ಆದೇಶ ಮೇರೆಗೆ ಸಿದ್ದು ಭೇಟಿ ಮಾಡಿದ್ದೇವೆ

Date:

ಬೆಂಗಳೂರು : ವರಿಷ್ಠರ ಆದೇಶ ಮೇರೆಗೆ ಸಿದ್ದು ಭೇಟಿ ಮಾಡಿದ್ದೇವೆ ಎಂದು ಜೆಡಿಎಸ್ ಮುಖಂಡ ಶರವಣ ಹೇಳಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶುಕ್ರವಾರ ನಾಮಪತ್ರ ವಾಪಸ್​ಗೆ ಅಂತಿಮ ದಿನ ವೈಯುಕ್ತಿಕವಾಗಿ ಏನೇ ಇರಲಿ. ಜಾತ್ಯಾತೀತವಾಗಿ ನಾವು ಜೊತೆಯಾಗಿರಬೇಕೆಂದಿದ್ದೇವೆ. ಇನ್ನೂ ಎರಡು ದಿನ ಇದೆ. ಹಾಗಾಗಿ ನೊಡೋಣ ಎಂದು ಹೇಳಿದ್ದಾರೆ. ಯಾರು ಯಾರಿಗೂ ದಾರಿ ತಪ್ಪಿಸಲ್ಲ. ದೇವೇಗೌಡರು, ಸಿದ್ರಾಮಣ್ಣ ರಾಜಕಾರಣಿಗಳೇ. ನಮ್ಮ‌ವರಿಷ್ಠರು ಮಾತನಾಡ್ತಾರೆ. ನಮ್ಮ ಪಕ್ಷದವರು ಯಾರೂ ಭೇಟಿ ಮಾಡಿರಲಿಲ್ಲ. ಹಾಗಾಗಿ ಇಂದು ಭೇಟಿ ಮಾಡಿದ್ದೇವೆ. ಟೀಕೆ ಸಂಧಾನ ಅಲ್ಲವೇ ಅಲ್ಲ. ಪರಿಸ್ಥಿತಿಯಲ್ಲಿ ಜೊತೆಯಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ ಎಂದರು. ಕಾಂಗ್ರೆಸ್​ಗೆ ಸಪೋರ್ಟ್ ಮಾಡಬಹುದಲ್ಲ ಎಂಬ ಪ್ರಶ್ನೆಗೆ ಉತ್ತರಿಸಿ, ನಮ್ಮ ಕಿತ್ತಾಟದಿಂದ ಅವರಿಗೆ ಅನುಕೂಲವಾಗಲಿದೆ. ನಮ್ಮದು 13 ಸದಸ್ಯರಿರೋದು. ಅವರಿಗೆ 24 ಸದಸ್ಯರು ಮಾತ್ರ ಇದ್ದಾರೆ. ಹಾಗಾಗಿ, ನಮಗೆ ಬೆಂಬಲ ಕೊಡಿ ಎಂದು ಹೇಳಿದ್ದೇವೆ. ಕುಮಾರಸ್ವಾಮಿಗೆ ಮಾಹಿತಿ ಕೊಡ್ತೇವೆ. ದೇವೇಗೌಡರೇ ನಮ್ಮನ್ನ ಕಳಿಸಿದ್ದು. ಕುಮಾರಸ್ವಾಮಿ ನಮ್ಮ ಪಕ್ಷದ ನಾಯಕರು. ಅವರ ಗಮನಕ್ಕೆ ತಂದೇ ನಾವು ಬಂದಿದ್ದು ಎಂದರು.

Share post:

Subscribe

spot_imgspot_img

Popular

More like this
Related

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್

ನಿಷ್ಠೆಯಿಂದ ಕೆಲಸ ಮಾಡಿದರೆ ಅಧಿಕಾರ ನಿಮ್ಮನ್ನು ಹುಡುಕಿಕೊಂಡು ಬರುತ್ತದೆ: ಲಕ್ಷ್ಮೀ ಹೆಬ್ಬಾಳಕರ್ ಬೆಂಗಳೂರು:...

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ ನಾರಾಯಣಸ್ವಾಮಿ ಆಗ್ರಹ

ಅಂಬೇಡ್ಕರ್ ಫೋಟೋಗೆ ಅವಮಾನ ಆರೋಪ: ಬಾನು ಮುಷ್ತಾಕ್ ವಿರುದ್ಧ ಕ್ರಮಕ್ಕೆ ಛಲವಾದಿ...

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ, ವಿಮಾನ ಹಾರಾಟ ತಾತ್ಕಾಲಿಕ ಸ್ಥಗಿತ

ದುಬೈ ವಿಮಾನ ನಿಲ್ದಾಣದ ಬಳಿ ಡ್ರೋನ್ ದಾಳಿ: ಇಂಧನ ಟ್ಯಾಂಕ್‌ಗೆ ಬೆಂಕಿ,...

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ

ಎಳೆಯ ಮಕ್ಕಳಿಗೆ ಡ್ರ್ಯಾಗನ್ ಫ್ರೂಟ್ ನೀಡಬಹುದೇ? ಇಲ್ಲಿದೆ ಮಾಹಿತಿ ಮಕ್ಕಳು ಆರೋಗ್ಯವಾಗಿಯೂ ಸದೃಢವಾಗಿಯೂ...