ಹೆಂಡ್ತಿ ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲ ಅಂತಾದ್ರೆ ಗಂಡ ಎನಿಸಿಕೊಂಡವ ಏನ್ ಮಾಡಬಹುದು? ಹೊಸದಾಗಿ ಮದ್ವೆ ಆಗಿದ್ದಾದ್ರೆ ಚೆನ್ನಾಗಿ ಇರ್ದೇ ಇದ್ರೂ ಚೆನ್ನಾಗಿದೆ ಅಂತ ಹೇಳಿ, ಮಡದಿಯನ್ನು ಖುಷಿ ಪಡಿಸಬಹುದು..! ಇಲ್ಲವೇ ಒಂದಿಷ್ಟು ಬೈದು ಸುಮ್ಮನಾಗ ಬಹುದು…! ಆದ್ರೆ ಇಲ್ಲೊಬ್ಬ ಭೂಪ ಏನ್ ಮಾಡಿದ್ದಾನೆ ಗೊತ್ತಾ..?
ಹೆಂಡ್ತಿ ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲ ಅಂತ ಆಕೆಯನ್ನು ಮನೆಯಿಂದ ಹೊರಹಾಕಿದ್ದಾನೆ ತೆಲಂಗಾಣದಲ್ಲೊಬ್ಬ ಪತಿರಾಯ…! ತೆಲಂಗಾಣದ ವಾರಂಗಲ್‍ನ ಕಂಪ್ಯೂಟರ್ ಇಂಜಿನಿಯರ್ ರಾಜೇಂದ್ರ ಪ್ರಸಾದ್ ಬಿರಿಯಾನಿ ಚೆನ್ನಾಗಿ ಮಾಡ್ಲಿಲ್ಲ ಅಂತ ತನ್ನ ಹೆಂಡ್ತಿ ಮಾನಸ ಅವರನ್ನು ಹೊರಹಾಕಿದ್ದಾನಂತೆ..!
ಕಳೆದ ವರ್ಷ ನವೆಂಬರ್‍ನಲ್ಲಿ ಇವರ ಮದುವೆ ಆಗಿತ್ತಂತೆ. ಮದ್ಯವ್ಯಸನಿ ಆಗಿರೋ ರಾಜೇಂದ್ರ ಜನವರಿಯಲ್ಲೊಮ್ಮೆ ಅಡುಗೆ ಮಾಡಕ್ಕೆ ಬರಲ್ಲ ಅಂತ ಮನೆಯಿಂದ 25 ವರ್ಷದ ಮಾನಸ ಅವರನ್ನು ಹೊರಹಾಕಿದ್ದರಂತೆ..! ಈ ಬಾರಿಯೂ ಕುಡಿದು ಬಂದು ಬಿರಿಯಾನಿ ಮಾಡೋಕೆ ಹೇಳಿದ್ನಂತೆ..! ಬಿರಿಯಾನಿ ತಿಂದು ಚೆನ್ನಾಗಿಲ್ಲ ಅಂತ ಮನೆಯಿಂದ ಹೊರಹಾಕಿದ್ದಾನೆ ಅಂತ ಮಾನಸ ಆರೋಪಿಸಿದ್ದಾರೆ. ಅಷ್ಟೇಅಲ್ಲದೆ ಪತಿ ಮನೆಯವರಿಂದ ವರದಕ್ಷಿಣೆ ಕಿರುಕುಳ ಸಹ ಇದೆಯಂತೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿರೋ ಮಾನಸ ವಾಪಸ್ಸು ಮನೆಗೆ ಸೇರಿಸಿಕೊಳ್ಳುವಂತೆ ಪತಿಯ ಮನೆಯ ಮುಂದೆ ಪ್ರತಿಭಟನೆಯನ್ನೂ ಮಾಡಿದ್ದಾರೆಂದು ಹೇಳಲಾಗಿದೆ.