಶವನ್ನು ಖಂಡಿಸಿ ಶುಕ್ರವಾರ ಕರ್ನಾಟಕ ರಾಜ್ಯಾದ್ಯಂತ ಹಲವಾರು ಕನ್ನಡ ಪರ ಸಂಘಟನೆಗಳು ಬಂದ್‍ಗೆ ಕರೆ ನೀಡಿರುವ ಹಿನ್ನಲೆಯಲ್ಲಿ, ಕರ್ನಾಟಕ ಕೇಬಲ್ ಆಪರೇಟರ್ ಅಸೋಶಿಯೇಷನ್ ತಮಿಳು ನಾಡಿನ ಚಾನಲ್‍ಗಳನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಈ ಮೂಲಕ ಶುಕ್ರವಾರ ನಡೆಯಲಿರುವ ಬಂದ್‍ಗೆ ಕೇಬಲ್ ಅಪರೇಟರ್‍ಗಳು ಬೆಂಬಲ ನೀಡಿದ್ದಾರೆ. ಶುಕ್ರವಾರದಂದು ತಮಿಳುನಾಡಿನ ಚಾನಲ್‍ಗಳಾದ ಸನ್ ನೆಟ್‍ವರ್ಕ್, ಜಯಾ, ರಾಜ್ ಸೇರಿದಂತೆ ಹಲವಾರು ನ್ಯೂಸ್ ಹಾಗೂ ಮನರಂಜನಾ ಚಾನಲ್‍ಗಳನ್ನು ಸ್ಥಗಿತಗೊಳಿಸಲಾಗುವುದು ಎಂದು ಕೇಬಲ್ ಅಪರೇಟರ್ಸ್ ಅಸೋಸಿಯೇಷನ್ ಅಧ್ಯಕ್ಷ ಪ್ಯಾಟ್ರಿಕ್ ರಾಜು ತಿಳಿಸಿದ್ದು, ಈ ಕುರಿತು ಕೇಬಲ್ ಆಪರೇಟರ್ಸ್‍ಗಳೆಲ್ಲರೂ ಇಂದು ಸಭೆ ಸೇರಿ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ ಎಂದರು
POPULAR STORIES :
ಇನ್ಮುಂದೆ ಡ್ರೈವ್ ಮಾಡಲು ಡಿಎಲ್,ಆರ್‍ಸಿ, ಡಿಜಿಲಾಕರ್‍ನಲ್ಲಿದ್ದರೆ ಸಾಕು..!
ಸೆಪ್ಟೆಂಬರ್ 9ಕ್ಕೆ ಕರ್ನಾಟಕ ಬಂದ್‍ಗೆ ಕರೆ
ಮುಸ್ಲೀಂ ಮಕ್ಕಳಿಗೆ ಕುರಾನ್ ಹೇಳಿ ಕೊಡ್ತಾಳೆ ಈ ಹಿಂದು ಯುವತಿ..!
ತಮಿಳುನಾಡಿಗೆ ಕಾವೇರಿ ನೀರು: ಮಂಡ್ಯದಲ್ಲಿ ಭುಗಿಲೆದ್ದ ಆಕ್ರೋಶ.
ದೇಹದಲ್ಲಿರೋ ವಿಟಮಿನ್ ಕೊರತೆಯನ್ನು ಪತ್ತೆ ಹಚ್ಚುವುದು ಹೇಗೆ..??
ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!
ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?