ಸಿಲಿಕಾನ್ ಸಿಟಿ ಬೆಂಗಳೂರು ಕುರಿತು ಸರ್ಕಾರದ ಘೋಷಣೆಗಳು ಸಂಪೂರ್ಣ ಭೋಗಸ್ ಎನ್ನುವುದನ್ನು ಈ ಮಹಾಮಳೆ ಬಯಲು ಮಾಡಿದೆ ಎಂದು ಪರಿಷತ್ ಸದಸ್ಯ ಟಿ. ಎ. ಶರವಣ ಆಕ್ರೋಶ ಹೊರಹಾಕಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಚುನಾಯಿತ ಪ್ರತಿನಿಧಿ ಇಲ್ಲದ ಮಹಾನಗರ ಪಾಲಿಕೆ, ಮಳೆಯಲ್ಲಿ ಬಡವರು, ಮಧ್ಯಮ ವರ್ಗದ ಬದುಕು ಕೊಚ್ಚಿ ಹೋಗುತ್ತಿದ್ದರೂ ಕುಂಭಕರ್ಣ ನಿದ್ದೆಗೆ ಶರಣಾದ ಆಧಿಕಾರಿಗಳು, ಇದು ಬೆಂಗಳೂರಿನ ದುರವಸ್ಥೆ ಅಲ್ಲ ಮಹಾ ದುರಂತ. ಮಳೆಯಿಂದ ಎಷ್ಟು ಹಾನಿ ಆಗಿದೆ, ಎಷ್ಟು ಜನರ ಬದುಕು ತತ್ತರವಾಗಿದೆ. ಸರಕಾರ ಕೊಟ್ಟ ನೆರವೇನು? ಇದಕ್ಕೆ ಸರಕಾರದ ಬಳಿ ಉತ್ತರ ಇದೆಯೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ. ಬೆಂಗಳೂರು ಉಸ್ತುವಾರಿ ಮುಖ್ಯಮಂತ್ರಿ ಬಳಿಯೇ ಇದೆ. ಖುದ್ದು ಮುಖ್ಯಮಂತ್ರಿ ಬೊಮ್ಮಾಯಿ ಕೈಗೊಂಡ ಕ್ರಮಗಳೇನು?
ಬೆಂಗಳೂರಿನ ಈ ಮಳೆ ದುರಂತದ ಹಿಂದೆ ದೊಡ್ಡ ಕರ್ಮ ಕಾಂಡವೆ ಇದೆ. ಬಿಬಿಎಂಪಿ ಕಳಪೆ ಮತ್ತು ಭೋಗಸ್ ಕಾಮಗಾರಿಯಲ್ಲಿ ಜನರ ತೆರಿಗೆ ಹಣ ಭ್ರಷ್ಟರ ಪಾಲಾದರೆ, ಭೂಗಳ್ಳರು, ಅಕ್ರಮ ಲೇಔಟ್ ಕಳ್ಳರು, ಕೆರೆ ಕಬಳಿಕೆ ಕೇಡಿಗಳ ಪಡೆ ಬೆಂಗಳೂರಿನ ಈ ದುರವಸ್ಥೆಗೆ ಕಾರಣ ಎಂದು ಶರವಣ ಕಿಡಿಕಾರಿದ್ದಾರೆ. ಮಳೆ ಬಂದಾಗ ಮುಖ್ಯಮಂತ್ರಿ ಸಿಟಿ ರೌoಡ್ಸ್ ಮಾಡುವುದು ಒಂದು ಸಾಂಪ್ರದಾಯಿಕ ನಾಟಕ ಅಥವಾ ಪ್ರಚಾರಕ್ಕೆ ನಡೆಸುವ ಪ್ರಹಸನ ಅಲ್ಲದೇ ಬೇರೇನೂ ಅಲ್ಲ. ಬಂದ ಪುಟ್ಟ ಹೋದ ಪುಟ್ಟ ಎನ್ನುವಂತೆ ನಡೆದುಹೋಗುವ ಈ ಭೇಟಿ ಅರ್ಥವನ್ನೇ ಕಳೆದುಕೊಂಡಿದೆ. ಪದೇ ಪದೇ ಅದೆ ಸ್ಥಿತಿ ಪುನರಾ ವರ್ತನೆ ಆಗಿದೆ. ಎಲ್ಲರು ಸೇರಿ ಬೆಂಗಳೂರು ಉಳಿಸದಿದ್ದರೆ ಅಪಾಯ ಖಂಡಿತ ಎಂದು ಶರವಣ ಬೇಸರ ಹೊರ ಹಾಕಿದ್ದಾರೆ.
ಸರ್ಕಾರದ ಘೋಷಣೆಗಳು ಸಂಪೂರ್ಣ ಭೋಗಸ್
Date: