ಕನ್ನಡ ನೆಲ, ಜಲದ ವಿಷಯ ಯಾರೇ ಮಾತನಾಡಿದರೂ ಸಹಿಸೋಕೆ ಆಗಲ್ಲ: ಶಿವರಾಜ್ ತಂಗಡಗಿ
ಬೆಂಗಳೂರು: ಕನ್ನಡ ನೆಲ, ಜಲದ ವಿಷಯ ಯಾರೇ ಮಾತನಾಡಿದರೂ ಸಹಿಸೋಕೆ ಆಗಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು, ಕಮಲ್ ಹಾಸನ್ ಮಾತಾಡಿದ್ದು ತಪ್ಪು. ಕನ್ನಡ ನೆಲ, ಜಲದ ವಿಷಯ ಯಾರೇ ಮಾತನಾಡಿದರೂ ಸಹಿಸೋಕೆ ಆಗಲ್ಲ.
ಕಮಲ್ ಹಾಸನ್ ತಕ್ಷಣ ರಾಜ್ಯದ ಜನರ ಕ್ಷಮೆ ಕೇಳಬೇಕು. ಕನ್ನಡಿಗರ ಕ್ಷಮೆ ಕೇಳಬೇಕು. ಕಮಲ್ ಹಾಸನ್ ಕ್ಷಮೆ ಕೇಳದೇ ಹೋದರೆ ನಾನೇ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪತ್ರ ಬರೆದು ಅವರಿಗೆ ಮತ್ತು ಅವರ ಚಿತ್ರಕ್ಕೆ ನಿಷೇಧ ಹಾಕಬೇಕು ಎಂದು ಆಗ್ರಹ ಮಾಡುತ್ತೇನೆ ಎಂದು ಹೇಳಿದ್ದಾರೆ.