No menu items!
27 C
Munich
Saturday, May 30, 2026

ಕಾಂಗ್ರೆಸ್ ನಾಯಕರ ಕುತಂತ್ರದ ರಾಜಕಾರಣದಿಂದ ಜನ ಬೇಸತ್ತಿದ್ದಾರೆ !

Must read

ಶಿವಮೊಗ್ಗ: ದಲಿತ ನಾಯಕನೊಬ್ಬನನ್ನು ಮುಖ್ಯಮಂತ್ರಿ ಮಾಡಲು ಅವರಿಗೆ ಅಡ್ಡಿಯಾಗಿದ್ದಾದರೂ ಏನು? ಅವರ ಕೈಯಲ್ಲೇ ಅಧಿಕಾರವಿತ್ತು ಮಾಡಬಹುದಿತ್ತಲ್ಲ? ಎಂದು ಬಿಜೆಪಿ ಹಿರಿಯ ನಾಯಕ ಕೆಎಸ್ ಈಶ್ವರಪ್ಪ ಹೇಳಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕಾಂಗ್ರೆಸ್ ನಾಯಕರ ಕುತಂತ್ರದ ರಾಜಕಾರಣದಿಂದ ಜನ ಬೇಸತ್ತಿದ್ದಾರೆ, ದಲಿತ ನಾಯಕನೊಬ್ಬನನ್ನು ಮುಖ್ಯಮಂತ್ರಿ ಮಾಡಲು ಅವರಿಗೆ ಅಡ್ಡಿಯಾಗಿದ್ದಾದರೂ ಏನು? ಅವರ ಕೈಯಲ್ಲೇ ಅಧಿಕಾರವಿತ್ತು ಮಾಡಬಹುದಿತ್ತಲ್ಲ? ಸ್ವಾತಂತ್ರ್ಯ ಬಂದಾಗಿನಿಂದ ದಲಿತ ಮುಖ್ಯಮಂತ್ರಿ ಅನ್ನುತ್ತಾ ಆ ಸಮುದಾಯದ ಜನರಿಗೆ ಬರೀ ಮೋಸ ಮಾಡುತ್ತಾ ಬಂದಿದ್ದಾರೆ ಎಂದು ಈಶ್ವರಪ್ಪ ಹೇಳಿದರು. ಅಸಲು ವಿಷಯವೇನೆಂದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸುಮ್ಮನಿದ್ದ ಡಿಕೆ ಶಿವಕುಮಾರ್ ಈಗ ಮತ್ತೆ ತಾನು ಮುಖ್ಯಮಂತ್ರಿಯಾಗಬೇಕೆನ್ನುವ ಆಸೆ ವ್ಯಕ್ತಪಡಿಸುತ್ತಿದ್ದಾರೆ. ಅವರನ್ನು ಸುಮ್ಮನಾಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತ ಮತ್ತು ಸಚಿವ ಹೆಚ್ ಸಿ ಮಹದೇವಪ್ಪರನ್ನು ಛೂ ಬಿಟ್ಟಿದ್ದಾರೆ ಎಂದು ಈಶ್ವರಪ್ಪ ಹೇಳಿದರು.

- Advertisement -spot_img

More articles

- Advertisement -spot_img

Latest article