ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆಗೆ ತೀವ್ರಗೊಂಡ ಆಕ್ರೋಶ..!

admin
By admin
1 Min Read

ಕಾವೇರಿ ನದಿ ನೀರಿನ ವಿವಾದ ಕುರಿತಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಪ್ರತಿಭಟನೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ಹಲ್ಲೆ ನಡೆಸಿದರಲ್ಲದೇ, ಕನ್ನಡಿಗರ ಆಸ್ತಿ ಪಾಸ್ತಿಯನ್ನು ಹಾನಿ ಮಾಡಿದ್ದಾರೆ. ಇದರಿಂದ ತಮಿಳುನಾಡಿನಲ್ಲಿರುವ ಕನ್ನಡಿಗರಲ್ಲಿ ಭಯದ ವಾತಾವರಣ ನಿಮಾಣವಾಗಿದೆ.
ತಮಿಳುನಾಡಿನಲ್ಲಿ ರಾಜ್ಯದ ವಾಹನಗಳ ಮೇಲೆ ಪ್ರತಿಭಟನಾಕಾರರು ದಾಳಿ ನಡೆಸಿ ಬಸ್, ಕಾರುಗಳ ಲಾರಿಗಳ ಮೇಲೆ ಧಾಳಿ ನಡೆಸಿದ್ದಾರೆ. ಅಲ್ಲದೇ ತಮಿಳುನಾಡಿನಲ್ಲಿರುವ ಹೋಟೆಲ್ ಗಳ ಮೇಲೆ ದಾಳಿ ನಡೆಸರುವ ತಮಿಳನಾಡಿನ ಜನರು ಅಲ್ಲಿನ ಕನ್ನಡಿಗರ ಮೇಲೆ ಹಲ್ಲೆ ಮಾಡಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ತಮಿಳುನಾಡಿನ ಆಸ್ಪತ್ರೆಗಳಲ್ಲಿ ಕನ್ನಡಿಗರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ ಎನ್ನಲಾಗಿದೆ.
ಇನ್ನು ತಮಿಳುನಾಡಿನಲ್ಲಿ ರಾಜ್ಯದ ಜನತೆಯ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಬೆಳಗಾವಿಯಲ್ಲಿ ಪ್ರವೀಣ್ ಶೆಟ್ಟಿ ಬಣದ ಕರವೇ ಕಾರ್ಯಕರ್ತರು ರಸ್ತೆ ತಡೆ ನಡೆಸಿ ತಮ್ಮ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇನ್ನು ಮಂಡ್ಯದಲ್ಲಿ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ತಮಿಳುನಾಡಿನಲ್ಲಿನ ಪ್ರತಿಭಟನಾಕಾರರ ವಿರುದ್ದ ಪ್ರತಿಭಟನೆ ನಡೆಸಿದ್ದಾರೆ.

POPULAR  STORIES :

ತಮಿಳರಿಂದ #Wehatekarnataka ಟ್ವಿಟರ್ ಟ್ರೆಂಡ್…!

ಸೀದಾ ಮನೆಗೆ ಬಂದ ನಾನು ನಡೆದ ಘಟನೆಯನ್ನೆಲ್ಲಾ ನನ್ನ ಮಗನ ಬಳಿ ಹೇಳಿಕೊಂಡೆ..

ಬರ್ತ್ ಡೇ ದಿನ ನನ್ನ ಜೊತೆ ಸ್ವಿಮ್ ಮಾಡಲು ಬರ್ತೀರಾ: ಕ್ರಿಸ್ ಗೇಲ್..!

ಈ ಪ್ರಾಧ್ಯಾಪಕರ ವಯಸ್ಸು 55.. ಆದ್ರೆ ಅವರು ಪಡೆದಿರುವ ಪದವಿಗಳ ಸಂಖ್ಯೆ ಎಷ್ಟು ಗೊತ್ತಾ…?

ಗಣಪತಿ ವಿಸರ್ಜನಾ ಸಮಯದ ದುರಂತದಲ್ಲಿ 12 ಮಂದಿ ಕಣ್ಣೆದುರೇ ಮುಳುಗಿದ ಹೃದಯವಿದ್ರಾವಕ ವಿಡಿಯೋ…

Share This Article