ಏಷ್ಯಾಕಪ್ ನ ತನ್ನ ಮೊದಲ ಪಂದ್ಯದಲ್ಲಿ ಭಾರತ ಇಂದು ಹಾಂಕಾಂಗ್ ಅನ್ನು ಎದುರಿಸಲಿದೆ.
ದುಬೈ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯ ದಲ್ಲಿ ಹಾಂಕಾಂಗ್ ವಿರುದ್ಧ ದೊಡ್ಡ ಅಂತರದ ಗೆಲುವು ಪಡೆದು ನಾಳೆ ಪಾಕಿಸ್ತಾನ ವಿರುದ್ಧ ನಡೆಯಲಿರುವ ಹೈವೋಲ್ಟೇಜ್ ಪಂದ್ಯಕ್ಕೆ ಆತ್ಮಬಲ ಹೆಚ್ಚಿಸಿಕೊಳ್ಳಲು ಭಾರತ ಸಿದ್ಧವಾಗಿದೆ.
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಕ್ಕೆ ಇದು ನಾಳಿನ ಪಂದ್ಯದ ಪೂರ್ವಭಾವಿ ಸಿದ್ಧತೆಯ ಪಂದ್ಯ ಆಗಿದೆಯಷ್ಟೇ.
ರೋಹಿತ್ ಪಡೆಯ 11 ಮಂದಿ ಆಟಗಾರರ ಸಾಂಭಾವ್ಯ ತಂಡ ಇಂತಿದೆ.
1. ರೋಹಿತ್ ಶರ್ಮ.2. ಶಿಖರ್ ಧವನ್ .3. ಕೆಎಲ್ ರಾಹುಲ್.4. ಅಂಬಟಿ ರಾಯುಡು/ಮನೀಶ್ ಪಾಂಡೆ.5. ಎಂಎಸ್ ಧೋನಿ.6. ಕೇದಾರ್ ಜಾಧವ್/ ದಿನೇಶ್ ಕಾರ್ತಿಕ್.7. ಹಾರ್ದಿಕ್ ಪಾಂಡ್ಯ.8. ಭುವನೇಶ್ವರ್ ಕುಮಾರ್.9. ಕುಲದೀಪ್ ಯಾದವ್.10. ಯಜುವೇಂದ್ರ ಚಾಹಲ್.11. ಜಸ್ ಪ್ರೀತ್ ಬೂಮ್ರಾ/ ಖಲೀಲ್ ಅಹ್ಮದ್.