ಕಾಂಗ್ರೆಸ್ ನಲ್ಲಿ ಬರ್ತ್ ಅಂಡ್ ಡೆತ್ ಸರ್ಟಿಫಿಕೇಟ್ ಇದ್ದರೆ ಅವರು ಪ್ರಧಾನಿ ಹಾಗೂ ಪಕ್ಷದ ಅಧ್ಯಕ್ಷರಾಗಬಹುದು ಎಂದು ನಟಿ, ವಿಧಾನಪರಿಷತ್ ಸದಸ್ಯೆ ತಾರಾ ಹೇಳಿದ್ದಾರೆ…!
ಬೆಳಗಾವಿಯ ಮಿಲೇನಿಯನ್ ಗಾರ್ಡನ್ ನಲ್ಲಿ ಎಬಿವಿಪಿ ಹಮ್ಮಿಕೊಂಡಿದ್ದ ‘ರಂಗ್ ದೇ ಬಸಂತಿ ಕಾರ್ಯಕ್ರಮದಲ್ಲಿ ಮಾತಾಡಿದ ಅವರು, ನೆಹರು ಅವರಿಂದ ಡೆತ್ ಸರ್ಟಿಫಿಕೇಟ್ ಪಡೆದು ಇಂದಿರಾಗಾಂಧಿ ಪ್ರಧಾನಿಯಾಗಿದ್ದರು.ಇಂದಿರಾಗಾಂಧಿ ಅವರ ಡೆತ್ ಸರ್ಟಿಫಿಕೇಟ್ ಪಡೆದು ರಾಜೀವ್ ಗಾಂಧಿ ಪ್ರಧಾನಿಯಾದರು. ಇವರ ಡೆತ್ ಸರ್ಟಿಫಿಕೇಟ್ ಪಡೆದ ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾದರು. ಇವರ ಬರ್ತ್ ಸರ್ಟಿಫಿಕೇಟ್ ಪಡೆದಿರುವ ರಾಹುಲ್ ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಬಿಜೆಪಿಯಲ್ಲಿ ಈ ಸಂಸ್ಕೃತಿ ಇಲ್ಲ.ಸಾಮಾನ್ಯ ಕಾರ್ಯಕರ್ತನೂ ಪ್ರಧಾನಿ ಆಗಬಹುದು ಎಂದರು.